Shimoga : Inauguration of Police Community House by Home Minister ಶಿವಮೊಗ್ಗ : ಗೃಹ ಸಚಿವರಿಂದ ಪೊಲೀಸ್ ಸಮುದಾಯ ಭವನ ಉದ್ಘಾಟನೆ

shimoga | ಶಿವಮೊಗ್ಗ : ಗೃಹ ಸಚಿವರಿಂದ ಪೊಲೀಸ್ ಸಮುದಾಯ ಭವನ ಉದ್ಘಾಟನೆ

ಶಿವಮೊಗ್ಗ (shivamogga), ಅ. 26 :  ಶಿವಮೊಗ್ಗದ ಡಿ.ಎ.ಆರ್ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪೊಲೀಸ್ ಸಮುದಾಯ ಭವನ ಉದ್ಘಾಟನೆಯನ್ನು ಶನಿವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ನೆರವೇರಿಸಿದರು.

3.75 ಕೋಟಿ ರೂ. ವೆಚ್ಚದಲ್ಲಿ, ನಿರ್ಮಿತಿ ಕೇಂದ್ರದ ಮೂಲಕ ಪೊಲೀಸ್ ಸಮುದಾಯ ಭವನ ನಿರ್ಮಿಸಲಾಗಿದೆ. 500 ಆಸನಗಳ ಸಾಮರ್ಥ್ಯ, ಊಟದ ಹಾಲ್ ಸೇರಿದಂತೆ ಸುಸಜ್ಜಿತ ಸೌಲಭ್ಯ ಭವನ ಒಳಗೊಂಡಿದೆ.

ಭವನದ ಉದ್ಘಾಟನೆ ವೇಳೆ ಶಾಸಕ ಎಸ್.ಎನ್ ಚನ್ನಬಸಪ್ಪ, ಬಿ.ಕೆ ಸಂಗಮೇಶ್ವರ್, ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿ, ಬಲ್ಕೀಶ್ ಬಾನು, ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ ಸೇರಿದಂತೆ ಮೊದಲಾದವರಿದ್ದರು.

ವಿಮರ್ಶನಾ ಸಭೆ : ಸಮಾರಂಭದ ನಂತರ ಡಿಎಆರ್ ಸಭಾಂಗಣದಲ್ಲಿ ಗೃಹ ಸಚಿವರು ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಪೂರ್ವ ವಯಲ ಉಪ ಪೊಲೀಸ್ ಮಹಾ ನಿರೀಕ್ಷಕರಾದ ಬಿ.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Home Minister Dr. G. Parameshwar inaugurated the newly constructed Police Community Hall in Shimoga’s D.A.R premises on Saturday. MLAs S N Channabasappa, B K Sangameshwar, Belur Gopalakrishna, Legislative Council MLAs Manjunath Bhandari, Balkeesh Banu, D S Arun, Dr. Dhananjaya Sarji and others were present during the inauguration of the Bhavan.

Separate accident cases in shimoga and sagara : four dead! ಶಿವಮೊಗ್ಗ – ಸಾಗರದಲ್ಲಿ ಪ್ರತ್ಯೇಕ ಅಪಘಾತ ಪ್ರಕರಣ : ಬೈಕ್ ನಲ್ಲಿದ್ದ ನಾಲ್ವರು ಸಾವು! Previous post accident news | ಶಿವಮೊಗ್ಗ – ಸಾಗರದಲ್ಲಿ ಪ್ರತ್ಯೇಕ ಅಪಘಾತ ಪ್ರಕರಣ : ಬೈಕ್ ನಲ್ಲಿದ್ದ ನಾಲ್ವರು ಸಾವು!
Shimoga : Sudden visit of the Home Minister to the police station! ಶಿವಮೊಗ್ಗ : ಪೊಲೀಸ್ ಠಾಣೆಗೆ ಗೃಹ ಸಚಿವರ ದಿಢೀರ್ ಭೇಟಿ! Next post shivamogga | ಶಿವಮೊಗ್ಗ : ಪೊಲೀಸ್ ಠಾಣೆಗೆ ಗೃಹ ಸಚಿವರ ದಿಢೀರ್ ಭೇಟಿ!