Shivamogga: Request to the Water Board Engineer to supply drinking water to the areas around Press Colony ಶಿವಮೊಗ್ಗ : ಪ್ರೆಸ್ ಕಾಲೋನಿ ಸುತ್ತಮುತ್ತಲಿನ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಸಲು ಜಲ ಮಂಡಳಿ ಎಂಜಿನಿಯರ್’ಗೆ ಮನವಿ

shimoga news | ಶಿವಮೊಗ್ಗ : ಪ್ರೆಸ್ ಕಾಲೋನಿ ಸುತ್ತಮುತ್ತಲಿನ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಸಲು ಜಲ ಮಂಡಳಿ ಎಂಜಿನಿಯರ್’ಗೆ ಮನವಿ

ಶಿವಮೊಗ್ಗ (shivamogga), ಡಿಸೆಂಬರ್ 19: ಶಿವಮೊಗ್ಗ ನಗರದ ಹೊರವಲಯ ಕೆಹೆಚ್’ಬಿ ಪ್ರೆಸ್ ಕಾಲೋನಿಗೆ ಹೊಂದಿಕೊಂಡಂತಿರುವ ಬಡಾವಣೆಗಳಿಗೆ, 24*7 ಯೋಜನೆಯಡಿ ಕುಡಿಯುವ ನೀರು ಪೂರೈಕೆ ಮಾಡುವಂತೆ ಜಲ ಮಂಡಳಿಗೆ ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಪತ್ರಕರ್ತ ಬಿ ರೇಣುಕೇಶ್ ಆಗ್ರಹಿಸಿದ್ದಾರೆ.

ಈ ಸಂಬಂಧ ಡಿಸೆಂಬರ್ 19 ರಂದು ಸಂಜೆ ಜಲ ಮಂಡಳಿ ಕಚೇರಿಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ (ಪ್ರಭಾರ) ಜೀವನ್ ಅವರಿಗೆ ಮನವಿ ಮಾಡಿದ್ದಾರೆ.

ಹಲವು ವರ್ಷಗಳ ಹೋರಾಟದ ಫಲವಾಗಿ, ಈಗಾಗಲೇ ಪಾಲಿಕೆ – ಗ್ರಾಪಂ ವ್ಯಾಪ್ತಿಯಲ್ಲಿರುವ ಪ್ರೆಸ್ ಕಾಲೋನಿಗೆ 24*7 ಯೋಜನೆಯಡಿ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಪ್ರೆಸ್ ಕಾಲೋನಿಗೆ ಹೊಂದಿಕೊಂಡಂತಿರುವ ಶ್ರೀ ಬಡಾವಣೆ, ಮಹಾಲಕ್ಷ್ಮೀ ಲೇಔಟ್, ಓಂ ಶಕ್ತಿ ಲೇಔಟ್, ಪಂಚಚಾರ್ಯ ಬಡಾವಣೆ, ಎಂಎಸ್’ಕೆ ಸಿಟಿ ಲೇಔಟ್ ಗಳಿವೆ.

ಸದರಿ ಬಡಾವಣೆಗಳಲ್ಲಿ ಶುದ್ದ ಕುಡಿಯುವ ನೀರು ಪೂರೈಕೆಯ ಯಾವುದೇ ವ್ಯವಸ್ಥೆಗಳಿಲ್ಲ. ಸದರಿ ಬಡಾವಣೆಗಳಲ್ಲಿ ಮನೆ ನಿರ್ಮಾಣ ಮಾಡುವ ಪ್ರತಿಯೋರ್ವರು ಅನಿವಾರ್ಯವಾಗಿ ಬೋರ್’ವೆಲ್ ಕೊರೆಯಿಸುವಂತಾಗಿದೆ. ಇದರಿಂದ ಭೂಮಿಯ ಕೊರತೆ ಹೆಚ್ಚಾಗಿದೆ. ಅಂತರ್ಜಲ ವ್ಯವಸ್ಥೆ ಹಾಗೂ ಪ್ರಾಕೃತಿಕ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವಂತಾಗಿದೆ.

ಹಾಗೆಯೇ ಸದರಿ ಬಡಾವಣೆಗಳ ನಿರ್ಮಾಣದ ವೇಳೆ, ಕುಡಿಯುವ ನೀರು ಪೂರೈಕೆಗೆಂದೆ ಲಕ್ಷಾಂತರ ರೂ.ಗಳನ್ನು ಸಂಬಂಧಿಸಿದವರು ಜಲ ಮಂಡಳಿಗೆ ಪಾವತಿಸಿದ್ದಾರೆಂಬ ಮಾಹಿತಿಯಿದೆ. ನಾಗರೀಕರಿಗೆ ಅನುಕೂಲ ಕಲ್ಪಿಸಲು ಹಾಗೂ ಬೋರ್’ವೆಲ್ ಕೊರೆಯಿಸುವುದನ್ನು ನಿಯಂತ್ರಿಸಲು, ಸದರಿ ಬಡಾವಣೆಗಳಿಗೂ 24*7 ಯೋಜನೆಯಡಿ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಅಹವಾಲು ಆಲಿಸಿದ ನಂತರ ಎಇಇ ಜೀವನ್ ಅವರು ಮಾತನಾಡಿ, ಈ ಸಂಬಂಧ ಬಡಾವಣೆಗಳಿಗೆ ಖುದ್ದು ಭೇಟಿಯಿತ್ತು ಪರಿಶೀಲಿಸಿ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಮುಖಂಡ ಗುರುಚರಣ್ ಉಪಸ್ಥಿತರಿದ್ದರು.

Journalist B Renukesh, president of the Press Colony Residents’ Welfare Development Association, has urged the Water Board to provide drinking water under a 24*7 scheme to the settlements adjacent to KHB Press Colony on the outskirts of Shivamogga city. In this regard, a request was made to Assistant Executive Engineer (In-charge) Jeevan at the Water Board office on the evening of December 19.

MP BY Raghavendra appeals for implementation of national highway projects in Shivamogga constituency Will the delayed Shivamogga Outer Ring Road get speed in Phase 2? ನೆನೆಗುದಿಗೆ ಬಿದ್ದ ಶಿವಮೊಗ್ಗ ಹೊರವರ್ತುಲ ರಸ್ತೆ 2 ನೇ ಹಂತಕ್ಕೆ ಸಿಗಲಿದೆಯೇ ವೇಗ? Previous post shimoga outer ring road | ನೆನೆಗುದಿಗೆ ಬಿದ್ದ ಶಿವಮೊಗ್ಗ ಹೊರ ವರ್ತುಲ ರಸ್ತೆ 2 ನೇ ಹಂತಕ್ಕೆ ಸಿಗಲಿದೆಯೇ ವೇಗ?
Heartfelt tribute program by the Sacred Heart High School Alumni Association, Shivamogga ಶಿವಮೊಗ್ಗದ ಸೆಕ್ರೇಡ್ ಹಾರ್ಟ್ ಪ್ರೌಢಶಾಲೆ ಹಳೇಯ ವಿದ್ಯಾರ್ಥಿಗಳ ಸಂಘದಿಂದ ಹೃದಯಾಂಜಲಿ ಕಾರ್ಯಕ್ರಮ Next post shimoga news | ಶಿವಮೊಗ್ಗದ ಸೆಕ್ರೇಡ್ ಹಾರ್ಟ್ ಪ್ರೌಢಶಾಲೆ ಹಳೇಯ ವಿದ್ಯಾರ್ಥಿಗಳ ಸಂಘದಿಂದ ಹೃದಯಾಂಜಲಿ ಕಾರ್ಯಕ್ರಮ