shimoga | ‘Road or… muddy field..!’: Is the Shivamogga Municipal Corporation administration turning a blind eye? ‘ರಸ್ತೆಯೋ… ಕೆಸರು ಗದ್ದೆಯೋ..!’ : ಕಣ್ಮುಚ್ಚಿ ಕುಳಿತಿದೆಯೇ ಶಿವಮೊಗ್ಗ ಪಾಲಿಕೆ ಆಡಳಿತ?

shimoga | ‘ರಸ್ತೆಯೋ… ಕೆಸರು ಗದ್ದೆಯೋ..!’ : ಕಣ್ಮುಚ್ಚಿ ಕುಳಿತಿದೆಯೇ ಶಿವಮೊಗ್ಗ ಪಾಲಿಕೆ ಆಡಳಿತ?

ಶಿವಮೊಗ್ಗ (shivamogga), ಜು. 7: ಶಿವಮೊಗ್ಗ ಮಹಾನಗರ ಪಾಲಿಕೆ 14 ನೇ ವಾರ್ಡ್ ವ್ಯಾಪ್ತಿಯ ವಡ್ಡಿನಕೊಪ್ಪದ ಪೋದಾರ್ ಇಂಟರ್ ನ್ಯಾಷನಲ್ ಶಾಲೆ ಸಂಪರ್ಕ ರಸ್ತೆಯು ಅಕ್ಷರಶಃ ಕೆಸರು ಗದ್ದೆಯಂತಾಗಿದ್ದು, ಜನ – ವಾಹನಗಳ ಸಂಚಾರ ದುಸ್ತರವಾಗಿ ಪರಿಣಮಿಸಿದೆ.

ರಸ್ತೆಗೆ ಹಾಕಿದ್ದ ಡಾಂಬರ್ ಕಿತ್ತು ಹೋಗಿ ಹಲವು ವರ್ಷಗಳೇ ಆಗಿದ್ದು, ಸದ್ಯ ಕಚ್ಚಾ ರಸ್ತೆಯಂತಾಗಿ ಪರಿವರ್ತಿತವಾಗಿದೆ. ಭಾರೀ ದೊಡ್ಡ ಪ್ರಮಾಣದ ಗುಂಡಿ – ಗೊಟರುಗಳು ಬಿದ್ದಿವೆ. ಪಾದಚಾರಿಗಳಿರಲಿ, ವಾಹನಗಳು ಓಡಾಡಲು ಸಾಧ್ಯವಾಗದಂತಾಗಿದೆ ಎಂದು ಕೆಲ ಸ್ಥಳೀಯರು ದೂರುತ್ತಾರೆ.

ಸದರಿ ರಸ್ತೆಯು ದುಮ್ಮಳ್ಳಿ – ತೋಪಿನಘಟ್ಟ ಮೊದಲಾದ ಪ್ರದೇಶಗಳಿಗೆ ಸಂಪರ್ಕ ರಸ್ತೆಯಾಗಿದೆ. ಹಾಗೆಯೇ ಹಲವು ವಸತಿ ಬಡಾವಣೆಗಳು ನಿರ್ಮಾಣವಾಗಿವೆ. ಜೊತೆಗೆ ಪೋದಾರ್ ಇಂಟರ್ ನ್ಯಾಷನಲ್ ಖಾಸಗಿ ಶಾಲೆಯಿದ್ದು, ಸದರಿ ಶಾಲೆಯಲ್ಲಿ ಸುಮಾರು 2000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.

ಪ್ರತಿನಿತ್ಯ ಸದರಿ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ ಇಲ್ಲಿಯವರೆಗೂ ರಸ್ತೆ ಅವ್ಯವಸ್ಥೆ ಸರಿಪಡಿಸಲು ಆಡಳಿತ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿದೆ. ತನಗೂ ರಸ್ತೆಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿದೆ ಎಂದು ನಾಗರೀಕರು ದೂರುತ್ತಾರೆ.   

ರಸ್ತೆ ಅಭಿವೃದ್ದಿಗೆಂದು ಈ ಹಿಂದೆ ಹಲವು ಜನಪ್ರತಿನಿಧಿಗಳು ಅನುದಾನ ಮಂಜೂರು ಮಾಡಿದ್ದರು. ಆದಾಗ್ಯೂ ಪಾಲಿಕೆ ಆಡಳಿತ ತನ್ನ ವ್ಯಾಪ್ತಿಯವರೆಗಿನ ರಸ್ತೆ ಅಭಿವೃದ್ದಿಗೆ ಕ್ರಮಕೈಗೊಂಡಿಲ್ಲ. ಕೆಲವರು ರಸ್ತೆ ಜಾಗ ತಮಗೆ ಸೇರಿದ್ದಾಗಿದೆ ಎಂದು ಹೇಳುತ್ತಿದ್ದಾರೆ.

ಆದರೆ ಹಲವು ದಶಕಗಳಿಂದ ರಸ್ತೆಯಿದೆ. ನಕಾಶೆಯಲ್ಲಿಯೂ ಮಾಹಿತಿಯಿದೆ. ಈ ಬಗ್ಗೆ ಪಾಲಿಕೆ ಆಡಳಿತ ಕೂಲಂಕಷ ಪರಿಶೀಲನೆ ನಡೆಸಬೇಕು. ನಾಗರೀಕರಿಗೆ ಅನುಕೂಲ ಕಲ್ಪಿಸಿಕೊಡುವ ಕಾರ್ಯ ನಡೆಸಬೇಕಾಗಿದೆ.

ಇತ್ತೀಚೆಗೆ ಸದರಿ ರಸ್ತೆ ಅವ್ಯವಸ್ಥೆ ಸರಿಪಡಿಸುವ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರಿಗೆ ಮನವಿ ಪತ್ರ ಅರ್ಪಿಸಲಾಗಿದ್ದು, ಸಚಿವರು ಸೂಕ್ತ ಕ್ರಮಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದಾಗ್ಯೂ ಇಲ್ಲಿಯವರೆಗೂ ರಸ್ತೆ ಅವ್ಯವಸ್ಥೆ ಸರಿಪಡಿಸಲು ಪಾಲಿಕೆ ಆಡಳಿತ ಮುಂದಾಗಿಲ್ಲ ಎಂದು ನಾಗರೀಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

Shivamogga, Jul. 7: The road connecting Podar International School in Vaddinakoppa, under the 14th ward of Shivamogga Municipal Corporation, is literally like a mud pit, making it difficult for people and vehicles to move around.

Decision to release water from Bhadra Reservoir to canals ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲು ನಿರ್ಧಾರ Previous post shimoga | bhadra dam | ಭದ್ರಾ ಜಲಾಶಯ ಭರ್ತಿಗೆ ಕೇವಲ 16 ಅಡಿ ಬಾಕಿ!
ದೆವ್ವ ಹಿಡಿದಿದೆ ಎಂದು ಹಿಗ್ಗಾಮುಗ್ಗಾ ಥಳಿತಕ್ಕೊಳಗಾದ ಮಹಿಳೆ ಸಾವು! ಶಿವಮೊಗ್ಗ, ಜು. 7: ದೆವ್ವ ಹಿಡಿದಿದೆ ಎಂದು ಹಿಗ್ಗಾಮುಗ್ಗಾ ಥಳಿತಕ್ಕೊಳಗಾದ ಮಹಿಳೆಯೋರ್ವರು ಮೃತಪಟ್ಟ ದಾರುಣ ಘಟನೆ, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ಜಂಬರಗಟ್ಟೆ ಗ್ರಾಮದಲ್ಲಿ ಜು. 6 ರ ಭಾನುವಾರ ತಡರಾತ್ರಿ ನಡೆದಿದೆ. ಹೊಸ ಜಂಬರಘಟ್ಟೆ ಗ್ರಾಮದ ಗೀತಮ್ಮ (55) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದ ಆರೋಪಿದ ಮೇರೆಗೆ ಆಶಾ (45) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಏನೀದು ಘಟನೆ? : ಭಾನುವಾರ ಸಂಜೆ ಮೃತೆ ಗೀತಮ್ಮಅಸ್ವಾಭಾವಿಕವಾಗಿ ವರ್ತಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರ ಪುತ್ರ ಸಂಜಯ್ ಎಂಬುವರು, ಅದೇ ಗ್ರಾಮದ ನಿವಾಸಿಯಾದ ಆರೋಪಿ ಆಶಾಳನ್ನು ಮನೆಗೆ ಕರೆಯಿಸಿದ್ದ. ಮಂಕಾಗಿದ್ದ ಗೀತಮ್ಮಳಿಗೆ ದೆವ್ವ ಹಿಡಿದಿದೆ. ಅದನ್ನು ಬಿಡಿಸುವುದಾಗಿ ಆಶಾ ಹೇಳಿದ್ದಾಳೆ. ನಂತರ ಆಪಾದಿತೆ ಆಶಾ, ‘ನನ್ನ ಮೇಲೆ ಚೌಡಮ್ಮ ದೇವರು ಬಂದಿದೆ. ಗೀತಮ್ಮಳ ಮೇಲಿನ ದೆವ್ವ ಬಿಟ್ಟು ಹೋಗು…’ ಎಂದು ಕೋಲಿನಿಂದ ಹೊಡೆಯಲು ಆರಂಭಿಸಿದ್ದಾಳೆ. ತದನಂತರ ರಾತ್ರಿ 9-30ಕ್ಕೆ ಮನೆಯಿಂದ ಎರಡೂವರೆ ಕಿಲೋಮೀಟರ್ ದೂರವಿರುವ ಹಳೇ ಜಂಬರಘಟ್ಟೆ ಚೌಡಮ್ಮನ ದೇವಸ್ಥಾನದವರೆಗೂ ಹೊಡೆದುಕೊಂಡು ಹೋಗಿದ್ದಾಳೆ. ಆದರೂ ದೆವ್ವ ಬಿಟ್ಟಿಲ್ಲವೆಂದು, ಬೆಳಗಿನ ಜಾವ 2-30 ರವರೆಗೂ ಥಳಿಸುವುದನ್ನು ಬಿಟ್ಟಿಲ್ಲ ಎನ್ನಲಾಗಿದೆ. ಹಲ್ಲೆಯಿಂದ ತೀವ್ರ ಅಸ್ವಸ್ಥಗೊಂಡು ಗೀತಮ್ಮ ಕುಸಿದು ಬಿದ್ದಿದ್ದಾರೆ. ಗೀತಮ್ಮನ ಮೈಯಲ್ಲಿದ್ದ ಆತ್ಮ ಹೋರ ಹೋಗಿದೆ. ಇನ್ನೂ ಮುಂದೆ ಯಾವುದೇ ತೊಂದರೆ ಇಲ್ಲ. ಎಲ್ಲವೂ ಸರಿಯಾಗಿದೆ ಎಂದು ಆಶಾ ಹೇಳಿದ್ದಾಳೆ ಎನ್ನಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಗೀತಮ್ಮರನ್ನು ಹೊಳೆಹೊನ್ನೂರಿನ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಪರೀಕ್ಷಿಸಿದ ವೈದ್ಯರು ಗೀತಮ್ಮ ಮೃತಪಟ್ಟಿದ್ದಾರೆ ಎಂದು ದೃಡ ಪಡಿಸಿದ್ದಾರೆ. ಮೃತೆ ಗೀತಮ್ಮಳಿಗೆ ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಗೀತಮ್ಮಳ ಮೇಲೆ ನಡೆದ ಹಲ್ಲೆಯ ವೀಡಿಯೋ ತುಣುಕುಗಳು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Next post shimoga | ಹೊಳೆಹೊನ್ನೂರು | ದೆವ್ವ ಹಿಡಿದಿದೆ ಎಂದು ಥಳಿತಕ್ಕೊಳಗಾದ ಮಹಿಳೆ ಸಾ**ವು!