ಅನಾಮಧೇಯ ಮಹಿಳೆ ಸಾವು : ವಾರಸುದಾರರ ಪತ್ತೆಗೆ ಮನವಿ

Death of an anonymous woman: request to trace the heirs ಶಿವಮೊಗ್ಗದಲ್ಲಿ ಅನಾಮಧೇಯ ಮಹಿಳೆ ಸಾವು : ವಾರಸುದಾರರ ಪತ್ತೆಗೆ ಮನವಿ

ಶಿವಮೊಗ್ಗ (shivamogga), ಆ. 3 :  ಶಿವಮೊಗ್ಗ ನಗರದ ಕೋಟೆ ಆಂಜನೇಯ ದೇವಸ್ಥಾನದ (kote anjaneya temple) ಸುತ್ತಮುತ್ತ ಭಿಕ್ಷೆ ಬೇಡಿ ಜೀವಿಸುತ್ತಿದ್ದ, ಅನಾಮಧೇಯ ಮಹಿಳೆಯೋರ್ವರು (anonymous woman) ಮೃತಪಟ್ಟ ಘಟನೆ ನಡೆದಿದೆ.

ದೇವಾಲಯ (temple) ಮುಂಭಾಗದ ಪುಟ್ಪಾತ್ ಬಳಿ ಜುಲೈ 29 ರಂದು ಸದರಿ ಮಹಿಳೆಯು ಅಸ್ವಸ್ಥರಾಗಿದ್ದರು. ಸಾರ್ವಜನಿಕರು ಆಂಬ್ಯುಲೆನ್ಸ್ ಮೂಲಕ, ಚಿಕಿತ್ಸೆಗಾಗಿ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ (govt meggan hospital) ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿರುತ್ತಾರೆ (dead)

ಚಹರೆ (appearance) : ಮೃತ ಮಹಿಳೆಗೆ (the deceased woman) ಸುಮಾರು 65 ವರ್ಷ ವಯೋಮಾನವಿದೆ. 5.4 ಅಡಿ ಎತ್ತರ, ತೆಳ್ಳನೆಯ ಮೈಕಟ್ಟು, ಕೋಲುಮುಖ, ಕಪ್ಪು ಮೈಬಣ್ಣ ಹೊಂದಿದ್ದು, ಎಡಗೈ ಮುಂಗೈನಲ್ಲಿ ಕಪ್ಪು ಮಚ್ಚೆ ಇರುತ್ತದೆ. ಗುಲಾಬಿ ಬಣ್ಣದ ಸೀರೆ, ಕಪ್ಪು ಜಾಕೇಟ್ ಧರಿಸಿರುತ್ತಾರೆ.  

ಮೃತ ಮಹಿಳೆಯ ವಾರಸ್ಸುದಾರರು ಯಾರದರು ಪತ್ತೆಯಾದಲ್ಲಿ, ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯನ್ನು (shimoga kote police station) ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. 

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →