Decision to release water from Bhadra Reservoir to canals ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲು ನಿರ್ಧಾರ

shimoga | bhadra dam | ಭದ್ರಾ ಜಲಾಶಯ ಭರ್ತಿಗೆ ಕೇವಲ 16 ಅಡಿ ಬಾಕಿ!

ಶಿವಮೊಗ್ಗ (shivamogga), ಜು. 6: ಮಧ್ಯ ಕರ್ನಾಟಕ ಭಾಗದ ಜಿಲ್ಲೆಗಳ ಪ್ರಮುಖ ಜಲಾಶಯವಾದ ಭದ್ರಾ ಭರ್ತಿಗೆ ಇನ್ನೂ ಕೇವಲ 16 ಅಡಿ ನೀರು ಸಂಗ್ರಹವಾಗಬೇಕಾಗಿದೆ. ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಮುಂದುವರಿದರೆ, ಇನ್ನೂ ಕೆಲ ವಾರಗಳಲ್ಲಿಯೇ ಡ್ಯಾಂ ಗರಿಷ್ಠ ಮಟ್ಟಕ್ಕೆ ತಲುಪಲಿದೆ!

ಜುಲೈ 7 ರ ಬೆಳಿಗ್ಗೆಯ ಮಾಹಿತಿಯಂತೆ 170.9 (ಗರಿಷ್ಠ ಮಟ್ಟ : 186) ಅಡಿ ನೀರು ಸಂಗ್ರಹವಾಗಿದೆ. 20,626 ಕ್ಯೂಸೆಕ್ ಒಳಹರಿವಿದ್ದು, 5198 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 131.10 ಅಡಿಯಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷ 39. 6 ಅಡಿಯಷ್ಟು ಹೆಚ್ಚು ನೀರು ಸಂಗ್ರಹವಾಗಿದೆ. ಇತ್ತೀಚೆಗಿನ ವರ್ಷಗಳಿಗೆ ಹೋಲಿಸಿದರೆ, ಭದ್ರಾ ಡ್ಯಾಂನಲ್ಲಿ ಪ್ರಸ್ತುತ ದಾಖಲೆ ಪ್ರಮಾಣದ ನೀರು ಸಂಗ್ರಹವಾಗಿದೆ.

ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯದ #linganamakkidam ನೀರಿನ ಮಟ್ಟ 1793.65 (ಗರಿಷ್ಠ ಮಟ್ಟ : 1819) ಅಡಿಯಿದೆ. ಪ್ರಸ್ತುತ ಡ್ಯಾಂನ ಒಳಹರಿವು 31,684 ಕ್ಯೂಸೆಕ್ ಇದ್ದು, 2877 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 1766 ಅಡಿಯಿತ್ತು.

ಉಳಿದಂತೆ ತುಂಗಾ ಜಲಾಶಯದ #tungadam ಒಳಹರಿವು 46,042 ಕ್ಯೂಸೆಕ್ ಇದ್ದು, 38,380 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಇಳಿಮುಖವಾಗಿರುವ ಕಾರಣದಿಂದ ತುಂಗ, ಭದ್ರಾ ಹಾಗೂ ಲಿಂಗನಮಕ್ಕಿ ಡ್ಯಾಂಗಳ ಒಳಹರಿವಿನಲ್ಲಿ ಕೊಂಚ ಇಳಿಕೆ ಕಂಡುಬಂದಿದೆ.

Shivamogga, Jul. 6: Bhadra, the main reservoir of the districts of central Karnataka, needs only 16 feet of water to be filled. If the rains continue in the basin, the dam will reach its maximum level in a few more weeks!

Mini bus overturns at AA roundabout in Shimoga city! ಶಿವಮೊಗ್ಗ ನಗರದ ಎಎ ವೃತ್ತದಲ್ಲಿ ಪಲ್ಟಿಯಾದ ಮಿನಿ ಬಸ್! Previous post shimoga accident news | ಶಿವಮೊಗ್ಗ ನಗರದ ಎಎ ವೃತ್ತದಲ್ಲಿ ಪಲ್ಟಿಯಾದ ಮಿನಿ ಬಸ್!
shimoga | ‘Road or… muddy field..!’: Is the Shivamogga Municipal Corporation administration turning a blind eye? ‘ರಸ್ತೆಯೋ… ಕೆಸರು ಗದ್ದೆಯೋ..!’ : ಕಣ್ಮುಚ್ಚಿ ಕುಳಿತಿದೆಯೇ ಶಿವಮೊಗ್ಗ ಪಾಲಿಕೆ ಆಡಳಿತ? Next post shimoga | ‘ರಸ್ತೆಯೋ… ಕೆಸರು ಗದ್ದೆಯೋ..!’ : ಕಣ್ಮುಚ್ಚಿ ಕುಳಿತಿದೆಯೇ ಶಿವಮೊಗ್ಗ ಪಾಲಿಕೆ ಆಡಳಿತ?