
shimoga | ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದಲ್ಲಿ ಪುರುಷನ ಶವ ಪತ್ತೆ!
ಶಿವಮೊಗ್ಗ (shivamogga), ಮಾ. 25: ಶಿವಮೊಗ್ಗ ನಗರದ ಅಶೋಕ ಸರ್ಕಲ್ ಬಳಿಯ ಖಾಸಗಿ ಬಸ್ ನಿಲ್ದಾಣದ ಫ್ಲ್ಯಾಟ್ ಫಾರಂ ಮೇಲೆ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ.
ಈ ಕುರಿತಂತೆ ಪೊಲೀಸ್ ಇಲಾಖೆ ಮಾ. 25 ರಂದು ಪ್ರಕಟಣೆ ಬಿಡುಗಡೆ ಮಾಡಿದೆ. ಬಸ್ ನಿಲ್ದಾಣದ ಫ್ಲ್ಯಾಟ್ ಫಾರಂ ಮೇಲೆ 35 ರಿಂದ 40 ರ ವಯೋಮಾನದ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.
ಸದರಿ ವ್ಯಕ್ತಿಯನ್ನು ಸಾರ್ವಜನಿಕರ ಸಹಾಯದಿಂದ ಆಂಬುಲೆನ್ಸ್ ಮೂಲಕ, ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಮೃತ ಪಟ್ಟಿರುವುದನ್ನು ಖಚಿತಪಡಿಸಿದ್ದರು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಮೃತ ವ್ಯಕ್ತಿಯ ಹೆಸರು, ವಿಳಾಸ ಸೇರಿದಂತೆ ಪೂರ್ವಾಪರಗಳ ಯಾವುದೇ ಮಾಹಿತಿ ತಿಳಿದುಬಂದಿಲ್ಲ. 5.5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದುಂಡನೆಯ ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾರೆ.
ಬಲಗೈ ಮುಂಗೈ ಮಣಿಕಟ್ಟಿನಲ್ಲಿ ಹಾಗೂ ಹೊರಭಾಗದಲ್ಲಿ, ಹಾವಿನ ಚಿತ್ರವಿರುವ ಹಚ್ಚೆ ಗುರುತಿದೆ. ಹಾಗೆಯೇ ಒಳಭಾಗದಲ್ಲಿ ನೇತ್ರಾವತಿ ಮತ್ತು ಸುನಂದಬಾಯಿ ಎಂಬ ಹೆಸರುಗಳು ಹಚ್ಚೆ ಗುರುತಿದೆ.
ಮೈಮೇಲೆ ತಿಳಿನೀಲಿ, ಪಾಚಿ ಹಾಗೂ ಬಿಳಿ ಬಣ್ಣದ ಚೌಕಳಿಯ ತುಂಬು ತೋಳಿನ ಶರ್ಟ್, ನೀಲಿ ಬಣ್ಣದ ಬಿಳಿ ನಕ್ಷತ್ರ ಚುಕ್ಕಿಯಿರುವ ಬರ್ಮಡಾ ಬಟ್ಟೆ ಧರಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೊಡ್ಡಪೇಟೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : 08182-261414/ 9916882544 ನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
Shivamogga, Mar. 25: The body of an unidentified man was found on the platform of a private bus stand near Ashoka Circle in Shivamogga city. For more information, the announcement states that Doddapet Police Station phone number: 08182-261414/ 9916882544 should be contacted.