bhadravati court news | ಭದ್ರಾವತಿ | ಖಾರದ ಪುಡಿ ಎರಚಿ ಹಲ್ಲೆ ಪ್ರಕರಣ – ನಾಲ್ವರಿಗೆ ಜೈಲು ಶಿಕ್ಷೆ!
ಭದ್ರಾವತಿ (shivamogga), ನವೆಂಬರ್ 1: ಹಲ್ಲೆ ಹಾಗೂ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರಿಗೆ 2 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ, ಭದ್ರಾವತಿಯ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಭದ್ರಾವತಿ ತಾಲೂಕು ಆನವೇರಿ ಗ್ರಾಮದ ಕುರುಬರ ಬೀದಿಯ ನಿವಾಸಿಗಳಾದ ರಾಜಪ್ಪ ಈ ಬಿ (51), ಭರತ್ ಈ ಆರ್ (20), ರಂಗನಾಥ್ ಯಾನೆ ರಂಗೇಶ್ (34) ಹಾಗೂ ಹನುಮಂತಪ್ಪ (53) ಜೈಲು ಶಿಕ್ಷೆಗೆ ಗುರಿಯಾದವರೆಂದು ಗುರುತಿಸಲಾಗಿದೆ.
ಜೈಲು ಶಿಕ್ಷೆಯ ಜೊತೆಗೆ 77,000 ರೂ. ದಂಡ ವಿಧಿಸಲಾಗಿದೆ. ತಪ್ಪಿದ್ದಲ್ಲಿ ಹೆಚ್ಚುವರಿಯಾಗಿ 1 ತಿಂಗಳ ಸಾದಾ ಜೈಲು ಶಿಕ್ಷೆ ಸಜೆ ಅನುಭವಿಸುವಂತೆ ಹಾಗೂ ದಂಡ ಮೊತ್ತದಲ್ಲಿ 2 ಲಕ್ಷ ರೂ.ಗಳನ್ನು ನೊಂದವರಿಗೆ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.
ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು 30/10/2025 ರಂದು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ರತ್ನಮ್ಮ ಪಿ ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ : 13-11-2022 ರಂದು ಭದ್ರಾವತಿಯ ಆನವೇರಿ ಗ್ರಾಮದ ತಿಮ್ಮಪ್ಪರವರೊಂದಿಗೆ ಆಸ್ತಿಯ ವಿಚಾರವಾಗಿ ಪ್ರಸ್ತುತ ಶಿಕ್ಷೆಗೊಳಗಾದ ನಾಲ್ವರು ವ್ಯಕ್ತಿಗಳು ಜಗಳ ಮಾಡಿದ್ದರು. ತಿಮ್ಮಪ್ಪರ ಮೇಲೆ ಖಾರದ ಪುಡಿ ಎರಚಿ ಹಲ್ಲೆ ಮಾಡಲಾಗಿತ್ತು. ಜಾತಿ ನಿಂದನೆಯ ಆರೋವಿತ್ತು.
ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಐಪಿಸಿಯ ವಿವಿಧ ಕಲಂಗಳು ಸೇರಿದಂತೆ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅಂದಿನ ಎಎಸ್ಪಿ ಜೀತೇಂದ್ರ ಕುಮಾರ ದಯಾಮರವರು ಪ್ರಕರಣದ ತನಿಖೆ ನಡೆಸಿದ್ದರು.
Bhadravati (shivamogga), November 1: The 4th Additional District and Sessions Court of Bhadravati has sentenced four people to 2 years rigorous imprisonment in connection with an assault and caste abuse case.
