shimoga | Police briefings at various places in Shivamogga district: Where? What is the reason? shimoga | ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಪೊಲೀಸ್ ಬ್ರೀಫಿಂಗ್ : ಎಲ್ಲೆಲ್ಲಿ? ಕಾರಣವೇನು?

shimoga | ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಪೊಲೀಸ್ ಬ್ರೀಫಿಂಗ್ : ಎಲ್ಲೆಲ್ಲಿ? ಕಾರಣವೇನು?

ಶಿವಮೊಗ್ಗ (shivamogga), ಏ. 13: ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಏ. 13 ರ ಭಾನುವಾರ ಸಾರ್ವಜನಿಕ ಸ್ಥಳಗಳಲ್ಲಿ, ಪೊಲೀಸ್ ಬ್ರೀಫಿಂಗ್ ಸಭೆಗಳು ಆಯೋಜನೆಯಾಗಿದ್ದವು.

ಈ ಹಿಂದೆ ಪೊಲೀಸ್ ಠಾಣೆಗಳಲ್ಲಿ ಬ್ರೀಫಿಂಗ್ ಸಭೆಗಳು (ದೈನಂದಿನ ಕರ್ತವ್ಯ ನಿರ್ವಹಣೆ ಕುರಿತಂತೆ ಠಾಣಾಧಿಕಾರಿಗಳು ಕೆಳಹಂತದ ಸಿಬ್ಬಂದಿಗಳಿಗೆ ಸಲಹೆ – ಸೂಚನೆ ನೀಡುವುದು) ನಡೆಯುತ್ತಿದ್ದವು. ಕಳೆದ ವರ್ಷದಿಂದ ಎಸ್ಪಿ ಜಿ ಕೆ ಮಿಥುನ್ ಕುಮಾರ್ ಅವರು, ಆಯಾ ಠಾಣಾ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಸಭೆ ಆಯೋಜನೆಗೆ ಕ್ರಮಕೈಗೊಂಡಿದ್ದರು.

ಏ. 13 ರಂದು ಶಿವಮೊಗ್ಗ ನಗರದ  ಲಕ್ಷ್ಮೀ ಕ್ಯಾಂಟೀನ್, ಸೈನ್ಸ್ ಫೀಲ್ಡ್, ತುಂಗಾನಗರ, ವಿನೋಬನಗರ ಎಪಿಎಂಸಿ, ಫ್ರೀಡಂ ಪಾರ್ಕ್, ಕೋಟೆ ರಸ್ತೆ, ಅಶೋಕ ವೃತ್ತ,

ಭದ್ರಾವತಿ ನಗರದ ರೋಟರಿ ಕ್ಲಬ್, ಎಂ ಸರ್ಕಲ್, ಉಜನೀಪುರ, ಶಿವಾಜಿ ವೃತ್ತ, ಉಂಬ್ಳೆಬೈಲು ರಸ್ತೆ, ಚರ್ಚ್ ಮೈದಾನ, ಹೊಳೆಹೊನ್ನೂರು ಭಗೀರಥ ವೃತ್ತ,

ತೀರ್ಥಹಳ್ಳಿ ಟೌನ್  ಮಾರಿಕಾಂಬ ದೇವಸ್ಥಾನ, ಮಾಳೂರಿನ ಬೆಜ್ಜುವಳ್ಳಿ, ಮಾವಿನಕೊಪ್ಪ, ನಗರದ ಚಿಕ್ಕಪೇಟೆ,

ಸಾಗರ ಟೌನ್ ನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಹುಲ್ಲತ್ತಿ, ಜೋಗ, ಆಚಾಪುರ, ಶಿಕಾರಿಪುರದ ಶಿಕಾರಿಪುರ ಟೌನ್, ಸೊರಬ ತಾಲ್ಲೂಕು ಕಛೇರಿ ಹತ್ತಿರ, ಆನವಟ್ಟಿ ಕೋಟಿಪುರದ ಸಾರ್ವಜನಿಕ ಸ್ಥಳಗಳಲ್ಲಿ ಬ್ರೀಫಿಂಗ್ ಸಭೆಗಳು ನಡೆದವು.  

ಶಿವಮೊಗ್ಗ ಎ, ಶಿವಮೊಗ್ಗ ಬಿ, ಭದ್ರಾವತಿ, ಸಾಗರ, ಶಿಕಾರಿಪುರ ಹಾಗೂ ತೀರ್ಥಹಳ್ಳಿ  ಉಪ ವಿಭಾಗದ  ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಆಯಾ ಠಾಣೆಗಳ ಠಾಣಾಧಿಕಾರಿಗಳು ಬ್ರೀಫಿಂಗ್ ಮಾಡಿ ಠಾಣಾ ಸಿಬ್ಬಂದಿಗಳು ನಿರ್ವಹಿಸಬೇಕಾದ ಕರ್ತವ್ಯಗಳು ಹಾಗೂ ಮೇಲಾಧಿಕಾರಿಗಳ ಸೂಚನೆಗಳ ಬಗ್ಗೆ  ತಿಳಿಸಿರುತ್ತಾರೆ.

ಈ ಸಂದರ್ಭದಲ್ಲಿ ಸಂಬಂದಪಟ್ಟ ಪೊಲೀಸ್ ನಿರೀಕ್ಷಕರು, ವೃತ್ತ ನಿರೀಕ್ಷಕರುಗಳು ಉಪಸ್ಥಿತರಿದ್ದರು. ಇದೇ ವೇಳೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕುಂದುಕೊರತೆಯನ್ನು ಆಲಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Shivamogga, Apr. 9: Police briefing meetings were organized at public places in various parts of Shivamogga district on Sunday, Apr. 13. Earlier, briefing meetings (where station officers give advice and instructions to lower-level personnel on the performance of daily duties) were held in police stations. Since last year, SP G K Mithun Kumar had taken steps to organize meetings in public places within the jurisdiction of the respective police stations.

Rainfall has decreased in Malnad: Linganamakki Dam still 8 feet away from filling! ಮಲೆನಾಡಲ್ಲಿ ತಗ್ಗಿದ ಮಳೆ : ಲಿಂಗನಮಕ್ಕಿ ಡ್ಯಾಂ ಭರ್ತಿಗೆ 8 ಅಡಿ ಬಾಕಿ! Previous post shimoga | ಶಿವಮೊಗ್ಗ : ಇನ್ನೂ ಕೆಲ ದಿನಗಳ ಕಾಲ ಭಾರೀ ಮಳೆ ಮುನ್ಸೂಚನೆ!
shimoga APMC vegetable prices | Details of vegetable prices for September 19 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 19 ರ ತರಕಾರಿ ಬೆಲೆಗಳ ವಿವರ Next post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಏ. 14 ರ ತರಕಾರಿ ಬೆಲೆಗಳ ವಿವರ