
shimoga | ಪಡಿತರ ಚೀಟಿದಾರರಿಗೆ ನಗದು ವರ್ಗಾವಣೆ ಸ್ಥಗಿತ, ಮಾರ್ಚ್ ತಿಂಗಳಲ್ಲಿ ಲಭ್ಯವಾಗಲಿರುವ ಅಕ್ಕಿ ಎಷ್ಟು?
ಶಿವಮೊಗ್ಗ (shivamogga), ಮಾ.13 : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ, ಪ್ರಸ್ತುತ ಅಂತ್ಯೋದಯ ಅನ್ನಭಾಗ್ಯ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿ (ಬಿಪಿಎಲ್) ಗಳ ಫಲಾನುಭವಿಗಳಿಗೆ, ಪ್ರತಿ ತಿಂಗಳು ಪಡಿತರ ಚೀಟಿಯ ಕುಟುಂಬ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮುಖಾಂತರ ಅಕ್ಕಿ ಹಣ ವರ್ಗಾಯಿಸುವ ಪ್ರಕ್ರಿಯೆ ಬದಲಾಗಿ, 2025 ರ ಫೆಬ್ರವರಿ ಮಾಹೆಯಿಂದ ಜಾರಿಗೆ ಬರುವಂತೆ ಅರ್ಹ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆ.ಜಿ ಅಕ್ಕಿ ವಿತರಣೆ ಮಾಡಲು ಆದೇಶಿಸಲಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ.
ವಿತರಣೆ ಪ್ರಮಾಣ : ಅಂತ್ಯೋದಯ ಪಡಿತರರಿಗೆ 1 ರಿಂದ 3 ಸದಸ್ಯರಿರುವ ಕಾರ್ಡಿಗೆ 35 ಕೆ.ಜಿ. ಅಕ್ಕಿ. 4 ಸದಸ್ಯರಿರುವ ಕಾರ್ಡಿಗೆ 45 ಕೆ.ಜಿ. ಅಕ್ಕಿ, 5 ಸದಸ್ಯರರಿರುವ ಕಾರ್ಡಿಗೆ 65 ಕೆ.ಜಿ. ಅಕ್ಕಿ, 6 ಸದಸ್ಯರಿರುವ ಕಾರ್ಡಿಗೆ 85 ಕೆ.ಜಿ. ಅಕ್ಕಿ, 7 ಸದಸ್ಯರಿರುವ ಕಾರ್ಡುದಾರರಿಗೆ 105 ಕೆ.ಜಿ ಅಕ್ಕಿ ,8 ಸದಸ್ಯರಿರುವ ಕಾರ್ಡಿಗೆ 125 ಕೆ.ಜಿ. ಅಕ್ಕಿ,
9 ಸದಸ್ಯರಿರುವ ಕಾರ್ಡಿಗೆ 145 ಕೆ.ಜಿ. ಅಕ್ಕಿ, 10 ಸದಸ್ಯರಿರುವ ಕಾರ್ಡಿಗೆ 165 ಕೆ.ಜಿ. ಅಕ್ಕಿ, 11 ಸದಸ್ಯರಿರುವ ಕಾರ್ಡಿಗೆ 185 ಕೆ.ಜಿ. ಅಕ್ಕಿ, 12 ಸದಸ್ಯರಿರುವ ಕಾರ್ಡಿಗೆ 205 ಕೆಜಿ. ಅಕ್ಕಿಯನ್ನು ಹಾಗೂ ಆದ್ಯತಾ ಪಡಿತರ(ಪಿಪಿಹೆಚ್/ಬಿಪಿಎಲ್) ಚೀಟಿಯಲ್ಲಿನ ಪ್ರತಿಯೊಬ್ಬ ಸದಸ್ಯರಿಗೆ 15 ಕೆ.ಜಿ. ಅಕ್ಕಿಯನ್ನು ಕೊಡಲಾಗುತ್ತದೆ.
ಪಡಿತರ ಚೀಟಿದಾರರು ಮಾರ್ಚ್ ತಿಂಗಳ ಅಂತ್ಯದವರೆಗೆ ತಮ್ಮ ವ್ಯಾಪ್ತಿಯ ನ್ಯಾಯ ಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ಕೊಟ್ಟು ರಶೀದಿ ಪಡೆದು ಉಚಿತವಾಗಿ ಆಹಾರಧಾನ್ಯವನ್ನು ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ನ್ಯಾಯ ಬೆಲೆ ಅಂಗಡಿಯವರು ಕಡಿಮೆ ಪ್ರಮಾಣದಲ್ಲಿ ಅಕ್ಕಿಯನ್ನು ವಿತರಿಸಿದಲ್ಲಿ,
ಟೋಲ್‌ಫ್ರೀ ಸಂ.1967, ಆಹಾರ ನಿರೀಕ್ಷಕರ ಮೊ.ಸಂ. 9611195920 ಗೆ ದೂರು ಸಲ್ಲಿಸಬಹುದಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಅನೌಪಚಾರಿಕ ಪಡಿತರ ಪ್ರದೇಶ ಭದ್ರಾವತಿಯ ಸಹಾಯಕ ನಿರ್ದೇಶಕರು(ಪ್ರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Shivamogga, March 13: The Food Department has announced that instead of transferring rice money through direct cash transfer to the bank account of the head of the ration card family every month, an additional 5 kg of rice will be distributed to eligible beneficiaries with effect from February 2025.