
shimoga | ಶಿವಮೊಗ್ಗ : ಬೃಹದಾಕಾರದ ಹೆಬ್ಬಾವು ಸಂರಕ್ಷಣೆ!
ಶಿವಮೊಗ್ಗ (shivamogga), ಏ. 30: ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡು ಬೃಹದಾಕಾರದ ಹೆಬ್ಬಾವನ್ನು, ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರು ಸುರಕ್ಷಿತವಾಗಿ ಸಂರಕ್ಷಿಸಿದ ಘಟನೆ ಇತ್ತೀಚೆಗೆ ಶಿವಮೊಗ್ಗ ನಗರದ ಹೊರವಲಯ ಬೊಮ್ಮನಕಟ್ಟೆ ಬಡಾವಣೆಯಲ್ಲಿ ನಡೆದಿದೆ.
ಬಡಾವಣೆಯ ಇ ಬ್ಲಾಕ್ ನ ವೀರಭದ್ರ ಕಾಲೋನಿಯ ಚರಂಡಿಯಲ್ಲಿ ಹಾವು ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ನಾಗರೀಕರು ತಕ್ಷಣವೇ ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ರವಾನಿಸಿದ್ದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಿರಣ್ ಅವರು ಸುರಕ್ಷಿತವಾಗಿ ಹೆಬ್ಬಾವು ರಕ್ಷಿಸಿದ್ದಾರೆ. ಸರಿಸುಮಾರು 10 ಅಡಿ ಉದ್ದದ, 18 ರಿಂದ 20 ಕೆಜಿ ತೂಕದ ಹೆಬ್ಬಾವನ್ನು ರಕ್ಷಿಸಲಾಗಿದೆ.
ಸದರಿ ಹೆಬ್ಬಾವನ್ನು ಅರಣ್ಯ ಇಲಾಖೆ ಸಮ್ಮುಖದಲ್ಲಿ ಅರಣ್ಯಕ್ಕೆ ಬಿಡಲಾಯಿತು ಎಂದು ಕಿರಣ್ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
Shivamogga, Apr. 30: A recent incident took place in Bommanakkatte, a residential area of Shivamogga city, where reptile conservationist Snake Kiran rescued a giant python that was spotted in a residential area. A snake was spotted in the drain of Veerabhadra Colony, Block E of the block. Citizens who noticed it immediately informed reptile conservationist Snake Kiran.
Kiran, who reached the spot after learning about the incident, safely rescued the python. The python, which is approximately 10 feet long and weighs 18 to 20 kg, was rescued. Kiran informed in a statement that the python was released into the forest in the presence of the Forest Department.