
shimoga | ಶಿವಮೊಗ್ಗ : ರೆಫ್ರಿಜರೇಟರ್ ದುರಸ್ತಿಯಲ್ಲಿ ಲೋಪ – ಗ್ರಾಹಕನಿಗೆ ಪರಿಹಾರ ನೀಡಲು ಆದೇಶ!
ಶಿವಮೊಗ್ಗ (shivamogga), ಮಾ. 14: ರೆಫ್ರಿಜರೇಟರ್ ದುರಸ್ತಿ ಮಾಡಿಕೊಡದೆ ಸೇವಾ ನ್ಯೂನ್ಯತೆ ಎಸಗಿದ ಮಾರಾಟ ಸಂಸ್ಥೆಯು, ಗ್ರಾಹಕನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಶಿವಮೊಗ್ಗ ಜಿಲ್ಲಾ ಗ್ರಾಹಕ ಪರಿಹಾರ ವೇದಿಕೆಗಳ ಆಯೋಗವು ಮಾರ್ಚ್ 11 ರಂದು ತೀರ್ಪು ನೀಡಿದೆ.
ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ ಶಿವಣ್ಣ ಹಾಗೂ ಸದಸ್ಯ ಬಿ ಡಿ ಯೋಗಾನಂದ ಭಾಂಡ್ಯ ಅವರಿದ್ದ ಪೀಠವು ಈ ತೀರ್ಪು ನೀಡಿದೆ.
ಏನೀದು ಪ್ರಕರಣ? : ದೂರುದಾರರಾದ ಗ್ರಾಹಕ ಎಸ್ ವಿ ಲೋಹಿತಾಶ್ವ ಅವರು, ಎದುರುದಾರರಾದ ಶಿವಮೊಗ್ಗದ ಮಾರಾಟ ಮಳಿಗೆಯೊಂದರಿಂದ ರೆಫ್ರಿಜರೇಟರ್ ಖರೀದಿಸಿದ್ದರು. ಈ ವೇಳೆ 2 ವರ್ಷಗಳ ವಾರಂಟಿ ನೀಡಲಾಗಿತ್ತು.
ಸದರಿ ರೆಫ್ರಿಜರೇಟರ್ ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ ಹಾಗೂ ಕೂಲ್ ಆಗುತ್ತಿಲ್ಲವೆಂದು, ಗ್ರಾಹಕನು ಮಾರಾಟ ಮಳಿಗೆಯವರ ಗಮನಕ್ಕೆ ತಂದಿದ್ದರು. 2 ವರ್ಷಗಳ ವಾರಂಟಿ ಅವಧಿಯೊಳಗಿದ್ದ ಕಾರಣದಿಂದ ದುರಸ್ತಿ ಮಾಡಿಕೊಡುವಂತೆ ಕೋರಿದ್ದರು.
ಆದರೆ ಎದುರುದಾರರು ರೆಫ್ರಿಜರೇಟರ್ ದುರಸ್ತಿ ಮಾಡಿಕೊಡದೆ ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಆರೋಪಿಸಿ, ಗ್ರಾಹಕನು ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ನೀಡಿದ್ದರು.
ಆಯೋಗದ ನೋಟೀಸ್ ಹೊರತಾಗಿಯೂ ವಿಚಾರಣೆ ವೇಳೆ ಎದುರುದಾರರು ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಯೋಗವು ದೂರುದಾರರು ಸಲ್ಲಿಸಿದ ಪ್ರಮಾಣ ಪತ್ರ, ದಾಖಲೆ ಹಾಗೂ ವಕೀಲರ ವಾದ ಆಲಿಸಿ ಸೇವಾ ನ್ಯೂನ್ಯತೆಯಾಗಿರುವುದನ್ನು ಪರಿಗಣಿಸಿ ತೀರ್ಪು ನೀಡಿದೆ. ಆದೇಶ ಹೊರಡಿಸಿದ 45 ದಿನದೊಳಗೆ ರಿಫ್ರಿಜರೇಟರ್ ರಿಪೇರಿ ಮಾಡಿಕೊಡಬೇಕು. ಒಂದು ವೇಳೆ ರಿಪೇರಿ ಮಾಡಿಕೊಡಲು ಸಾಧ್ಯವಾಗದಿದ್ದಲ್ಲಿ,
ರೆಫ್ರಿಜರೇಟರ್ ನ್ನು ಒಂದೂವರೆ ವರ್ಷಗಳ ಕಾಲ ಉಪಯೋಗಿಸಿರುವುದರಿಂದ, ಖರೀದಿ ಬೆಲೆಗೆ ಶೇ. 10 ರಷ್ಟು ಸವಕಳಿ ಹಾಗೂ ಜಿಎಸ್’ಟಿ ಕಳೆದು, 27,312 ರೂ.ಗಳನ್ನು ದೂರುದಾರರಿಗೆ, ರೆಫ್ರಿಜರೇಟರ್ ಹಿಂಪಡೆದು ನೀಡಬೇಕು. 5 ಸಾವಿರ ರೂ.ಗಳನ್ನು ಮಾನಸಿಕ ಹಿಂಸೆಗಾಗಿ ಹಾಗೂ 10 ಸಾವಿರ ರೂ.ಗಳನ್ನು ವ್ಯಾಜ್ಯದ ಖರ್ಚಾಗಿ ನೀಡಬೇಕೆಂದು ಪೀಠವು ಆದೇಶ ಹೊರಡಿಸಿದೆ.
Shivamogga, March 14: The Shivamogga District Consumer Redressal Forums Commission has ruled on March 11 that the sales company that committed service deficiency by not repairing the refrigerator should provide appropriate compensation to the consumer. The verdict was given by a bench comprising District Consumer Disputes Redressal Commission Chairman T Shivanna and member B D Yogananda Bhandya.