Shivamogga - GS'W Company's sale of fake roofing sheets: Case registered! ಶಿವಮೊಗ್ಗ - ಜಿಎಸ್’ಡಬ್ಲ್ಯೂ ಕಂಪನಿಯ ನಕಲಿ ರೂಪಿಂಗ್ ಶೀಟ್ ಮಾರಾಟ : ಕೇಸ್ ದಾಖಲು!

shimoga news | ಶಿವಮೊಗ್ಗ – ಜಿಎಸ್’ಡಬ್ಲ್ಯೂ ಕಂಪನಿಯ ನಕಲಿ ರೂಪಿಂಗ್ ಶೀಟ್ ಮಾರಾಟ : ಕೇಸ್ ದಾಖಲು!

ಶಿವಮೊಗ್ಗ (shivamogga), ನವೆಂಬರ್ 19: ಬೇರೆ ಕಂಪೆನಿಯ ಕಬ್ಬಿಣದ ಶೀಟ್ ಗಳಿಗೆ ಜಿಎಸ್’ಡಬ್ಲ್ಯೂ ಕಂಪನಿಯ ಶೀಟ್ ಎಂದು ನಕಲಿ ಪ್ರಿಂಟ್ ಹಾಕಿಸಿ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ, ಶೀಟ್ ಮಾರಾಟ ಅಂಗಡಿಯ ಮಾಲೀಕನ ವಿರುದ್ದ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗದ ಹೊರವಲಯ ಗುರುಪುರದಲ್ಲಿರುವ ಕಬ್ಬಿಣದ ಶೀಟ್ ಟ್ರೇಡಿಂಗ್ ಮಾಲೀಕನ ವಿರುದ್ದ ದೂರು ದಾಖಲಾಗಿದೆ. ಜಿಎಸ್’ಡಬ್ಲ್ಯೂ ಎಂದು ಪ್ರಿಂಟ್ ಮಾಡಲು ಬಳಸುತ್ತಿದ್ದ ಪ್ರಿಂಟರ್ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಇಲಾಖೆಯು ನವೆಂಬರ್ 19 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಏನೀದು ಪ್ರಕರಣ? : ಶಿವಮೊಗ್ಗದ ಜಯನಗರ 2 ನೇ ಕ್ರಾಸ್ ನಿವಾಸಿ ಪ್ರದೀಪ್ ಎಂಬುವರು ಈ ಕುರಿತಂತೆ ಪೊಲೀಸರಿಗೆ ದೂರು ನೀಡಿದ್ದರು. ಎಂಜಿನಿಯರಿಂಗ್ ವರ್ಕ್ಸ್ ನ ವ್ಯಕ್ತಿಯೋರ್ವರು, ಬೇರೆ ಕಂಪೆನಿಯ ಕಬ್ಬಿಣದ ಶೀಟ್ ಗಳಿಗೆ ಜಿಎಸ್’ಡಬ್ಲ್ಯೂ ಕಂಪೆನಿಯ ಶೀಟ್ ಎಂದು ನಕಲಿ ಪ್ರಿಂಟ್ ಹಾಕಿಸಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಈ ಕುರಿತಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ನ ವಿವಿಧ ಕಲಂಗಳು ಹಾಗೂ ಕಾಪಿರೈಟ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಎಂಜಿನಿಯರಿಂಗ್ ವರ್ಕ್ಸ್ ನ ವ್ಯಕ್ತಿಯು, ಶಿಕ್ಷಣ ಸಂಸ್ಥೆಯೊಂದರಲ್ಲಿ ರೂಪಿಂಗ್ ಕೆಲಸ ಮಾಡುತ್ತಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದರು.

ಈ ವೇಳೆ 20 ಅಡಿ ಉದ್ದದ 15 ಶೀಟ್ ಗಳನ್ನು ವಶಕ್ಕೆ ಪಡೆದಿದ್ದು, ಜಿಎಸ್’ಡಬ್ಲ್ಯೂ ಕಂಪೆನಿಯ ನಕಲಿ ಪ್ರಿಂಟ್ ಹಾಕಿರುವುದು ಕಂಡುಬಂದಿತ್ತು. ಸದರಿ ಶೀಟ್ ಗಳನ್ನು ಗುರುಪುರದ ಟ್ರೇಡಿಂಗ್ ನಲ್ಲಿ ಖರೀದಿಸಿದ್ದಾಗಿ ಸದರಿ ವ್ಯಕ್ತಿ ಮಾಹಿತಿ ನೀಡಿದ್ದರು.

ಇದರ ಆಧಾರದ ಮೇಲೆ ಪೊಲೀಸರು ಗುರುಪುರದ ಟ್ರೇಡಿಂಗ್ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ, ಅಕ್ರಮ ಪತ್ತೆ ಹಚ್ಚಿದ್ದರು. ಸದರಿ ಅಂಗಡಿ ಮಾಲೀಕನ ವಿರುದ್ದ ಕೇಸ್ ದಾಖಲಿಸಿದ್ದಾರೆ.

ಎಸ್ಪಿ, ಎಎಸ್ಪಿ, ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಜಯನಗರ ಠಾಣೆ ಇನ್ಸ್’ಪೆಕ್ಟರ್ ಸಿದ್ದೇಗೌಡ, ಸಬ್ ಇನ್ಸ್’ಪೆಕ್ಟರ್ ಕೆ ಎನ್ ಹಳ್ಳಿಯವರ್ ರವರು ಪ್ರಕರಣದ ತನಿಖೆ ನಡೆಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Shivamogga, November 19: A case has been registered at the Jayanagar police station in Shivamogga against the owner of a sheet sales shop on charges of selling iron sheets of another company by putting fake prints on them as sheets of the GS’W company.

What happened in the middle of the night in a lodge room in Shimoga?: Woman in critical condition – admitted to hospital! ಶಿವಮೊಗ್ಗದ ಲಾಡ್ಜ್ ರೂಂನಲ್ಲಿ ನಡುರಾತ್ರಿ ನಡೆದಿದ್ದೇನು? : ಮಹಿಳೆ ಸ್ಥಿತಿ ಗಂಭೀರ – ಆಸ್ಪತ್ರೆಗೆ ದಾಖಲು! Previous post shimoga crime news | ಶಿವಮೊಗ್ಗದ ಲಾಡ್ಜ್ ರೂಂನಲ್ಲಿ ರಾತ್ರಿ ನಡೆದಿದ್ದೇನು? : ಮಹಿಳೆ ಸ್ಥಿತಿ ಗಂಭೀರ – ಆಸ್ಪತ್ರೆಗೆ ದಾಖಲು!
Power outages in various parts of Shivamogga city on November 30th! ಶಿವಮೊಗ್ಗ ನಗರದ ವಿವಿಧೆಡೆ ನವೆಂಬರ್ 30 ರಂದು ವಿದ್ಯುತ್ ವ್ಯತ್ಯಯ! Next post shimoga | power outage | ಶಿವಮೊಗ್ಗ ನಗರದ ವಿವಿಧೆಡೆ ನವೆಂಬರ್ 21 ರಂದು ವಿದ್ಯುತ್ ವ್ಯತ್ಯಯ!