Shimoga: Brother of Kumsi village - their arrest! ಶಿವಮೊಗ್ಗ : ಕುಂಸಿ ಗ್ರಾಮದ ಅಣ್ಣ – ತಮ್ಮ ಅರೆಸ್ಟ್!

shimoga crime news | ಶಿವಮೊಗ್ಗ : ಕುಂಸಿ ಗ್ರಾಮದ ಅಣ್ಣ – ತಮ್ಮ ಅರೆಸ್ಟ್!

ಶಿವಮೊಗ್ಗ (shivamogga), ಜು. 2: ವ್ಯಕ್ತಿಯೋರ್ವರ ಕೊ**ಲೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇರೆಗೆ, ಶಿವಮೊಗ್ಗ ತಾಲೂಕಿನ ಕುಂಸಿ ಠಾಣೆ ಪೊಲೀಸರು ಅಣ್ಣ ಹಾಗೂ ಆತನ ತಮ್ಮನನ್ನು ಬಂಧಿಸಿದ ಘಟನೆ ನಡೆದಿದೆ.

ಕುಂಸಿ ಗ್ರಾಮದ ಎ ಕೆ ಕಾಲೋನಿ ನಿವಾಸಿ ಮಲ್ಲೇಶಪ್ಪ ಎಂಬುವರ ಪುತ್ರರಾದ ಹರೀಶ್ (23) ಹಾಗೂ ಆಕಾಶ್ (21) ಬಂಧಿತ ಅಣ್ಣ – ತಮ್ಮ ಎಂದು ಗುರುತಿಸಲಾಗಿದೆ. ಇವರಿಬ್ಬರು ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಆಯುಧ ವಶಕ್ಕೆ ಪಡೆದುಕೊಳ್ಳಲಾಗಿದೆ. ಇಬ್ಬರನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಘಟನೆ ಹಿನ್ನೆಲೆ : ಜೂನ್ 29 ರ ರಾತ್ರಿ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಮರಸ ರಸ್ತೆಯಲ್ಲಿ ವಸಂತ್ (36) ಎಂಬಾತನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊ**ಲೆ ಮಾಡಲಾಗಿತ್ತು.

ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ವಸಂತ್ ಹ**ತ್ಯೆ ಮಾಡಲಾಗಿದೆ ಎಂಬ ವಿಚಾರವನ್ನು, ಆರೋಪಿಗಳು ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇನ್ಸ್’ಪೆಕ್ಟರ್ ದೀಪಕ್ ಎಂ ಎಸ್, ಸಬ್ ಇನ್ಸ್’ಪೆಕ್ಟರ್ ಶಾಂತರಾಜ್, ಸಿಬ್ಬಂದಿಗಳಾದ ಹೆಚ್’ಸಿ ಪ್ರಕಾಶ್, ರಾಘುಶೆಟ್ಟಿ, ವಾಹನ ಚಾಲಕ ಶಿವಪ್ಪ, ಪಿಸಿಗಳಾದ ಶಶಿಧರ್, ಮಂಜುನಾಥ್, ರಘು, ನಿತಿನ್, ಆದರ್ಶ, ವಿನಾಯಕ, ಶಶಿಧರ್, ಬುರಾನ್ ರವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. #kumsipolicestation, #crimenews, #kumsi,

Shivamogga: Police catch man selling marijuana! ಶಿವಮೊಗ್ಗ : ಗಾಂಜಾ ಮಾರುತ್ತಿದ್ದವ ಪೊಲೀಸ್ ಬಲೆಗೆ! Previous post shimoga crime news | ಶಿವಮೊಗ್ಗ : ಗಾಂಜಾ ಮಾರುತ್ತಿದ್ದವ ಪೊಲೀಸ್ ಬಲೆಗೆ!
Rainfall has decreased in Malnad: Linganamakki Dam still 8 feet away from filling! ಮಲೆನಾಡಲ್ಲಿ ತಗ್ಗಿದ ಮಳೆ : ಲಿಂಗನಮಕ್ಕಿ ಡ್ಯಾಂ ಭರ್ತಿಗೆ 8 ಅಡಿ ಬಾಕಿ! Next post hosanagara BREAKING NEWS | ಭಾರೀ ಮಳೆ : ಹೊಸನಗರ ತಾಲೂಕಿನ ಶಾಲಾ – ಕಾಲೇಜುಗಳಿಗೆ ಜುಲೈ 3 ರಂದು ರಜೆ ಘೋಷಣೆ!