
shimoga | ಶಿವಮೊಗ್ಗ : ಸರ್ಕಾರಿ ಸಿಟಿ ಬಸ್ ಓಡಿಸಲು ಆಗ್ರಹ!
ಶಿವಮೊಗ್ಗ (shivamogga), ಜ. 17: ಶಿವಮೊಗ್ಗ ನಗರದ ಹೊರವಲಯ ಬೊಮ್ಮನಕಟ್ಟೆ, ಬಸವನಗಂಗೂರು ಸುತ್ತಮುತ್ತಲಿನ ಪ್ರದೇಶಗಳಿಗೆ ಸರ್ಕಾರಿ ಸಿಟಿ ಬಸ್ ಓಡಿಸಲು ಕ್ರಮಕೈಗೊಳ್ಳಬೇಕು ಎಂದು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಚೇತನ್ ಆಗ್ರಹಿಸಿದ್ದಾರೆ.
ಈ ಸಂಬಂಧ ಜ. 17 ರಂದು ಅವರು ನಗರದಲ್ಲಿರುವ ಕೆಎಸ್ಆರ್’ಟಿಸಿ ವಿಭಾಗೀಯ ಕಚೇರಿ ಅಧಿಕಾರಿಗಳಿಗೆ ಸ್ಥಳೀಯ ಆಶ್ರಯ ಗೆಳೆಯರ ಬಳಗದೊಂದಿಗೆ ಮನವಿ ಪತ್ರ ಅರ್ಪಿಸಿದ್ದಾರೆ.
ಈ ಹಿಂದೆ ಶಿವಮೊಗ್ಗ ನಗರದಲ್ಲಿ, ಸರ್ಕಾರಿ ಸಿಟಿ ಬಸ್ ಗಳು ಸಂಚರಿಸುತ್ತಿದ್ದವು. ಆದರೆ ಇದೀಗ ಸರ್ಕಾರಿ ಸಿಟಿ ಬಸ್ ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದ ನಾಗರೀಕರೀಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ರಾಜ್ಯ ಸರ್ಕಾರವು ಶಕ್ತಿ ಯೋಜನೆಯಡಿ, ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಿದರೆ. ಸರ್ಕಾರಿ ಸಿಟಿ ಬಸ್ ಓಡಿಸುವುದರಿಂದ ನಗರ ವ್ಯಾಪ್ತಿಯಲ್ಲಿ ಮಹಿಳೆಯರ ಸಂಚಾರಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ತತ್’ಕ್ಷಣವೇ ಕೆಎಸ್ಆರ್’ಟಿಸಿ ಸಂಸ್ತೆಯು ಬೊಮ್ಮನಕಟ್ಟೆ, ಬಸವನಗಂಗೂರು ಸುತ್ತಮುತ್ತಲಿನ ಪ್ರದೇಶಗಳಿಗೆ ಸರ್ಕಾರಿ ಸಿಟಿ ಬಸ್ ಓಡಿಸಲು ಕ್ರಮಕೈಗೊಳ್ಳಬೇಕು ಎಂದು ಕೆ ಚೇತನ್ ಅವರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಎನ್.ಎಸ್.ಯು.ಐ ನಗರಾಧ್ಯಕ್ಷ ಚರಣ್, ಕಾಂಗ್ರೆಸ್ ವಾರ್ಡ್ ಪ್ರಮುಖರಾದ ರವಿಕುಮಾರ್, ಮೋಹನ್, ಸೂರಜ್, ಅಶೋಕ, ಲಿಂಗರಾಜು, ರಂಜಿತ್, ಗೌತಮ್, ಕಾರ್ತಿಕ್, ಅಶೋಕ್ ಸೇರಿದಂತೆ ಮೊದಲಾದವರಿದ್ದರು.
Youth Congress State General Secretary K Chetan has demanded that steps should be taken to run government city buses to the outskirts of Shimoga City, Bommanakatte and Basavanagungur.
In this regard, on January 17, he submitted a petition to the KSRTC divisional office officials in the city along with a group of locals residence.
Earlier in Shimoga city, government city buses plyed. But now the traffic of government city buses has been stopped. He said that this is causing severe problems to the citizens.