Heavy rains in and around Mani, Yadur, and Hulikal! ಮಾಣಿ, ಯಡೂರು, ಹುಲಿಕಲ್ ಸುತ್ತಮುತ್ತ ಧಾರಾಕಾರ ಮಳೆ!

shimoga rain | ಮುಂದಿನ ನಾಲ್ಕು ದಿನಗಳ ಕಾಲ ಮಲೆನಾಡಿನಲ್ಲಿ ಬೇಸಿಗೆ ಮಳೆ ಮುನ್ಸೂಚನೆ!

ಶಿವಮೊಗ್ಗ, ಮಾ. 25: ರಾಜ್ಯದ ಹಲವೆಡೆ ಪೂರ್ವ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಆದರೆ ಮಲೆನಾಡು ಭಾಗದ ಶಿವಮೊಗ್ಗ ಜಿಲ್ಲೆಯ ಹಲವೆಡೆ ಇಲ್ಲಿಯವರೆಗೂ ಮಳೆಯ ಆಗಮನವಾಗಿಲ್ಲ. ಬಿಸಿಲ ಧಗೆಯೇ ಹೆಚ್ಚಾಗಿದೆ.

ಈ ನಡುವೆ ಭಾರತೀಯ ಹವಾಮಾನ ಇಲಾಖೆಯು ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ ಕರಾವಳಿ, ದಕ್ಷಿಣ ಹಾಗೂ ಉತ್ತರ ಒಳನಾಡಿನ ವಿವಿಧೆಡೆ ಮಳೆಯಾಗುವ ಮುನ್ಸೂಚನೆ ನೀಡಿದೆ.

ಮಾರ್ಚ್ 25 ಹಾಗೂ 26 ರಂದು ಧಾರಾಕಾರ ಮಳೆಯಾಗಲಿದೆ. ಮಾ. 27 ಹಾಗೂ 28 ರಂದು ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಎಲ್ಲೆಲ್ಲಿ? : ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ವಿಜಯಪುರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.

ಬಿಸಿಲ ಧಗೆ : ಇತ್ತೀಚೆಗೆ ಶಿವಮೊಗ್ಗ ಜಿಲ್ಲೆ ಕೆಲವೆಡೆ ಚದುರಿದಂತೆ ಮಳೆಯಾಗಿತ್ತು. ಆದರೆ ಜಿಲ್ಲೆಯ ಬಹುತೇಕ ಕಡೆ ಬೇಸಿಗೆ ಮಳೆ ಇನ್ನೂ ಕಾಲಿಟ್ಟಿಲ್ಲ. ಮತ್ತೊಂದೆಡೆ ಜಿಲ್ಲೆಯಲ್ಲಿ ಬಿಸಿಲ ಬೇಗೆ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ತಾಪಮಾನ ಏರುಗತಿಯಲ್ಲಿ ಸಾಗುತ್ತಿದೆ. ಇದು ನಾಗರೀಕರನ್ನು ಹೈರಾಣಾಗುವಂತೆ ಮಾಡಿದೆ.

Shivamogga, Mar. 25: The pre-monsoon rains are in full swing in many parts of the state. However, many parts of Shivamogga district in the Malnad region have not received any rain so far. The heat has only increased.

Meanwhile, the India Meteorological Department has forecast rain in various parts of the state’s coast, south and northern interior for the next four days.

milk price hike | Nandini milk price hike: More burden on consumers! milk price hike | ನಂದಿನಿ ಹಾಲಿನ ದರ ಹೆಚ್ಚಳ : ಗ್ರಾಹಕರಿಗೆ ಮತ್ತಷ್ಟು ಹೊರೆ! Previous post milk price hike | ಹಾಲಿನ ದರ ಏರಿಕೆ ಪ್ರಸ್ತಾಪ : ಸಚಿವ ಸಂಪುಟದ ತೀರ್ಮಾನದತ್ತ ಚಿತ್ತ!
shimoga | Man's body found at Shimoga private bus stand! shimoga | ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದಲ್ಲಿ ಪುರುಷನ ಶವ ಪತ್ತೆ! Next post shimoga | ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದಲ್ಲಿ ಪುರುಷನ ಶವ ಪತ್ತೆ!