
shimoga news | ಶಿವಮೊಗ್ಗ : ಹೆದ್ದಾರಿಯಲ್ಲಿ ಧಗಧಗನೆ ಹೊತ್ತಿ ಉರಿದ ಕಾರು!
ಶಿವಮೊಗ್ಗ (shivamogga), ಜು. 8: ಚಲಿಸುತ್ತಿದ್ದ ಕಾರೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟು ಭಸ್ಮವಾದ ಘಟನೆ, ಶಿವಮೊಗ್ಗ ನಗರದ ಹೊರವಲಯ ತ್ಯಾವರೆಕೊಪ್ಪ ಹುಲಿ ಸಿಂಹಾಧಾಮ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಜು. 9 ರ ರಾತ್ರಿ 8.15 ಗಂಟೆ ಸುಮಾರಿಗೆ ಸಂಭವಿಸಿದೆ.
ಶಿವಮೊಗ್ಗದ ಮಲವಗೊಪ್ಪದ ನಿವಾಸಿ ವೀರೇಶ್ ಎಂಬುವರಿಗೆ ಸೇರಿದ ಐ 20 ಗ್ರ್ಯಾಂಡ್ ಹುಂಡೈ ಕಾರು ಬೆಂಕಿಗಾಹುತಿಯಾಗಿದ್ದು ಎಂದು ತಿಳಿದುಬಂದಿದೆ. ವೀರೇಶ್ ಅವರು ತೋಟಕ್ಕೆ ತೆರಳುತ್ತಿದ್ದ ವೇಳೆ, ದಿಢೀರ್ ಆಗಿ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದೆ.
ಕಾರು ನಿಲ್ಲಿಸುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ಧಗಧಗನೆ ಹೊತ್ತಿ ಉರಿಯಲಾರಂಭಿಸಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿದೆ. ಈ ವೇಳೆಗಾಗಲೆ ಕಾರು ಭಾಗಶಃ ಸುಟ್ಟು ಹೋಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಕಾರು ಬೆಂಕಿಗಾಹುತಿಯಾಗಲು ಕಾರಣವೇನು? ಎಂಬಿತ್ಯಾದಿ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಎ ಎಫ್ ಎಸ್ ಟಿ ಓ ನೂರುಲ್ಲಾ, ಎಫ್ ಡಿ ಮಂಜುನಾಥ್ ಬುಲಾರಿ, ಸಿಬ್ಬಂದಿಗಳಾದ ಕಿರಣ್ ಕುಮಾರ್, ಯರ್ರಿಸ್ವಾಮಿ, ಲೀಡಿಂಗ್ ಫೈರ್ ಮ್ಯಾನ್ ಚೇತನ್ ಕುಮಾರ್ ಭಾಗಿಯಾಗಿದ್ದರು.
Shivamogga, Jul. 8: An incident in which a moving car caught fire and was completely burnt to ashes occurred on the national highway near Tyavarekoppa Tiger Reserve on the outskirts of Shivamogga city on Jul. 9 at around 8 pm.