ಮಲೆನಾಡಿನಲ್ಲಿ ಮುಂಗಾರು ಮಳೆ ಚುರುಕು!

ಶಿವಮೊಗ್ಗ (shivamogga), ಆ. 16: ಮಲೆನಾಡಿನಲ್ಲಿ (malnad) ಕಡಿಮೆಯಾಗಿದ್ದ ಮುಂಗಾರು ಮಳೆಯ (monsoon rain) ತೀವ್ರತೆ ಮತ್ತೆ ಕ್ರಮೇಣ ಹೆಚ್ಚಾಗಲಾರಂಭಿಸಿದೆ. ಜಿಲ್ಲೆಯ ಪಶ್ಚಿಮಘಟ್ಟ (western ghat) ವ್ಯಾಪ್ತಿಯ ಪ್ರದೇಶಗಳು ಸೇರಿದಂತೆ ಹಲವೆಡೆ ಮಳೆಯಾಗಲಾರಂಭಿಸಿದೆ.

ಶುಕ್ರವಾರ ಬೆಳಿಗ್ಗೆಯ ಮಾಹಿತಿಯಂತೆ, ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂ (linganamakki dam) ಒಳಹರಿವು 7643 ಕ್ಯೂಸೆಕ್ ಇದೆ. 7504 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ (outflow).  ಡ್ಯಾಂ ನೀರಿನ ಮಟ್ಟ1816. 85 (ಗರಿಷ್ಠ ಮಟ್ಟ : 1819) ಅಡಿಯಿದೆ.

ತುಂಗಾ ಜಲಾಶಯದ (tunga dam) ಒಳಹರಿವು (inflow) 10,969 ಕ್ಯೂಸೆಕ್ ಒಳಹರಿವಿದ್ದು, ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ ಒಳಹರಿವಿನಷ್ಟೆ ನೀರನ್ನು ಹೊರಬಿಡಲಾಗುತ್ತಿದೆ.

ಭದ್ರಾ ಜಲಾಶಯದ (bhadra dam) ಒಳಹರಿವು 8419 ಕ್ಯೂಸೆಕ್ ಇದ್ದು, 7841 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.  ಡ್ಯಾಂ ನೀರಿನ ಮಟ್ಟ 180. 2 (ಗರಿಷ್ಠ ಮಟ್ಟ : 186) ಅಡಿಯಿದೆ.

ಮಳೆ : ಶುಕ್ರವಾರ ಶಿವಮೊಗ್ಗ ನಗರ (shimoga city) ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆಯಾಯಿತು. ಮುಂದಿನ ಕೆಲ ದಿನಗಳವರೆಗೆ ಮಳೆ (rain) ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.

Ranu Mandal who was a star singer in Mumbai is again a beggar in Kolkata..! ಮುಂಬೈನಲ್ಲಿ ಸ್ಟಾರ್ ಗಾಯಕಿ ಆಗಿದ್ದ ರಾಣು ಮಂಡಲ್ ಮತ್ತೆ ಕೊಲ್ಕತ್ತಾದಲ್ಲಿ ಭಿಕ್ಷುಕಿ..! Previous post ಮುಂಬೈನಲ್ಲಿ ಸ್ಟಾರ್ ಗಾಯಕಿ ಆಗಿದ್ದ ರಾಣು ಮಂಡಲ್ ಮತ್ತೆ ಕೊಲ್ಕತ್ತಾದಲ್ಲಿ ಭಿಕ್ಷುಕಿ..!
shimoga : Roads flooded due to heavy rain! ಶಿವಮೊಗ್ಗ : ಜೋರು ಮಳೆಗೆ ರಸ್ತೆಗಳು ಜಲಾವೃತ! Next post ಶಿವಮೊಗ್ಗ : ಜೋರು ಮಳೆಗೆ ರಸ್ತೆಗಳು ಜಲಾವೃತ!