Shamanur Shivashankarappa Death : ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ವಿಧಿವಶ
ಬೆಂಗಳೂರು (bengaluru), ಡಿಸೆಂಬರ್ 14: ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಮಹಾ ಸಭೆಯ ರಾಷ್ಟ್ರೀಯ ಅಧ್ಯಕ್ಷರಾದ, ದೇಶದಲ್ಲಿಯೇ ಹಿರಿಯ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಶಾಮನೂರು ಶಿವಶಂಕರಪ್ಪ (95) ಅವರು ಡಿಸೆಂಬರ್ 14 ರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಇವರಿಗೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಸೇರಿದಂತೆ ನಾಲ್ವರು ಪುತ್ರರು ಹಾಗೂ ಮೂವರು ಪುತ್ರಿಯರಿದ್ದಾರೆ.
ನಾಳೆ ಅಂತ್ಯ ಸಂಸ್ಕಾರ : ಶ್ಯಾಮನೂರು ಶಿವಶಂಕರಪ್ಪ ಅವರು, ಕಳೆದ ಹಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದೊಂದು ತಿಂಗಳಿನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಐಸಿಯು ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ನಾಳೆ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ದಾವಣಗೆರೆಯಲ್ಲಿ ನೆರವೇರಲಿದೆ.
ಹಿರಿಯ ಶಾಸಕ : ಶಾಮನೂರು ಶಿವಶಂಕರಪ್ಪ ಅವರು 1931 ಜೂನ್ 16 ರಂದು ಶಾಮನೂರು ಕಲ್ಲಪ್ಪ – ಶಾಮನೂರು ಸಾವಿತ್ರಮ್ಮ ದಂಪತಿ ಪುತ್ರನಾಗಿ ದಾವಣಗೆರೆ ಜಿಲ್ಲೆಯಲ್ಲಿ ಜನಿಸಿದ್ದರು. ದಾವಣಗೆರೆ ಕ್ಷೇತ್ರದಿಂದ ಸತತವಾಗಿ ಗೆಲ್ಲುತ್ತಾ ಬಂದಿದ್ದ ಅವರು, 6 ಬಾರಿ ಶಾಸಕರಾಗಿದ್ದರು. ವಿಧಾನಸಭೆಯ ಅತ್ಯಂತ ಹಿರಿಯ ಸದಸ್ಯರಾಗಿದ್ದರು. ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ ದಾವಣಗೆರೆ ಉತ್ತರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ, ಪ್ರಸ್ತುತ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೊಸೆ ಪ್ರಭಾ ಮಲ್ಲಿಕಾರ್ಜುನ ಅವರು ಸಂಸದರಾಗಿದ್ದಾರೆ.
Shamanur Shivashankarappa (95), a senior Congress party MLA, national president of the All India Veerashaiva Maha Sabha, and considered the oldest MLA in the country, passed away on the evening of December 14 at a private hospital in Bengaluru.
More Stories
shimoga railway news | ಶಿವಮೊಗ್ಗ – ರಾಣೆಬೆನ್ನೂರು ರೈಲ್ವೆ ಯೋಜನೆ : ಸಿಎಂ ನೀಡಿದ ಸೂಚನೆಯೇನು?
Shivamogga – Ranebennur railway project: What is the instruction given by the CM?
ಶಿವಮೊಗ್ಗ – ರಾಣೆಬೆನ್ನೂರು ರೈಲ್ವೆ ಯೋಜನೆ : ಸಿಎಂ ನೀಡಿದ ಸೂಚನೆಯೇನು?
bengaluru news | ರಾಷ್ಟ್ರಪಿತನ ಹೆಸರನ್ನೇ ಅಳಿಸುವ ಪಿತೂರಿಯನ್ನು ಸೋಲಿಸೋಣ : ಸಿ.ಎಂ ಸಿದ್ದರಾಮಯ್ಯ ಕರೆ
Let’s defeat the conspiracy to erase the name of the Father of the Nation: CM Siddaramaiah’s call
ರಾಷ್ಟ್ರಪಿತನ ಹೆಸರನ್ನೇ ಅಳಿಸುವ ಪಿತೂರಿಯನ್ನು ಸೋಲಿಸೋಣ : ಸಿ.ಎಂ ಸಿದ್ದರಾಮಯ್ಯ ಕರೆ
bengaluru news | ಬೆಂಗಳೂರು | ತಾಂಡ, ಹಟ್ಟಿ, ಗೊಲ್ಲರಹಟ್ಟಿ ನಿವಾಸಿಗಳಿಗೆ ಸಿಹಿ ಸುದ್ದಿ : ಫೆಬ್ರವರಿ ತಿಂಗಳಲ್ಲಿ1.10 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ – ಕಂದಾಯ ಇಲಾಖೆಯ ಮಹತ್ವದ ಕ್ರಮ!
Bengaluru | Good news for residents of Thanda, Hatti Gollarahatti : Title deeds for 1.10 lakh families in February – a significant step by the Revenue Department!
ಬೆಂಗಳೂರು | ತಾಂಡ, ಹಟ್ಟಿ ಗೊಲ್ಲರಹಟ್ಟಿ ನಿವಾಸಿಗಳಿಗೆ ಸಿಹಿ ಸುದ್ದಿ : ಫೆಬ್ರವರಿ ತಿಂಗಳಲ್ಲಿ1.10 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ – ಕಂದಾಯ ಇಲಾಖೆಯ ಮಹತ್ವದ ಕ್ರಮ!
Bengaluru news | ಬೆಂಗಳೂರು | ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ತಿದ್ದುಪಡಿಗೆ ಡಿ.23 ರಂದು ಅಂತಿಮ ಅಧಿಸೂಚನೆ : ಹಲವು ಮಹತ್ವದ ಬದಲಾವಣೆ!
Final notification on December 23 for amendment of Karnataka Land Revenue Act 1964: Many important changes! ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ತಿದ್ದುಪಡಿಗೆ ಡಿ.23 ರಂದು ಅಂತಿಮ ಅಧಿಸೂಚನೆ : ಹಲವು ಮಹತ್ವದ ಬದಲಾವಣೆ!
bengaluru news | ಸೆಪ್ಟೆಂಬರ್ 13 ರಂದು ಮಹಿಳಾ ನೌಕರರ ದಿನಾಚರಣೆ ಘೋಷಣೆ : CM ಸಿದ್ದರಾಮಯ್ಯ ಭರವಸೆ
Women’s Workers’ Day to be declared on September 13: Chief Minister Siddaramaiah promises
ಸೆಪ್ಟೆಂಬರ್ 13 ರಂದು ಮಹಿಳಾ ನೌಕರರ ದಿನಾಚರಣೆ ಘೋಷಣೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ
‘ಬ್ರದರ್ಸ್ ಬ್ರೇಕ್ ಫಾಸ್ಟ್ ಮೀಟಿಂಗ್ – 2’| ‘ನಾವಿಬ್ಬರೂ ಸಹೋದರರಿದ್ದಂತೆ’ | DCM ಡಿಕೆಶಿ ನಿವಾಸದಲ್ಲಿ CM ಸಿದ್ದರಾಮಯ್ಯ ಹೇಳಿಕೆ!
‘Brothers Breakfast Meeting – 2’! : ‘We are both like brothers’ – CM Siddaramaiah’s new statement at DCM DKshi’s residence!!
‘ಬ್ರದರ್ಸ್ ಬ್ರೇಕ್ ಫಾಸ್ಟ್ ಮೀಟಿಂಗ್ – 2’! : ‘ನಾವಿಬ್ಬರೂ ಸಹೋದರರಿದ್ದಂತೆ’ – ಡಿಸಿಎಂ ಡಿಕೆಶಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಹೊಸ ಹೇಳಿಕೆ!!
