accident | shimoga - A car collided with an electric pole : a missed disaster! ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ : ತಪ್ಪಿದ ಅನಾಹುತ!

shimoga | ಶಿವಮೊಗ್ಗ – ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ : ತಪ್ಪಿದ ಅನಾಹುತ!

ಶಿವಮೊಗ್ಗ (shivamogga), ಆ. 19: ಮಾರುತಿ ಓಮ್ನಿ ಕಾರೊಂದು (maruti omni car) ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ (electric pole) ಡಿಕ್ಕಿ ಹೊಡೆದ ಘಟನೆ, ಸೋಮವಾರ ಸಂಜೆ ನಗರದ ಹೊರವಲಯ ಗೆಜ್ಜೇನಹಳ್ಳಿ ರಸ್ತೆಯಲ್ಲಿ (gejjenahalli road) ನಡೆದಿದೆ.

ಅಮರ್ ಗ್ರ್ಯಾನೈಟ್ ಗೋಡೌನ್ (amar granite godown) ಎದುರಿನ ರಾಜ್ಯ ಹೆದ್ದಾರಿಯಲ್ಲಿ (state highway) ಅವಘಡ (accident) ಸಂಭವಿಸಿದೆ. ಅದೃಷ್ಟವಶಾತ್ ಕಾರಿನ ಚಾಲಕನಿಗೆ ಯಾವುದೇ ಅಪಾಯವಾಗಿಲ್ಲ. ಪವಾಡ ಸದೃಶ್ಯ ರೀತಿಯಲ್ಲಿ ಅನಾಹುತದಿಂದ ಪಾರಾಗಿದ್ದಾರೆ.

ಮಳೆ (rain) ಬರುತ್ತಿದ್ದ ವೇಳೆ ಚಾಲನೆಯ ನಿಯಂತ್ರಣ ತಪ್ಪಿ, ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿದೆ. ವಿದ್ಯುತ್ ಕಂಬವು ಅಮರ್ ಗ್ರ್ಯಾನೈಟ್ ಗೋಡೌನ್ ಕಾಂಪೌಂಡ್ ಮೇಲೆ ಬಿದ್ದಿದೆ. ವಿದ್ಯುತ್ ಕಡಿತಗೊಂಡಿದ್ದರಿಂದ ಸಂಭಾವ್ಯ ಅನಾಹುತ ತಪ್ಪಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಶಿವಮೊಗ್ಗದs (shimoga) ಖಾಸಗಿ ಆಸ್ಪತ್ರೆಯೊಂದಕ್ಕೆ ಕಾರು ಸೇರಿದ್ದಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಮೆಸ್ಕಾಂ (mescom) ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದು, ನಷ್ಟದ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.

siddaramaiah | The CM filed an application to the High Court questioning the prosecution Can't be finished politically : Siddu | ಪ್ರಾಸಿಕ್ಯೂಷನ್ ಪ್ರಶ್ನಿಸಿ ಹೈಕೋರ್ಟ್’ಗೆ ಅರ್ಜಿ ಸಲ್ಲಿಸಿದ ಸಿಎಂ | ರಾಜಕೀಯವಾಗಿ ಮುಗಿಸಲು ಆಗಲ್ಲ : ಸಿದ್ದು ಗುಡುಗು! Previous post siddaramaiah | ಪ್ರಾಸಿಕ್ಯೂಷನ್ ಪ್ರಶ್ನಿಸಿ ಹೈಕೋರ್ಟ್’ಗೆ ಅರ್ಜಿ ಸಲ್ಲಿಸಿದ ಸಿಎಂ | ‘ರಾಜಕೀಯವಾಗಿ ಮುಗಿಸಲು ಆಗಲ್ಲ’ : ಸಿದ್ದು ಗುಡುಗು! |
shimoga | Waterlogged during rains - Bangalore's plight is also in Shivamogga city: Will the administrators wake up? shimoga | ಮಳೆ ವೇಳೆ ಜಲಾವೃತ - ಶಿವಮೊಗ್ಗ ನಗರದಲ್ಲಿಯೂ ಬೆಂಗಳೂರು ದುಃಸ್ಥಿತಿ : ಎಚ್ಚೆತ್ತುಕೊಳ್ಳುವರೆ ಆಡಳಿತಗಾರರು? Next post shimoga | ಶಿವಮೊಗ್ಗ – ಉಕ್ಕಿ ಹರಿದ ಕೆರೆಗಳು : ಜಲಾವೃತವಾದ ಬಡಾವಣೆ ; ಗಮನಹರಿಸುವುದೆ ಜಿಲ್ಲಾಡಳಿತ?!