shimoga | Shivamogga: Sale of ganja – Three arrested including a person from Madhya Pradesh state! shimoga | ಶಿವಮೊಗ್ಗ : ಗಾಂಜಾ ಮಾರಾಟ – ಮಧ್ಯಪ್ರದೇಶ ರಾಜ್ಯದ ವ್ಯಕ್ತಿ ಸೇರಿ ಮೂವರು ಅರೆಸ್ಟ್!

shimoga | ಶಿವಮೊಗ್ಗ : ಗಾಂಜಾ ಮಾರಾಟ – ಮಧ್ಯಪ್ರದೇಶ ರಾಜ್ಯದ ವ್ಯಕ್ತಿ ಸೇರಿ ಮೂವರು ಅರೆಸ್ಟ್!

ಶಿವಮೊಗ್ಗ (shivamogga), ಮೇ 18: ಉದ್ಯಾನವೊಂದರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ, ಪೊಲೀಸರು ಮೂವರನ್ನು ಬಂಧಿಸಿದ ಘಟನೆ, ಶಿವಮೊಗ್ಗ ನಗರದ ಹೊರವಲಯ ಸೋಮಿನಕೊಪ್ಪ – ಗೆಜ್ಜೇನಹಳ್ಳಿ ರಸ್ತೆಯ ಸವೆನ್ ಹಿಲ್ಸ್ ಬಡಾವಣೆಯಲ್ಲಿ ಮೇ 17 ರಂದು ನಡೆದಿದೆ.

ಮಧ್ಯಪ್ರದೇಶ ರಾಜ್ಯದ ಬರವಾನಿ ಜಿಲ್ಲೆಯ ರಾಜ್ಮಾಲಿ ಗ್ರಾಮದ ನಿವಾಸಿ ರಾಜೇಂದ್ರ ಕಾಣೋಜಿ (22), ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆ ನಿವಾಸಿಗಳಾದ ಜಾವೀದ್ ಅಲ್ಲಿಸಾಬ್ ದೊಡ್ಮನಿ (22) ಹಾಗೂ ಪರಶುರಾಮ್ (19) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಖಚಿತ ವರ್ತಮಾನದ ಮೇರೆಗೆ ಸಿಇಎನ್ ಕ್ರೈಂ ಪೊಲೀಸ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿ ರಾಜೇಂದ್ರ ಕಾಣೋಜಿ ಮಧ್ಯಪ್ರದೇಶದಿಂದ ಗಾಂಜಾ ಸೊಪ್ಪು ತಂದು ಶಿವಮೊಗ್ಗದ ಆರೋಪಿಗಳಿಬ್ಬರಿಗೆ ಮಾರಾಟ ಮಾಡುವ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.

ಬಂಧಿತರಿಂದ 70 ಸಾವಿರ ರೂ. ಮೌಲ್ಯದ 2 ಕೆಜಿ 735 ಗ್ರಾಂ ತೂಕದ ಒಣ ಗಾಂಜಾ, ಹೊಂಡಾ ಕಂಪನಿಯ ಬೈಕ್, 2 ಮೊಬೈಲ್ ಪೋನ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯದ ಮುಂಭಾಗ ಹಾಜರುಪಡಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಮೇ 18 ರಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಸಿಇಎನ್ ಕ್ರೈಂ ಪೊಲೀಸ್ ಠಾಣೆ ಡಿವೈಎಸ್ಪಿ ಕೃಷ್ಣಮೂರ್ತಿ ಕೆ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಎಸ್ಐ ಶೇಖರ್, ಹೆಚ್.ಸಿ ಧರ್ಮನಾಯ್ಕ್, ಅವಿನಾಶ್, ಪಿಸಿಗಳಾದ ನಾರಾಯಣಸ್ವಾಮಿ, ಪರಮೇಶ್ವರಪ್ಪ, ಫಿರ್ದೋಸ್ ಅಹಮದ್, ರವಿ, ಆಂಡ್ರ್ಯೂಸ್ ಜೋನ್ಸ್, ಶರತ್ ಕುಮಾರ್ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ಧಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Shivamogga, May 18: The police arrested three people on charges of selling marijuana near a park on May 17 in the Seven Hills area on the Sominakoppa – Gejjenahalli road on the outskirts of Shivamogga city. Based on a confirmed report, the CEN Crime Police Station police conducted an operation.

What did the Chairman of Shimoga District Guarantee Scheme Authority say about the release of gruhalakshmi scheme balance amount and IT-GST issue? ಗೃಹಲಕ್ಷ್ಮೀ ಯೋಜನೆ ಬಾಕಿ ಮೊತ್ತ ಬಿಡುಗಡೆ ಮತ್ತು ಐಟಿ-ಜಿಎಸ್’ಟಿ ಸಮಸ್ಯೆ ಬಗ್ಗೆ ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರು ಹೇಳಿದ್ದೇನು? Previous post shimoga | ಗೃಹಲಕ್ಷ್ಮೀ ಯೋಜನೆ ಬಾಕಿ ಮೊತ್ತ ಬಿಡುಗಡೆ, ಐಟಿ-ಜಿಎಸ್’ಟಿ ಸಮಸ್ಯೆ ಬಗ್ಗೆ ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರು ಹೇಳಿದ್ದೇನು?
bengaluru rain | Capital city Bengaluru is shaking due to heavy rain! ಭಾರೀ ಮಳೆಗೆ ರಾಜಧಾನಿ ಬೆಂಗಳೂರು ತತ್ತರ! Next post bengaluru rain | ಭಾರೀ ಮಳೆಗೆ ರಾಜಧಾನಿ ಬೆಂಗಳೂರು ತತ್ತರ!