Operation against cannabis across Shimoga district! ಶಿವಮೊಗ್ಗ ಜಿಲ್ಲೆಯಾದ್ಯಂತ ಗಾಂಜಾ ವಿರುದ್ದ ಕಾರ್ಯಾಚರಣೆ!

shimoga crime news | ಶಿವಮೊಗ್ಗ ಜಿಲ್ಲೆಯಾದ್ಯಂತ ಗಾಂಜಾ ವಿರುದ್ದ ಕಾರ್ಯಾಚರಣೆ!

ಶಿವಮೊಗ್ಗ (shivamogga), ಡಿಸೆಂಬರ್ 30: ಶಿವಮೊಗ್ಗ ಜಿಲ್ಲೆಯಾದ್ಯಂತ ನವೆಂಬರ್ ಹಾಗೂ ಡಿಸೆಂಬರ್ ತಿಂಗಳುಗಳಲ್ಲಿ, ಗಾಂಜಾ ವಿರುದ್ದ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.

ಈ ಕುರಿತಂತೆ ಡಿಸೆಂಬರ್ 30 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ನವೆಂಬರ್ ಮಾಹೆಯಲ್ಲಿ 82 ಪ್ರಕರಣ ದಾಖಲಿಸಿ, ಗಾಂಜಾ ಸೇವಿಸಿದ್ದ 76 ಜನ ಆರೋಪಿಗಳ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಹಾಗೆಯೇ ಗಾಂಜಾ ಮಾರಾಟ, ಸಾಗಾಣೆ ಹಾಗೂ ಗಾಂಜಾ ಗಿಡ ಬೆಳೆದಿದ್ದ ಆರೋಪದ ಮೇರೆಗೆ 12 ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಒಟ್ಟಾರೆ 4,91,500 ರೂ. ಮೌಲ್ಯದ 4 ಕೆಜಿ 476 ಗ್ರಾಂ ತೂಕದ ಒಣ ಗಾಂಜಾ, 370 ಗ್ರಾಂ ತೂಕದ ಹಸಿ ಗಾಂಜಾ, 26 ಗ್ರಾಂ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ.

ಡಿಸೆಂಬರ್ ತಿಂಗಳಲ್ಲಿ ಒಟ್ಟು 95 ಪ್ರಕರಣ ದಾಖಲಿಸಿದ್ದು, ಗಾಂಜಾ ಸೇವನೆ ಮಾಡಿದ್ದ 90 ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಗಾಂಜಾ ಮಾರಾಟ, ಸಾಗಾಣೆ ಆರೋಪದ ಮೇರೆಗೆ 15 ಆರೋಪಿಗಳ ಎನ್.ಡಿ.ಪಿಎಸ್ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ. ಒಟ್ಟಾರೆ 4.51 ಲಕ್ಷ ರೂ. ಮೌಲ್ಯದ 8 ಕೆಜಿ 969 ಗ್ರಾಂ ತೂಕದ ಒಣ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Shivamogga, December 30: The district police department said that special operations against marijuana were conducted throughout the Shivamogga district during the months of November and December.

Shivamogga: Houses damaged by cylinder explosion – Donors join hands with Red Cross to help ಶಿವಮೊಗ್ಗ : ಸಿಲಿಂಡರ್ ಸ್ಫೋಟದಿಂದ ಮನೆಗಳಿಗೆ ಹಾನಿ – ರೆಡ್’ಕ್ರಾಸ್ ಸಂಸ್ಥೆ ಸೇರಿದಂಥೆ ದಾನಿಗಳ ನೆರವಿನಹಸ್ತ Previous post shimoga news | ಶಿವಮೊಗ್ಗ : ಸಿಲಿಂಡರ್ ಸ್ಫೋಟದಿಂದ ಮನೆಗಳಿಗೆ ಹಾನಿ – ರೆಡ್’ಕ್ರಾಸ್ ಸಂಸ್ಥೆ ಸೇರಿದಂತೆ ದಾನಿಗಳ ನೆರವಿನಹಸ್ತ