Shivamogga Municipal Corporation Shelter Department Officer Caught in Lokayukta Trap! ಶಿವಮೊಗ್ಗ ಮಹಾನಗರ ಪಾಲಿಕೆ ಆಶ್ರಯ ವಿಭಾಗದ ಅಧಿಕಾರಿ ಲೋಕಾಯುಕ್ತ ಬಲೆಗೆ!

shikaripura | ಶಿಕಾರಿಪುರ : 10 ಸಾವಿರ ರೂ. ಲಂಚ ಪಡೆಯುವ ವೇಳೆ ಸರ್ಕಾರಿ ಆಸ್ಪತ್ರೆ ವೈದ್ಯ ಲೋಕಾಯುಕ್ತ ಬಲೆಗೆ!

ಶಿಕಾರಿಪುರ (shikaripura), ಮೇ 20: ಮರಣೋತ್ತರ ಪರೀಕ್ಷೆ ವರದಿ ನೀಡಲು ವ್ಯಕ್ತಿಯೋರ್ವರಿಂದ 10 ಸಾವಿರ ರೂ. ಲಂಚ ಪಡೆಯುತ್ತಿದ್ದ ಸರ್ಕಾರಿ ಆಸ್ಪತ್ರೆಯ ವೈದ್ಯರೋರ್ವರನ್ನು, ಲಂಚದ ಹಣದ ಸಮೇತ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದ ಘಟನೆ, ಮೇ 20 ರಂದು ಶಿಕಾರಿಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಡಾ. ಗೋಪಾಲ್ ಜಿ ಹರಿಗಿ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದ ವೈದ್ಯರೆಂದು ಗುರುತಿಸಲಾಗಿದೆ. ಇವರ ವಿರುದ್ದ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಂಜುನಾಥ್ ಚೌಧರಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಚಂದ್ರಶೇಖರ್ ಬಿ ಪಿ ನೇತೃತ್ವದಲ್ಲಿ ಇನ್ಸ್’ಪೆಕ್ಟರ್ ಗುರುರಾಜ್ ಎನ್ ಎಂ ಅವರು ಟ್ರ್ಯಾಪ್ ಮಾಡಿದ್ದಾರೆ. ಕಾರ್ಯಾಚರಣೆ ವೇಳೆ ಲೋಕಾಯುಕ್ತ ಪೊಲೀಸ್ ಅಧಿಕಾರಿ – ಸಿಬ್ಬಂದಿಗಳು ಉಪಸ್ಥಿತರಿದ್ದರು ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಕರಣದ ಹಿನ್ನೆಲೆ : ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿ ಗ್ರಾಮದ ನಿವಾಸಿ ಸುನೀಲ್ ಎನ್ ವೈ ಎಂಬುವರು ದೂರುದಾರರಾಗಿದ್ದಾರೆ. ಇವರು ಮೇ 19 ರಂದು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ, ಸ್ನೇಹಿತ ರಾಜೇಶ್ ಎಂಬುವರ ಅಕ್ಕನ ಗಂಡನ ಮರಣೋತ್ತರ ಪರೀಕ್ಷೆ ವರದಿ ಕೋರಿದ್ದರು.

ಈ ವೇಳೆ ಡಾ. ಗೋಪಾಲ್ ಜಿ ಹರಿಗಿ ಅವರು 20 ಸಾವಿರ ರೂ. ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದು, ಅಂತಿಮವಾಗಿ 10 ಸಾವಿರ ರೂ. ನೀಡಿದರೆ ಮರಣೋತ್ತರ ಪರೀಕ್ಷೆ ವರದಿ ನೀಡುವುದಾಗಿ ತಿಳಿಸಿದ್ದರು. ಈ ಕುರಿತಂತೆ ದೂರುದಾರ ಸುನೀಲ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಮೇ 19 ರಂದು ಶಿಕಾರಿಪುರ ಸರ್ಕಾರಿ ಆಸ್ಪತ್ರೆಯ ಕೊಠಡಿಯಲ್ಲಿ ಡಾ. ಗೋಪಾಲ್ ಜಿ ಹರಿಗಿ ಅವರು, ದೂರುದಾರರಿಂದ 10 ಸಾವಿರ ರೂ. ಲಂಚ ಪಡೆಯುವ ವೇಳೆ, ಲೋಕಾಯುಕ್ತ ಪೊಲೀಸ್ ತಂಡ ದಾಳಿ ನಡೆಸಿ ಲಂಚದ ಹಣದ ಸಮೇತ ವೈದ್ಯರನ್ನು ವಶಕ್ಕೆ ಪಡೆದುಕೊಂಡಿದೆ.

Shikaripura, May 20: The Lokayukta police have arrested a doctor of a government hospital who was receiving a bribe of Rs 10,000 from a person to provide a post-mortem report. The incident took place on May 20 at the government hospital in Shikaripura town.

Rainfall has decreased in Malnad: Linganamakki Dam still 8 feet away from filling! ಮಲೆನಾಡಲ್ಲಿ ತಗ್ಗಿದ ಮಳೆ : ಲಿಂಗನಮಕ್ಕಿ ಡ್ಯಾಂ ಭರ್ತಿಗೆ 8 ಅಡಿ ಬಾಕಿ! Previous post shimoga rain alert | ಶಿವಮೊಗ್ಗ |ಮಲೆನಾಡಲ್ಲಿ ಭಾರೀ ಮಳೆ ಸಾಧ್ಯತೆ : ರೆಡ್ ಅಲರ್ಟ್ ಮುನ್ಸೂಚನೆ!
Power outage in areas around Shivamogga Airport on Sept. 23 ಶಿವಮೊಗ್ಗ ವಿಮಾನ ನಿಲ್ದಾಣ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆ. 23 ರಂದು ವಿದ್ಯುತ್ ವ್ಯತ್ಯಯ Next post shimoga | ಶಿವಮೊಗ್ಗ : ಮೇ 22 ರಂದು 30 ಕ್ಕೂ ಅಧಿಕ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ!