
ಭದ್ರಾ ಜಲಾಶಯ ಒಳಹರಿವಿನಲ್ಲಿ ಮತ್ತಷ್ಟು ಇಳಿಕೆ!
ಶಿವಮೊಗ್ಗ, ಜು. 24: ಮಧ್ಯ ಕರ್ನಾಟಕ (central karnataka) ಭಾಗದ ಪ್ರಮುಖ ಜಲಾಶವಾದ ಭದ್ರಾಗೆ, ಕಳೆದ ಮೂರು ದಿನಗಳಿಂದ ಒಳಹರಿವಿನ ಪ್ರಮಾಣದಲ್ಲಿ ನಿರಂತರವಾಗಿ ಇಳಿಕೆ ಕಂಡುಬರಲಾರಂಭಿಸಿದೆ.
ಜಲಾನಯನ ಪ್ರದೇಶ (catchment area) ವ್ಯಾಪ್ತಿಯ ಚಿಕ್ಕಮಗಳೂರು (chikkamagaluru) ಜಿಲ್ಲೆಯ ಪ್ರದೇಶಗಳಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ಮಳೆಯ (rain) ಪ್ರಮಾಣ, ಕಳೆದ ಕೆಲ ದಿನಗಳಿಂದ ಕಡಿಮೆಯಾಗಿದೆ. ಇದು ಭದ್ರಾ ಡ್ಯಾಂಗೆ (bhadra dam) ಹರಿದು ಬರುತ್ತಿರುವ ನೀರಿನ ಪ್ರಮಾಣ ಇಳಿಕೆಯಾಗಲು ಮುಖ್ಯ ಕಾರಣವಾಗಿದೆ.
ಬುಧವಾರ ಬೆಳಿಗ್ಗೆಯ ಮಾಹಿತಿಯಂತೆ, ಭದ್ರಾ ಡ್ಯಾಂ ಒಳಹರಿವು (inflow) 15,383 ಕ್ಯೂಸೆಕ್ ಇದೆ. ಮಂಗಳವಾರ ಈ ಪ್ರಮಾಣ 20,045 ಕ್ಯೂಸೆಕ್ ಇತ್ತು. ಡ್ಯಾಂನ ನೀರಿನ ಮಟ್ಟ 169 ಅಡಿ 5 ಇಂಚು (ಗರಿಷ್ಠ ಮಟ್ಟ : 186) ಅಡಿಯಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಡ್ಯಾಂಗೆ ಕೇವಲ 1. 3 ಅಡಿಯಷ್ಟು (feet) ನೀರು ಹರಿದು ಬಂದಿದೆ.
ಕಳೆದ ವರ್ಷ (last year) ಇದೇ ದಿನದಂದು ಡ್ಯಾಂ ನೀರಿನ ಮಟ್ಟ (bhadr dam water leve) 149. 5 ಅಡಿಯಿತ್ತು. ಪ್ರಸ್ತುತ ವರ್ಷ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದರಿಂದ (heavy rainfall), ಕಳೆದ ವರ್ಷಕ್ಕಿಂತ ಸರಿಸುಮಾರು 20 ಅಡಿಯಷ್ಟು ಹೆಚ್ಚು ನೀರು ಸಂಗ್ರಹವಾಗಿದೆ. ಇದು ಶಿವಮೊಗ್ಗ, ದಾವಣಗೆರೆ (shimoga, davanagere) ಜಿಲ್ಲೆಗಳ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.
ಭದ್ರಾ ಜಲಾಶಯ ಗರಿಷ್ಠ ಮಟ್ಟ ತಲುಪಲು (bhadra dam maximum level) ಇನ್ನೂ ಸುಮಾರು 16. 5 ಅಡಿಯಷ್ಟು ನೀರು ಸಂಗ್ರಹವಾಗಬೇಕಾಗಿದೆ. ಜಲಾನಯನ ಪ್ರದೇಶಗಳಲ್ಲಿ ಮಳೆ ಚುರುಕುಗೊಂಡರೆ, ಜುಲೈ ಅಂತ್ಯದೊಳಗೆ ಡ್ಯಾಂ ಭರ್ತಿಯಾಗುವ ಸಾಧ್ಯತೆಯಿದೆ.