Heavy rains in and around Mani, Yadur, and Hulikal! ಮಾಣಿ, ಯಡೂರು, ಹುಲಿಕಲ್ ಸುತ್ತಮುತ್ತ ಧಾರಾಕಾರ ಮಳೆ!

shimoga rain | ಶಿವಮೊಗ್ಗ : ತಾಲೂಕಿನ ವಿವಿಧೆಡೆ ವರ್ಷದ ಮೊದಲ ಮಳೆಯ ಸಿಂಚನ!

ಶಿವಮೊಗ್ಗ (shivamogga), ಮಾ. 21: ಶಿವಮೊಗ್ಗ ತಾಲೂಕಿನ ವಿವಿಧೆಡೆ ಮಾರ್ಚ್ 21 ರ ಶುಕ್ರವಾರ ಸಂಜೆ ವರ್ಷದ ಮೊದಲ ಮಳೆಯಾಯಿತು. ಇದರಿಂದ ಬಿರು ಬಿಸಿಲಿಗೆ ಕಾದ ಕಾವಲಿಯಂತಾಗಿದ್ದ ಭೂಮಿ ಕೊಂಚ ತಂಪಾಗುವಂತಾಯಿತು.

ನಗರದ ಹೊರವಲಯ ಬಸವನಗಂಗೂರು, ಸೋಮಿನಕೊಪ್ಪ, ಕರ್ನಾಟಕ ಗೃಹ ಮಂಡಳಿ ಕಾಲೋನಿ, ಮೋಜಪ್ಪನ ಹೊಸೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು ಮುಕ್ಕಾಲು ಗಂಟೆಗೂ ಅಧಿಕ ಕಾಲ ಮಳೆಯಾಯಿತು.

ಆದರೆ ಶಿವಮೊಗ್ಗ ನಗರ ಸೇರಿದಂತೆ ತಾಲೂಕಿನ ಹಲವೆಡೆ ಮಳೆಯಾಗಿಲ್ಲ. ಮೋಡ ಮುಸುಕಿದ ವಾತಾವರಣವಷ್ಟೆ ಕಂಡುಬಂದಿತು.

ಕಳೆದ ಹಲವು ದಿನಗಳಿಂದ ಮಲೆನಾಡಿನಲ್ಲಿ ಬಿಸಿಲ ಬೇಗೆ ಹೆಚ್ಚಾಗಿದೆ. ರಣ ಬಿಸಿಲಿಗೆ ನಾಗರೀಕರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಮತ್ತೊಂದೆಡೆ, ದಿನದಿಂದ ದಿನಕ್ಕೆ ತಾಪಮಾನದ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಬಿಸಿ ಗಾಳಿಯೂ ಬೀಸುತ್ತಿರುವುದು ನಾಗರೀಕರನ್ನು ಹೈರಾಣಾಗಿಸುವಂತೆ ಮಾಡಿದೆ.

ಈ ನಡುವೆ ಮಲೆನಾಡಿನ ಹಲವೆಡೆ ಕೆಲ ದಿನಗಳಿಂದ ಚದುರಿದಂತೆ ಬೇಸಿಗೆ ಮಳೆಯಾಗುತ್ತಿದೆ. ಇದು ನಾಗರೀಕರಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ಇನ್ನೊಂದೆಡೆ ಭಾರತೀಯ ಹವಾಮಾನ ಇಲಾಖೆಯು ಮಾರ್ಚ್ 25 ರವರೆಗೆ ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.

The first rain of the year fell in various parts of Shivamogga taluk on Friday evening, March 21. This brought some relief to the land, which had been scorched by the scorching sun.

The areas around Basavanagangur, Sominakoppa, Karnataka Housing Board Colony, Mojappana and Hosur on the outskirts of the city received rain for more than three-quarters of an hour.

‘Will DK Shivakumar become CM…?’: What did Siddaramaiah say? ‘ಡಿ ಕೆ ಶಿವಕುಮಾರ್ ಸಿಎಂ ಆಗ್ತಾರಾ…?’ : ಸಿದ್ದರಾಮಯ್ಯ ಹೇಳಿದ್ದೇನು? Previous post bengauru | ಬೆಂಗಳೂರು – ಹನಿ ಟ್ರ್ಯಾಪ್ ಪ್ರಕರಣ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
Siganduru Bridge | Siganduru Bridge asphalting begins! siganduru bridge | ಸಿಗಂದೂರು ಸೇತುವೆ ಡಾಂಬರೀಕರಣ ಆರಂಭ! Next post siganduru bridge | ಸಿಗಂದೂರು ಸೇತುವೆ ಡಾಂಬರೀಕರಣ ಆರಂಭ!