Next week notification for Shimoga Mysore Tumkur Corporation elections ಮುಂದಿನ ವಾರ ಶಿವಮೊಗ್ಗ ಮೈಸೂರು ತುಮಕೂರು ಪಾಲಿಕೆಗಳ ಚುನಾವಣೆಗೆ ಅಧಿಸೂಚನೆ

ಮುಂದಿನ ವಾರ ಶಿವಮೊಗ್ಗ, ಮೈಸೂರು, ತುಮಕೂರು ಪಾಲಿಕೆಗಳ ಚುನಾವಣೆಗೆ ಅಧಿಸೂಚನೆ

ಬೆಂಗಳೂರು (bengaluru), ಆ. 8: ಮುಂದಿನ ವಾರ ಶಿವಮೊಗ್ಗ (shimoga), ಮೈಸೂರು (mysore) ಹಾಗೂ ತುಮಕೂರು (tumkur) ಮಹಾನಗರ ಪಾಲಿಕೆಗಳ (corporations) ವಾರ್ಡ್ ಚುನಾವಣೆಗೆ (wards election) ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ (state election commission) ಆಯುಕ್ತ ಜಿ.ಆರ್.ಸಂಗ್ರೇಶಿ ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ (bengaluru) ಆ. 8 ರ ಗುರುವಾರ ಬಳ್ಳಾರಿ ರಸ್ತೆಯಲ್ಲಿರುವ ರಾಜ್ಯ ಚುನಾವಣಾ ಆಯೊಗದ ಕಚೇರಿಯಲ್ಲಿ ಸುದ್ದಿಗೋಷ್ಠಿ (pressmeet) ಉದ್ದೇಶಿಸಿ ಅವರು ಮಾತನಾಡಿದರು. ಸುಪ್ರೀಂಕೋರ್ಟ್ (supreme court) ಆದೇಶದಂತೆ ಅವಧಿ ಪೂರ್ಣಗೊಂಡ ಸ್ಥಳೀಯ ಸ್ಥಂಸ್ಥೆಗಳಿಗೆ (local bodies) ರಾಜ್ಯ ಸರ್ಕಾರ ಕ್ಷೇತ್ರ ಹಾಗೂ ಮೀಸಲಾತಿ (reservation) ಅಧಿಸೂಚನೆ ಹೊರಡಿಸಬೇಕು.

ಒಂದು ವೇಳೆ ಸರ್ಕಾರದಿಂದ (state govt) ಈ ಕ್ರಮವಾಗದಿದ್ದಲ್ಲಿ, ಹಿಂದಿನ ಚುನಾವಣೆಯಲ್ಲಿ (election) ನಿಗದಿ ಮಾಡಲಾಗಿದ್ದ ಕ್ಷೇತ್ರ ವಿಂಗಡಣೆ ಹಾಗೂ ಮೀಸಲಾತಿ ಅನ್ವಯವೇ ಚುನಾವಣೆ ನಡೆಸಬಹುದು. ಅದರಂತೆ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಅವಧಿ ಪೂರ್ಣಗೊಂಡಿರುವ ಮೂರು ಮಹಾನಗರ ಪಾಲಿಕೆಗಳಿಗೆ ಚುನಾವಣೆ (corporations elections) ನಡೆಸಲು ವೇಳಾಪಟ್ಟಿ (time table) ಸಿದ್ದಪಡಿಸಲಾಗಿದೆ. ಅಧಿಸೂಚನೆ (notification) ಹೊರಡಿಸಲಾಗುತ್ತದೆ. ಅಕ್ಟೋಬರ್ ಅಥವಾ ನವೆಂಬರ್ ಅಂತ್ಯಕ್ಕೆ ಈ ಪಾಲಿಕೆಗಳಲ್ಲಿ (corportion) ಚುನಾಯಿತಿ ಜನಪ್ರತಿನಿಧಿಗಳಿರಬೇಕು (corporators) ಎಂಬುವುದು ನಮ್ಮ ಬಯಕೆಯಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಆರ್.ಸಂಗ್ರೇಶಿ ಅವರು ತಿಳಿಸಿದ್ದಾರೆ.

ನೆನೆಗುದಿಗೆ : ಈ ಮೂರು ಪಾಲಿಕೆಗಳಿಗೆ 2018 ರ ಆಗಸ್ಟ್ 31 ರಂದು ಚುನಾವಣೆ ನಡೆದಿತ್ತು. ಸೆಪ್ಟೆಂಬರ್ 3 ರಂದು ಮತಗಳ ಎಣಿಕೆಯಾಗಿತ್ತು. ನವೆಂಬರ್ ತಿಂಗಳಲ್ಲಿ ಮೇಯರ್ – ಉಪ ಮೇಯರ್ ಗಳ (mayor – deputy mayor) ಆಯ್ಕೆಯಾಗಿತ್ತು. ಮೊದಲ ಸಾಮಾನ್ಯ ಸಭೆಯಿಂದ ಹಾಲಿ ಸದಸ್ಯರ ಅಧಿಕಾರಾವಧಿ ಆರಂಭಗೊಂಡಿತ್ತು.

ಈ ಹಿಂದಿನ ಕಾರ್ಪೋರೇಟರ್ ಗಳ (corporators) ಅಧಿಕಾರಾವಧಿ 2023 ರ ನವೆಂಬರ್ ತಿಂಗಳಲ್ಲಿ ಅಂತ್ಯಗೊಂಡಿತ್ತು. ಎಲ್ಲ ಅಂದುಕೊಂಡಂತೆ ನಡೆದಿದ್ದರೆ, ಕಳೆದ ಡಿಸೆಂಬರ್ – ಜನವರಿ ತಿಂಗಳಲ್ಲಿ ಚುನಾವಣೆ ನಡೆಯಬೇಕಾಗಿತ್ತು. ಆದರೆ ಲೋಕಸಭೆ ಸಾರ್ವತ್ರಿಕ ಚುನಾವಣೆ (loksabha election) ಕಾರಣದಿಂದ, ರಾಜ್ಯ ಸರ್ಕಾರ ಮೂರು ಪಾಲಿಕೆಗಳಿಗೆ ಚುನಾವಣೆ ನಡೆಸುವ ಗೋಜಿಗೆ ಮುಂದಾಗಿರಲಿಲ್ಲ. ಆಡಳಿತಾಧಿಕಾರಿಗಳ ನಿಯೋಜನೆ ಮಾಡಿತ್ತು

Tumkur district Koratagere police constable caught the thief risking his life in Bengaluru! ಬೆಂಗಳೂರಿನಲ್ಲಿ ಜೀವ ಪಣಕ್ಕಿಟ್ಟು ಕಳ್ಳನನ್ನು ಹಿಡಿದ ತುಮಕೂರು ಜಿಲ್ಲೆ ಕೊರಟಗೆರೆ ಪೊಲೀಸ್ ಪೇದೆ! ವರದಿ : ಬಿ. ರೇಣುಕೇಶ್ b.renukesha Previous post ಬೆಂಗಳೂರಿನಲ್ಲಿ ಜೀವ ಪಣಕ್ಕಿಟ್ಟು ಕಳ್ಳನನ್ನು ಹಿಡಿದ ತುಮಕೂರು ಜಿಲ್ಲೆ ಕೊರಟಗೆರೆ  ಪೊಲೀಸ್ ಪೇದೆ!
The case of a newly married couple fighting case : the groom also died after the bride! ಮಚ್ಚಿನಲ್ಲಿ ಹೊಡೆದಾಡಿಕೊಂಡ ನವ ದಂಪತಿ ಪ್ರಕರಣ : ವಧುವಿನ ಬೆನ್ನಲ್ಲೇ ವರನೂ ಸಾವು Next post ನವ ದಂಪತಿ ಪ್ರಕರಣ : ವಧುವಿನ ಬೆನ್ನಲ್ಲೇ ವರನೂ ಸಾವು!