Man stabbed in Malavagoppa, Shivamogga city – Accused flees! ಶಿವಮೊಗ್ಗ ನಗರದ ಮಲವಗೊಪ್ಪದಲ್ಲಿ ವ್ಯಕ್ತಿಗೆ ಚೂರಿ ಇರಿತ – ಆರೋಪಿ ಪರಾರಿ

shimoga crime news | ಶಿವಮೊಗ್ಗದ ಮಲವಗೊಪ್ಪದಲ್ಲಿ ವ್ಯಕ್ತಿಗೆ ಚೂರಿ ಇರಿತ – ಆರೋಪಿ ಪರಾರಿ!

ಶಿವಮೊಗ್ಗ (shivamogga), ಡಿಸೆಂಬರ್ 28: ವ್ಯಕ್ತಿಯೋರ್ವರಿಗೆ ಚೂರಿಯಿಂದ ಇರಿದ ಘಟನೆ ಶಿವಮೊಗ್ಗ ನಗರದ ಹೊರವಲಯ ಮಲವಗೊಪ್ಪದಲ್ಲಿ ಡಿಸೆಂಬರ್ 27 ರ ರಾತ್ರಿ ನಡೆದಿದೆ.

ಮಿಳಘಟ್ಟದ ನಿವಾಸಿ ವಿನೋದ್ (35) ಚೂರಿ ಇರಿತಕ್ಕೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಕ್ರಂ (42) ಆರೋಪಿಯಾಗಿದ್ದು, ಘಟನೆಯ ನಂತರ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಮಲವಗೊಪ್ಪದ ಪೆಟ್ರೋಲ್ ಬಂಕ್ ಸಮೀಪ, ಇಬ್ಬರ ನಡುವೆ ಗಲಾಟೆಯಾಗಿದೆ. ಇದು ವಿಕೋಪಕ್ಕೆ ತಿರುಗಿ, ಚೂರಿ ಇರಿತದಲ್ಲಿ ಅಂತ್ಯಗೊಂಡಿದೆ.

ವಿನೋದ್ ಅವರ ದೇಹದ ಹಲವೆಡೆ, ಆರೋಪಿಯು ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ. ಅವರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಘಟನೆಗೆ ಸ್ಪಷ್ಟ ಕಾರಣಗಳು ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

Shivamogga, December 28: An incident of stabbing a person took place on the night of December 27 in Malavagoppa, on the outskirts of Shivamogga city.

Murder case over mobile phone charging: Man sentenced to rigorous imprisonment! ಸಾಗರ | ಮೊಬೈಲ್ ಪೋನ್ ಚಾರ್ಜ್ ಹಾಕುವ ವಿಚಾರದಲ್ಲಿ ನಡೆದಿದ್ದ ಕೊಲೆ ಪ್ರಕರಣ : ವ್ಯಕ್ತಿಗೆ ಕಠಿಣ ಜೈಲು ಶಿಕ್ಷೆ! Previous post ಸಾಗರ | sagara news | ಮೊಬೈಲ್ ಪೋನ್ ಚಾರ್ಜ್ ಹಾಕುವ ವಿಚಾರದಲ್ಲಿ ನಡೆದಿದ್ದ ಕೊಲೆ ಪ್ರಕರಣ : ವ್ಯಕ್ತಿಗೆ ಕಠಿಣ ಜೈಲು ಶಿಕ್ಷೆ!
Major work of South Western Railway Mysore Division: Ghat Zone electrification work completed ನೈರುತ್ಯ ರೈಲ್ವೆ ಮೈಸೂರು ವಿಭಾಗದ ಮಹತ್ತರ ಸಾಧನೆ : ಘಾಟ್ ವಲಯ ವಿದ್ಯುದೀಕರಣ ಕಾರ್ಯ ಪೂರ್ಣ Next post railway news | ನೈರುತ್ಯ ರೈಲ್ವೆ ಮೈಸೂರು ವಿಭಾಗದ ಮಹತ್ತರ ಸಾಧನೆ : ಘಾಟ್ ವಲಯ ವಿದ್ಯುದೀಕರಣ ಕಾರ್ಯ ಪೂರ್ಣ