shimoga | ಶಿವಮೊಗ್ಗ : ಬಾಕಿ ಪಾವತಿಗೆ ಡೆಡ್‌ಲೈನ್ – ಇಲ್ಲದಿದ್ದರೆ ನೀರು ಪೂರೈಕೆ ಸ್ಥಗಿತ!

Drinking water supply disruptions in various parts of Shivamogga city on January 07-08! ಶಿವಮೊಗ್ಗ ನಗರದ ವಿವಿಧೆಡೆ ಜನವರಿ 07 - 08 ರಂದು ಕುಡಿಯುವ ನೀರು ಪೂರೈಕೆ ವ್ಯತ್ಯಯ!

ಶಿವಮೊಗ್ಗ (shivamogga), ಮೇ 05: ಶಿವಮೊಗ್ಗ ನಗರದಲ್ಲಿ ಕಳೆದ 1 ವರ್ಷಕ್ಕಿಂತ ಮೇಲ್ಪಟ್ಟು ನೀರಿನ ಕಂದಾಯ ಪಾವತಿಸದೆ ಬಾಕಿ ಉಳಿಸಿಕೊಂಡವರು, ಮುಂದಿನ 7 ದಿನದೊಳಗೆ ಪಾವತಿಸಬೇಕು. ಇಲ್ಲದಿದ್ದರೆ ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಚ್ಚರಿಕೆ ನೀಡಿದೆ.

ಈ ಕುರಿತಂತೆ ಮೇ 5 ರಂದು ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಮಿಥುನ್ ಕುಮಾರ್ ಅವರು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ನೀರಿನ ಕಂದಾಯದ ಬಾಕಿ ಮೊತ್ತ ಪಾವತಿಸುವಂತೆ ಮನವಿ ಮಾಡಿದ್ದಾರೆ.

ಡೆಡ್ ಲೈನ್! : ಕರ್ನಾಟಕ ನಗರ ನೀರು ಸರಬರಾಜು ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸವಿರುವ ನೀರಿನ ಬಳಕೆದಾರರು / ಮಾಲಿಕರು 1 ವರ್ಷಕ್ಕಿಂತ ಮೇಲ್ಪಟ್ಟು ನೀರಿನ ಕಂದಾಯ ಬಾಕಿ ಉಳಿಸಿಕೊಂಡಿದ್ದಲ್ಲಿ 7 ದಿನಗಳೊಳಗೆ ಕಡ್ಡಾಯವಾಗಿ ಪಾವತಿಸಬೇಕು ಎಂದು ತಿಳಿಸಿದ್ದಾರೆ.

ತಪ್ಪಿದ್ದಲ್ಲಿ ನೀರಿನ ಸಂಪರ್ಕಗಳನ್ನು ಕಡಿತಗೊಳಿಸಲಾಗುವುದು. ಈ ರೀತಿಯ ಅಹಿತಕರ ಘಟನೆಗೆ ಅವಕಾಶ ನೀಡದೆ ಬಾಕಿಯಿರುವ ನೀರಿನ ಕಂದಾಯ ಪಾವತಿಸುವಂತೆ ಪ್ರಕಟಣೆಯಲ್ಲಿ ನಾಗರೀಕರಿಗೆ ಮನವಿ ಮಾಡಿದ್ದಾರೆ.

Shivamogga, May 05: Those who have not paid their water revenue dues in Shivamogga city for more than a year and have outstanding arrears must pay within the next 7 days. Otherwise, the Karnataka Urban Water Supply and Sewerage Board has warned that their water connections will be disconnected.

In this regard, Mithun Kumar, Assistant Executive Engineer (AEE) of the board, issued a notification on May 5. He appealed to pay the arrears of water revenue.

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: www.udayasaakshi.@gmail.com Mobile : 9242987506

View all posts by B. Renukesha →