Shivamogga: A young man was murdered near the APMC vegetable market! ಶಿವಮೊಗ್ಗ : ಎಪಿಎಂಸಿ ತರಕಾರಿ ಮಾರುಕಟ್ಟೆ ಸಮೀಪ ಯುವಕನ ಕೊಲೆ!

shimoga BREAKING NEWS | ಶಿವಮೊಗ್ಗ : ತರಕಾರಿ ಮಾರುಕಟ್ಟೆ ಸಮೀಪ ಯುವಕನ ಕೊಲೆ!

ಶಿವಮೊಗ್ಗ (shivamogga), ಡಿಸೆಂಬರ್ 29: ರಾಡ್ ನಿಂದ ಹೊಡೆದು ಯುವಕನೋರ್ವನನ್ನು ಕೊಲೆ ಮಾಡಿರುವ ಘಟನೆ, ವಿನೋಬನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಸಮೀಪ ಡಿಸೆಂಬರ್ 29 ರ ಸಂಜೆ 7.30 ರ ಸರಿಸುಮಾರಿಗೆ ನಡೆದಿದೆ.

ಕಾಶೀಪುರ ಬಡಾವಣೆ ತಮಿಳ್ ಕ್ಯಾಂಪ್ ನಿವಾಸಿ ಅರುಣ್ (26) ಕೊಲೆಗೀಡಾದ ಯುವಕ ಎಂದು ಗುರುತಿಸಲಾಗಿದೆ.

ಜನನಿಬಿಡ ರಸ್ತೆಯಲ್ಲಿಯೇ ಯುವಕನನ್ನು ಕೊಲೆ ಮಾಡಲಾಗಿದೆ. ಕೌಟಂಬಿಕ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನ ಹತ್ಯೆ ನಡೆದಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಘಟನಾ ಸ್ಥಳಕ್ಕೆ ಎಸ್ಪಿ ಜಿ ಕೆ ಮಿಥುನ್ ಕುಮಾರ್  ಅವರು ಭೇಟಿಯಿತ್ತು ಪರಿಶೀಲಿಸಿದರು. ಆರೋಪಿಗಳ ಬಂಧನಕ್ಕೆ ವಿನೋಬನಗರ ಠಾಣೆ ಪೊಲೀಸರು ಕ್ರಮಕೈಗೊಂಡಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.

Shivamogga, December 29: The incident of a young man being beaten to death with a rod took place near the APMC vegetable market in Vinobanagar on December 29 at around 7.30 pm.

Shivamogga - Ranebennur railway project: What is the instruction given by the CM? ಶಿವಮೊಗ್ಗ – ರಾಣೆಬೆನ್ನೂರು ರೈಲ್ವೆ ಯೋಜನೆ : ಸಿಎಂ ನೀಡಿದ ಸೂಚನೆಯೇನು? Previous post shimoga railway news | ಶಿವಮೊಗ್ಗ – ರಾಣೆಬೆನ್ನೂರು ರೈಲ್ವೆ ಯೋಜನೆ : ಸಿಎಂ ನೀಡಿದ ಸೂಚನೆಯೇನು?
Shivamogga: New Year's Eve - Police Department issues warning! ಶಿವಮೊಗ್ಗ : ಹೊಸ ವರ್ಷಾಚರಣೆ – ಪೊಲೀಸ್ ಇಲಾಖೆ ಖಡಕ್ ವಾರ್ನಿಂಗ್! Next post shimoga | new year 2026 | ಶಿವಮೊಗ್ಗ : ಹೊಸ ವರ್ಷಾಚರಣೆ – ಪೊಲೀಸ್ ಇಲಾಖೆ ಖಡಕ್ ವಾರ್ನಿಂಗ್!