merchant murder case : Police shot a rowdy sheeter in the leg in Shimoga! ಅಡಕೆ ವ್ಯಾಪಾರಿ ಕೊಲೆ ಪ್ರಕರಣ : ಶಿವಮೊಗ್ಗದ ರೌಡಿಶೀಟರ್ ಕಾಲಿಗೆ ಪೊಲೀಸ್ ಗುಂಡೇಟು!

holehonnuru murder case | ಹೊಳೆಹೊನ್ನೂರು | ಅಡಕೆ ವ್ಯಾಪಾರಿ ಕೊಲೆ ಪ್ರಕರಣ : ಶಿವಮೊಗ್ಗದ ರೌಡಿಶೀಟರ್ ಕಾಲಿಗೆ ಪೊಲೀಸ್ ಗುಂಡೇಟು!

ಶಿವಮೊಗ್ಗ (shivamogga), ಮೇ 19: ಅಡಕೆ ಖೇಣಿ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪದ ಮೇರೆಗೆ, ಶಿವಮೊಗ್ಗ ನಗರದ ರೌಡಿಶೀಟರ್ ಓರ್ವನ ಕಾಲಿಗೆ ಹೊಳೆಹೊನ್ನೂರು ಠಾಣೆ ಪೊಲೀಸರು ಗುಂಡಿಕ್ಕಿ ಬಂಧಿಸಿದ ಘಟನೆ ಮೇ 19 ರಂದು ನಡೆದಿದೆ.

ಶಿವಮೊಗ್ಗದ ಬೊಮ್ಮನಕಟ್ಟೆ ಬಡಾವಣೆ ನಿವಾಸಿಯಾದ ಮಂಜುನಾಥ್ ಯಾನೆ ಚಳಿ ಮಂಜ (41) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ವಿನೋಬನಗರ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಶಿವಮೊಗ್ಗ ತಾಲೂಕಿನ ಹೊಳಲೂರು ಸಮೀಪ ಈತ ಅಡಗಿಕೊಂಡಿರುವ ಮಾಹಿತಿ ಪಡೆದ ಇನ್ಸ್’ಪೆಕ್ಟರ್ ಲಕ್ಷ್ಮೀಪತಿ ನೇತೃತ್ವದ ಹೊಳೆಹೊನ್ನೂರು ಠಾಣೆ ಪೊಲೀಸ್ ತಂಡ ಬಂಧನಕ್ಕೆ ತೆರಳಿದೆ. ಈ ವೇಳೆ ಆರೋಪಿಯು ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದ. 

ತಕ್ಷಣವೇ ಇನ್ಸ್’ಪೆಕ್ಟರ್ ಲಕ್ಷ್ಮೀಪತಿ ಅವರು ಆರೋಪಿಯ ಕಾಲಿಗೆ ಗುಂಡಿಕ್ಕಿ ಬಂಧಿಸುವಲ್ಲಿ ಸಫಲರಾಗಿದ್ದಾರೆ. ಆರೋಪಿಯ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಂಬತ್ತು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಭೀಕರ ಕೊಲೆ : ಮೇ 9 ರಂದು ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಕೊಪ್ಪ ಗ್ರಾಮದ ನಿವಾಸಿ, ಅಡಕೆ ವ್ಯಾಪಾರಿ ಹೇಮಣ್ಣ (68) ಎಂಬುವರು ಮುಂಜಾನೆ ವಾಕಿಂಗ್ ತೆರಳಿದ್ದ ವೇಳೆ ಚೂರಿಯಿಂದ ಇರಿದು ಭೀಕರವಾಗಿ ಕೊಲೆ ಮಾಡಲಾಗಿತ್ತು.

ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಈಗಾಗಲೇ ತಂಜಿಮ್ ಎಂಬ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದರು.

shivamogg, may 19: An incident occurred on May 19 when the Holehonnur police shot and arrested a rowdy sheeter from Shivamogga city. A police team led by Inspector Lakshmipathi from Holehonnur police station, who received information that the accused was hiding near Holalur in Shivamogga taluk, went to arrest him. During this time, the accused attacked the police and tried to escape.

bengaluru rain | Capital city Bengaluru is shaking due to heavy rain! ಭಾರೀ ಮಳೆಗೆ ರಾಜಧಾನಿ ಬೆಂಗಳೂರು ತತ್ತರ! Previous post bengaluru rain | ಭಾರೀ ಮಳೆಗೆ ರಾಜಧಾನಿ ಬೆಂಗಳೂರು ತತ್ತರ!
shimoga | Waterlogged during rains - Bangalore's plight is also in Shivamogga city: Will the administrators wake up? shimoga | ಮಳೆ ವೇಳೆ ಜಲಾವೃತ - ಶಿವಮೊಗ್ಗ ನಗರದಲ್ಲಿಯೂ ಬೆಂಗಳೂರು ದುಃಸ್ಥಿತಿ : ಎಚ್ಚೆತ್ತುಕೊಳ್ಳುವರೆ ಆಡಳಿತಗಾರರು? Next post shimoga | ಮಳೆ ವೇಳೆ ಜಲಾವೃತ – ಶಿವಮೊಗ್ಗ ನಗರದಲ್ಲಿಯೂ ಬೆಂಗಳೂರು ದುಃಸ್ಥಿತಿ : ಎಚ್ಚೆತ್ತುಕೊಳ್ಳುವರೆ ಆಡಳಿತಗಾರರು?