Heartfelt tribute program by the Sacred Heart High School Alumni Association, Shivamogga ಶಿವಮೊಗ್ಗದ ಸೆಕ್ರೇಡ್ ಹಾರ್ಟ್ ಪ್ರೌಢಶಾಲೆ ಹಳೇಯ ವಿದ್ಯಾರ್ಥಿಗಳ ಸಂಘದಿಂದ ಹೃದಯಾಂಜಲಿ ಕಾರ್ಯಕ್ರಮ

shimoga news | ಶಿವಮೊಗ್ಗದ ಸೆಕ್ರೇಡ್ ಹಾರ್ಟ್ ಪ್ರೌಢಶಾಲೆ ಹಳೇಯ ವಿದ್ಯಾರ್ಥಿಗಳ ಸಂಘದಿಂದ ಹೃದಯಾಂಜಲಿ ಕಾರ್ಯಕ್ರಮ

ಶಿವಮೊಗ್ಗ (shivamogga), ಡಿಸೆಂಬರ್ 19: ಶಿವಮೊಗ್ಗದ ಸೆಕ್ರೇಡ್ ಹಾರ್ಟ್ ಪ್ರೌಢಶಾಲೆಯ ವಜ್ರ ಮಹೋತ್ಸವದ ಅಂಗವಾಗಿ, ಹಳೇಯ ವಿದ್ಯಾರ್ಥಿಗಳ ಸಂಘದಿಂದ ಡಿಸೆಂಬರ್ 21 ರಂದು ಹೃದಯಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟನೆ ತಿಳಿಸಿದೆ.

ಹಳೇಯ ವಿದ್ಯಾರ್ಥಿಗಳಿಗಾಗಿ ಅಂದು ಬೆಳಿಗ್ಗೆ 8 ಗಂಟೆಗೆ ಕ್ರಿಕೆಟ್, ಪುಟ್’ಬಾಲ್, ಹಗ್ಗಜಗ್ಗಾಟ ಸೇರಿದಂತೆ ಹಲವು ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿದೆ.

ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ ಆಯೋಜನೆಯಾಗಿದೆ. ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ,  ವಿಧಾನ ಪರಿಷತ್ ಸದಸ್ಯರಾದ ಧನಂಜಯ ಸರ್ಜಿ, ಉಪ ವಿಭಾಗಾಧಿಕಾರಿ ಸತ್ಯನಾರಾಯಣ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ, ಮಾಜಿ ಎಂಎಲ್ಸಿ ಸಿದ್ದರಾಮಣ್ಣ,

ಶಾಲೆಯ ಹಳೇಯ ವಿದ್ಯಾರ್ಥಿಗಳಾದ ಬಳ್ಳೇಕೆರೆ ಸಂತೋಷ್, ಹೆಚ್ ಸಿ ಯೋಗೇಶ್, ಹರ್ಷ ಎನ್, ಡಾ ಉಮೇಶ್ ಚಂದ್ರರವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸದರಿ ಶಾಲೆಯ ಹಳೇಯ ವಿದ್ಯಾರ್ಥಿಯಾದ ಮಾಜಿ ಸಚಿವ ಕುಮಾರ್ ಬಂಗಾರಪ್ಪರವರು ವಹಿಸಲಿದ್ದಾರೆ.

ವೇದಿಕೆ ಕಾರ್ಯಕ್ರಮದ ನಂತರ ಹಳೇಯ ವಿದ್ಯಾರ್ಥಿಗಳಿಂದ ನೃತ್ಯ, ಹಾಡು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮಕ್ಕೆ ಸೆಕ್ರೇಡ್ ಹಾರ್ಟ್ ಪ್ರೌಢಶಾಲೆಯ ಹಳೇಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಪ್ರಕಟಣೆಯಲ್ಲಿ ಸಂಘಟನೆ ಮನವಿ ಮಾಡಿದೆ.

Shivamogga, December 19: As part of the Diamond Jubilee celebrations of Sacred Heart High School in Shivamogga, the Old Students’ Association has organized a Hrudayanjali program on December 21, the organization said.

Shivamogga: Request to the Water Board Engineer to supply drinking water to the areas around Press Colony ಶಿವಮೊಗ್ಗ : ಪ್ರೆಸ್ ಕಾಲೋನಿ ಸುತ್ತಮುತ್ತಲಿನ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಸಲು ಜಲ ಮಂಡಳಿ ಎಂಜಿನಿಯರ್’ಗೆ ಮನವಿ Previous post shimoga news | ಶಿವಮೊಗ್ಗ : ಪ್ರೆಸ್ ಕಾಲೋನಿ ಸುತ್ತಮುತ್ತಲಿನ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಸಲು ಜಲ ಮಂಡಳಿ ಎಂಜಿನಿಯರ್’ಗೆ ಮನವಿ