ಶಿರಾಳಕೊಪ್ಪ ಪೊಲೀಸ್ ಠಾಣೆ Cattle theft near Shiralakoppa: Haveri district Hirekerur man arrested! ಶಿರಾಳಕೊಪ್ಪ ಬಳಿ ಜಾನುವಾರುಗಳ ಕಳವು : ಹಾವೇರಿ ಜಿಲ್ಲೆ ಹಿರೇಕೆರೂರು ವ್ಯಕ್ತಿ ಅರೆಸ್ಟ್!

shikaripur | ಶಿರಾಳಕೊಪ್ಪ – ಜಾನುವಾರುಗಳ ಕಳವು : ಹಾವೇರಿ ಜಿಲ್ಲೆ ಹಿರೇಕೆರೂರು ಆರೋಪಿ ಅರೆಸ್ಟ್!

ಶಿಕಾರಿಪುರ (shikaripur), ಆ. 23: ಫಾರಂ ಹೌಸ್ (farm house) ವೊಂದರಲ್ಲಿ ನಾಲ್ಕು ಜಾನುವಾರುಗಳನ್ನು (cattles ) ಕಳವು ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ, ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಠಾಣೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ ಘಟನೆ Aug – 23 ರಂದು ನಡೆದಿದೆ.

ಹಾವೇರಿ ಜಿಲ್ಲೆ ಹಿರೆಕೇರೂರು ತಾಲೂಕು (haveri district hirekerur taluk) ಅರಿಕಟ್ಟೆ ಗ್ರಾಮದ ನಿವಾಸಿ, ಶಿವರಾಜ ಯಾನೆ ಕುಮಾರ್ (26) ಬಂಧಿತ ಆರೋಪಿ (arrested accused) ಎಂದು ಗುರುತಿಸಲಾಗಿದೆ. ಆರೋಪಿ ಕಳವು (theft) ಮಾಡಿದ್ದ 2. 40 ಲಕ್ಷ ರೂ. ಮೌಲ್ಯದ ನಾಲ್ಕು ಆಕಳುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

9-8-2024 ರಂದು ಆರೋಪಿಯು ಶಿರಾಳಕೊಪ್ಪ (shiralakoppa) ಸಮೀಪದ ಚಿಕ್ಕಜಂಬೂರು ಗ್ರಾಮದ ನಿವಾಸಿ ಮಹಮ್ಮದ್ ಆಲಿಖಾನ್  ಎಂಬುವರಿಗೆ ಸೇರಿದ ಫಾರಂ ಹೌಸ್ ನಲ್ಲಿದ್ದ ಹಸುಗಳನ್ನು (cows) ಕಳವು ಮಾಡಿದ್ದ. ಈ ಕುರಿತಂತೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಶಿಕಾರಿಪುರ ಡಿವೈಎಸ್ಪಿ (shikaripur dysp) ಕೇಶವ್, ಸರ್ಕಲ್ ಇನ್ಸ್’ಪೆಕ್ಟರ್ (inspector) ರುದ್ರೇಶ್ ಮೇಲ್ವಿಚಾರಣೆಯಲ್ಲಿ ಸಬ್ ಇನ್ಸ್’ಪೆಕ್ಟರ್ (sub inspector) ಪ್ರಶಾಂತ್ ಕುಮಾರ್ ಟಿ ಬಿ ನೇತೃತ್ವದಲ್ಲಿ ಪಿಎಸ್ಐ ಪುಷ್ಪಾ,

ಸಿಬ್ಬಂದಿಗಳಾದ ಹೆಚ್.ಸಿ. ಸಂತೋಷ್, ಟೀಕಪ್ಪ, ಪಿಸಿಗಳಾದ ಸಲ್ಮಾನ್, ಕಾರ್ತಿಕ್, ಅಶೋಕ ಮತ್ತು ಪ್ರೇಮಾಬಾಯಿ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಸದರಿ ಪೊಲೀಸ್ ತಂಡಕ್ಕೆ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅಭಿನಂದಿಸಿದ್ದಾರೆ

Previous post sagara | ಈಜಲು ತೆರಳಿದ ಬೆಂಗಳೂರಿನ ವಿದ್ಯಾರ್ಥಿ ನೀರುಪಾಲು!
Murder : Life sentence for two women – 5 years rigorous imprisonment for three youths! ಕೊಲೆ ಪ್ರಕರಣ : ಇಬ್ಬರು ಮಹಿಳೆಯರಿಗೆ ಜೀವಾವಧಿ – ಮೂವರು ಯುವಕರಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ! Next post shimoga | ಕೊಲೆ : ಇಬ್ಬರು ಮಹಿಳೆಯರಿಗೆ ಜೀವಾವಧಿ – ಮೂವರು ಯುವಕರಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ!