
shimoga | ಮಳೆ ವೇಳೆ ಜಲಾವೃತ – ಶಿವಮೊಗ್ಗ ನಗರದಲ್ಲಿಯೂ ಬೆಂಗಳೂರು ದುಃಸ್ಥಿತಿ : ಎಚ್ಚೆತ್ತುಕೊಳ್ಳುವರೆ ಆಡಳಿತಗಾರರು?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಮೇ 19: ಭಾರೀ ಮಳೆಯಾದ ವೇಳೆ, ಬೆಂಗಳೂರು ಮಹಾನಗರ ಅಕ್ಷರಶಃ ಕೆರೆಯಂತಾಗಿ ಪರಿಣಮಿಸುತ್ತಿದೆ. ಜಲಾವೃತ ಸಮಸ್ಯೆ ಬೆಂಬಿಡದೆ ಕಾಡುತ್ತಿದೆ. ಇದೇ ದುಃಸ್ಥಿತಿ ಇತ್ತೀಚೆಗಿನ ವರ್ಷಗಳಲ್ಲಿ ‘ಮಲೆನಾಡ ನಗರಿ’ ಖ್ಯಾತಿಯ ಶಿವಮೊಗ್ಗದಲ್ಲಿಯೂ ಎದುರಾಗುತ್ತಿದೆ!
ಹೌದು. ಕಳೆದ ಕೆಲ ವರ್ಷಗಳಿಂದ ಶಿವಮೊಗ್ಗ ನಗರದಲ್ಲಿ ಭಾರೀ ಮಳೆಯಾದ ವೇಳೆಯಲ್ಲೆಲ್ಲ ದೊಡ್ಡ ಪ್ರಮಾಣದಲ್ಲಿ ಜಲಾವೃತ ಸಮಸ್ಯೆ ಸೃಷ್ಟಿಯಾಗುತ್ತಿದೆ. ಜನವಸತಿ ಪ್ರದೇಶಗಳು, ರಸ್ತೆಗಳು ಕರೆಗಳಂತಾಗಿ ಪರಿಣಮಿಸುತ್ತಿವೆ. ನಾಗರೀಕರು ಇನ್ನಿಲ್ಲದ ಸಮಸ್ಯೆ ಎದುರಿಸುವಂತಾಗಿದೆ.
ಆದರೆ ಜಲಾವೃತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಯಾವುದೇ ಪರಿಣಾಮಕಾರಿ ಕ್ರಮಗಳತ್ತ ಚಿತ್ತ ಹರಿಸಿಲ್ಲ. ಇದರಿಂದ ವರ್ಷದಿಂದ ವರ್ಷಕ್ಕೆ ಜಲಾವೃತ ಸಮಸ್ಯೆ ಉಲ್ಭಣಿಸುತ್ತಿದ್ದು, ಹೆಮ್ಮರವಾಗಿ ಬೆಳೆಯುತ್ತಿದೆ.
ಕಾರಣವೇನು? : ಈ ಹಿಂದೆ ಭಾರೀ ಮಳೆಯಾದ ವೇಳೆ, ಶಿವಮೊಗ್ಗದ ಕೆಲ ತಗ್ಗು ಪ್ರದೇಶಗಳು ಮಾತ್ರ ಜಲಾವೃತವಾಗುತ್ತಿದ್ದವು. ತುಂಗಾ ನದಿ ಉಕ್ಕಿ ಹರಿದ ವೇಳೆ, ಹಲವೆಡೆ ಪ್ರವಾಹ ಸ್ಥಿತಿ ಎದುರಾಗುತ್ತಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ ನಗರದ ಪ್ರತಿಷ್ಠಿತ ಬಡಾವಣೆಗಳು, ಜಲಾವೃತ ಸಮಸ್ಯೆಯೇ ಎದುರಿಸದಿದ್ದ ಪ್ರದೇಶಗಳು ಕೆರೆಯಂತಾಗಿ ಪರಿಣಮಿಸುತ್ತಿವೆ. ಪ್ರಮುಖ ರಸ್ತೆಗಳು ಜಲಮಯವಾಗುತ್ತಿವೆ.
ಇದಕ್ಕೆ ನಗರದಲ್ಲಿ ನೂರಾರು ಕೋಟಿ ರೂ. ವೆಚ್ಚದಲ್ಲಿ ನಡೆದ ಅವೈಜ್ಞಾನಿಕ ಕಾಮಗಾರಿಗಳು ಮುಖ್ಯ ಕಾರಣವಾಗಿವೆ. ಹಾಗೆಯೇ ನಗರದಲ್ಲಿ ಹಾಗೂ ಹೊರವಲಯದ ಪ್ರದೇಶಗಳಲ್ಲಿ ಕಣ್ಮರೆಯಾಗುತ್ತಿರುವ ಕೆರೆಕಟ್ಟೆಗಳು, ಒತ್ತುವರಿಯಾಗಿರುವ ರಾಜಕಾಲುವೆ – ಚರಂಡಿಗಳು,
ಬೇಕಾಬಿಟ್ಟಿಯಾಗಿ ನಿರ್ಮಾಣವಾಗುತ್ತಿರುವ ಲೇಔಟ್ ಗಳು, ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವ ಕನಿಷ್ಠ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದಿರುವುದರಿಂದ ಜಲಾವೃತ ಸಮಸ್ಯೆ ಉಲ್ಬಣಿಸುವಂತಾಗಿದೆ ಎಂದು ಪ್ರಜ್ಞಾವಂತ ನಾಗರೀಕರು ಆರೋಪಿಸುತ್ತಾರೆ.
‘ಈ ಎಲ್ಲ ಕಾರಣಗಳಿಂದ ಭಾರೀ ಮಳೆಯಾದ ವೇಳೆ ಬೆಂಗಳೂರು ರೀತಿಯಲ್ಲಿ ಶಿವಮೊಗ್ಗ ನಗರವೂ ಮುಳುಗಡೆಯಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಜಲಾವೃತ ಸ್ಥಿತಿ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ’ ಎಂದು ನಾಗರೀಕರು ಅಭಿಪ್ರಾಯಪಡುತ್ತಾರೆ.
ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಮಹಾನಗರ ಪಾಲಿಕೆ ಆಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ. ನಗರದಲ್ಲಿ ಕೆರೆಗಳ ಸಂರಕ್ಷಣೆಗೆ ಒತ್ತು ನೀಡಬೇಕಾಗಿದೆ. ಕೆರೆಗಳು, ನೀರು ಹರಿದು ಹೋಗುವ ಕಾಲುವೆಗಳು, ರಾಜಕಾಲುವೆ, ಚರಂಡಿಗಳ ಒತ್ತುವರಿ ತೆರವುಗೊಳಿಸಬೇಕಾಗಿದೆ. ಜಲಾವೃತವಾಗುವ ಪ್ರದೇಶಗಳನ್ನು ಗುರುತಿಸಿ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಇಲ್ಲದಿದ್ದರೆ ಭವಿಷ್ಯದಲ್ಲಿ ಸದ್ಯ ಬೆಂಗಳೂರು ನಗರ ಎದುರಿಸುತ್ತಿರುವ ಸಮಸ್ಯೆಗಿಂತಲೂ ಅತೀ ದೊಡ್ಡ ಜಲಾವೃತ ದುಃಸ್ಥಿತಿಯನ್ನು ಶಿವಮೊಗ್ಗ ನಗರ ಎದುರಿಸಬೇಕಾಗುತ್ತದೆ ಎಂದು ಪ್ರಜ್ಞಾವಂತ ನಾಗರೀಕರು ಎಚ್ಚರಿಕೆ ನೀಡುತ್ತಾರೆ.
Shivamogga, May 19: During heavy rains, Bengaluru literally turns into a lake. The problem of waterlogging is a constant problem. The same situation has been faced in Shivamogga in recent years!
Yes. For the past few years, whenever there has been heavy rain in Shivamogga city, there has been a huge problem of waterlogging. Residential areas and roads are becoming like canals. Citizens are facing unprecedented problems.
But the administration has completely failed to find a permanent solution to the waterlogging problem. It has not taken any effective measures. As a result, the waterlogging problem is worsening year after year and is growing exponentially.