agumbe woman missing | ಆಗುಂಬೆ : ಮನೆಯಿಂದ ಹೊರಹೋದ ವೃದ್ದೆ ಕಣ್ಮರೆ!

agumbe woman missing | Agumbe : The old woman who left the house has disappeared! ಆಗುಂಬೆ : ಮನೆಯಿಂದ ಹೊರಹೋದ ವೃದ್ದೆ ಕಣ್ಮರೆ – ಪತ್ತೆಗೆ ಸಹಕರಿಸಲು ಪೊಲೀಸ್ ಇಲಾಖೆ ಮನವಿ

ತೀರ್ಥಹಳ್ಳಿ (thirthahalli), ಸೆ. 23: ಮನೆಯಿಂದ ಹೊರಹೋದ ವಯೋವೃದ್ದೆ (aged woman) ಯೋರ್ವರು ನಾಪತ್ತೆಯಾಗಿರುವ ಘಟನೆ, ಶಿವಮೊಗ್ಗ ಜಿಲ್ಲೆ (shimoga district) ತೀರ್ಥಹಳ್ಳಿ ತಾಲೂಕು ಆಗುಂಬೆ ಪೊಲೀಸ್ ಠಾಣಾ (agumbe police station) ವ್ಯಾಪ್ತಿಯ ಕೇಳೂರು ಗ್ರಾಮದಲ್ಲಿ ನಡೆದಿದೆ.

ಈ ಕುರಿತಂತೆ ಪೊಲೀಸ್ ಇಲಾಖೆ (police department) ಸೆ. 23 ರಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಕಮಲಮ್ಮ (76) ನಾಪತ್ತೆಯಾದ ಮಹಿಳೆ ಎಂದು ಗುರುತಿಸಲಾಗಿದೆ.

ಸೆ. 3 ರಂದು ಮನೆಯಿಂದ ಹೊರಹೋದ ಇವರು ಮತ್ತೆ ಮನೆಗೆ ಹಿಂದಿರುಗಿಲ್ಲ. ಕುಟುಂಬದವರು ಎಲ್ಲೆಡೆ ಶೋಧ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ.

ವೃದ್ದೆಯು 5 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ದುಂಡುಮುಖ, ಗೋಧಿ ಮೈಬಣ್ಣ ಹೊಂದಿರುತ್ತಾರೆ. ತಲೆಯಲ್ಲಿ 5 ಇಂಚು ಉದ್ದದ ಬಿಳಿ ಕೂದಲಿರುತ್ತದೆ.  ಕನ್ನಡ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ  ಬಿಳಿ ಬಣ್ಣದ ಚೌಕಳಿ ನೈಟಿ ಧರಿಸಿರುತ್ತಾರೆ. 

ಇವರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ ಶಿವಮೊಗ್ಗ ಎಸ್.ಪಿ ಕಚೇರಿ (sp office)  08182-261400, ಡಿವೈಎಸ್‌ಪಿ ತೀರ್ಥಹಳ್ಳಿ ಕಚೇರಿ (dysp office) – 08181-220388, ಸಿಪಿಐ ಮಾಳೂರು – 9480803333, ಪಿಎಸ್‌ಐ ಆಗುಂಬೆ – 9480803314 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ನಾಗರೀಕರಿಗೆ ಪೊಲೀಸ್ ಇಲಾಖೆ ಮನವಿ ಮಾಡಿದೆ.

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: www.udayasaakshi.@gmail.com Mobile : 9242987506

View all posts by B. Renukesha →