shimoga kannada rajyotsava news | ಶಿವಮೊಗ್ಗ : ಸೋಮಿನಕೊಪ್ಪದ ಎಂಎಎಂಇಎಸ್ ಸರ್ಕಾರಿ ಶಾಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ
ಶಿವಮೊಗ್ಗ (shivamogga), ನವೆಂಬರ್ 1 : ಶಿವಮೊಗ್ಗ ನಗರದ ಸೋಮಿನಕೊಪ್ಪ ಬಡಾವಣೆಯಲ್ಲಿರುವ ಎಂಎಎಂಇಎಸ್ (ಮೌಲಾನ ಆಜಾದ್ ಆಂಗ್ಲ ಮಾದರಿ) ಸರ್ಕಾರಿ ಶಾಲೆಯಲ್ಲಿ ನವೆಂಬರ್ 1 ರಂದು, ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಅತ್ಯಂತ ಸಡಗರ – ಸಂಭ್ರಮದಿಂದ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಶೋಷಿತ ಸಮುದಾಯಗಳ ವೇದಿಕೆ ಜಿಲ್ಲಾಧ್ಯಕ್ಷ ಮಕ್ಬುಲ್ ಅಹಮದ್ ಅವರು ಭಾಗವಹಿಸಿದ್ದರು. ‘ಕನ್ನಡ ಭಾಷೆಯು ತನ್ನದೆ ಆದ ಮಹತ್ವ ಹೊಂದಿದ್ದು, ಇದನ್ನು ಉಳಿಸಿ – ಬೆಳೆಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಅಭಿಪ್ರಾಯಪಟ್ಟರು.
ಮತ್ತೋರ್ವ ಅತಿಥಿ ಪತ್ರಕರ್ತ ಬಿ ರೇಣುಕೇಶ್ ಅವರು ಮಾತನಾಡಿ, ‘ಕನ್ನಡ ಭಾಷೆ ಕರ್ನಾಟಕದ ಸರ್ವರ ಭಾಷೆಯಾಗಿದೆ. ಜಾತಿ, ಧರ್ಮಗಳನ್ನು ಮೀರಿದ್ದಾಗಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಹಲವು ಮಹನೀಯರು ಕರ್ನಾಟಕದ ಏಳ್ಗೆಗೆ ಶ್ರಮಿಸಿದ್ದಾರೆ. ನಾಡಿನ ಶ್ರೇಯೋಭಿವೃದ್ದಿಗೆ ನಾವೆಲ್ಲರು ಶ್ರಮಿಸೋಣ’ ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಶಾಲೆಯ ಪ್ರಾಂಶುಪಾಲ ಕಿರಣ್ ಎಂ ಜವಾಜಿ ಅವರು ಮಾತನಾಡಿ, ‘ಕನ್ನಡ ಭಾಷೆ ಹಲವು ವೈವಿಧ್ಯತೆ ಒಳಗೊಂಡಿದೆ. ಸರ್ವರ ಪ್ರೀತಿಯ ಭಾಷೆಯಾಗಿದೆ. ನಾವೆಲ್ಲರೂ ಕನ್ನಡಾಭಿಮಾನ ಬೆಳೆಸಿಕೊಳ್ಳೊಣ’ ಎಂದು ತಿಳಿಸಿದರು.
ಇದಕ್ಕು ಮುನ್ನ ಕಾರ್ಯಕ್ರಮದ ಮೇಲ್ವಿಚಾರಣೆ ವಹಿಸಿದ್ದ, ಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ನೀಲಕಂಠಪ್ಪ ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ‘ಕರ್ನಾಟಕದ ಏಕೀಕಕರಣಕ್ಕೆ ಹಲವು ಮಹನೀಯರು ಅವಿರತವಾಗಿ ಹೋರಾಟ ನಡೆಸಿದ್ದಾರೆ. ಕನ್ನಡ ನಾಡು, ನುಡಿ, ಜಲ, ಗಡಿ ಸಂರಕ್ಷಣೆಗಾಗಿ ಶ್ರಮಿಸಿದ್ದಾರೆ. ಅವರೆಲ್ಲರನ್ನು ನಾವು ಸದಾ ಸ್ಮರಿಸಬೇಕಾಗಿದೆ. ಕರ್ನಾಟಕ ಏಕೀಕರಣದ ಇತಿಹಾಸ ಅರಿತುಕೊಳ್ಳಬೇಕಾಗಿದೆ’ ಎಂದು ಹೇಳಿದರು.
ಗಣಿತ ಶಿಕ್ಷಕರಾದ ಸಂತೋಷ್ ಪಿ ಅವರು, ಕನ್ನಡ ನಾಡು – ನುಡಿಯ ಮಹತ್ವ ಹಾಗೂ ಸಾಹಿತ್ಯ ರಚನೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಸಮಾರಂಭದಲ್ಲಿ ಮೋಜಪ್ಪನ ಹೊಸೂರು ಗ್ರಾಮದ ಮುಖಂಡ ಹಬೀಬುಲ್ಲಾ, ಶಾಲೆಯ ಇತಿಹಾಸ ಶಿಕ್ಷಕರಾದ ನಾಗರಾಜ್, ಉರ್ದು ಭಾಷೆ ಶಿಕ್ಷಕರಾದ ಜಹೀರ್ ಅಬ್ಬಾಸ್, ವಿಜ್ಞಾನ ಶಿಕ್ಷಕಿ ರುಮ್ಹಾನಾ ತಾಜ್, ಸಿಬ್ಬಂದಿ ರೇಖಾ ಪಿ,
ಕಾಲೇಜು ವಿಭಾಗದ ಉಪನ್ಯಾಸಕರಾದ ಆಯೇಷಾ ತಬುಸುಮ್ ನವೀದ್, ರೇಣುಕಾ, ಆಯೇಷಾ ತಬುಸುಮ್, ಪೂಜಾ ಎಂ, ಸಲ್ಮಾ ಆಫ್ರೀನ್, ಪವಿತ್ರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಬಹುಮಾನ ವಿತರಣೆ : ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಿಸ್ಬಾ ಫರ್ಹಿನ್, ಮಿಸ್ಬಾ ಅಂಜುಂ, ಉಮ್ಮೆಹಾನಿ, ಫರ್ಹಿನ್, ತಸ್ಮೀಯಾರವರಿಗೆ ಬಹುಮಾನತ ವಿತರಣೆ ಮಾಡಲಾಯಿತು.
ಹೈಸ್ಕೂಲ್ ನ ತಸ್ಮೀಯಾ ಫಾತಿಮಾ ತಂಡ ಹಾಗೂ ಪಿಯು ವಿಭಾಗದ ಸಫೀನಾ ತಂಡ ಅವರು ಗೀತಾ ಗಾಯನ ನಡೆಸಿಕೊಟ್ಟರು. ವಿದ್ಯಾರ್ಥಿನಿ ನೂರೈನ್ ನಿರೂಪಿಸಿದರು. ಉಮ್ಮೆಹಾನಿ ಸ್ವಾಗತಿಸಿದರು. ಸಫೀನಾ ವಂದಿಸಿದರು.
Shivamogga, November 1: On November 1, the Kannada Rajyotsava ceremony was celebrated with great enthusiasm at MAEMS (Maulana Azad English Model) Government School in Sominakoppa area of Shivamogga city.
