Bhadravati person who lost lakshs of rupees by clicking part time job link! ಪಾರ್ಟ್ ಟೈಮ್ ಜಾಬ್ ಲಿಂಕ್ ಕ್ಲಿಕ್ ಮಾಡಿ ಲಕ್ಷಾಂತರ ರೂ. ಕಳೆದುಕೊಂಡ ಭದ್ರಾವತಿ ವ್ಯಕ್ತಿ!

shimoga | ಪಾರ್ಟ್ ಟೈಮ್ ಜಾಬ್ ಲಿಂಕ್ ಕ್ಲಿಕ್ ಮಾಡಿ ಲಕ್ಷಾಂತರ ರೂ. ಕಳೆದುಕೊಂಡ ಭದ್ರಾವತಿ ವ್ಯಕ್ತಿ!

ಶಿವಮೊಗ್ಗ (shivamogga), ಜು. 10: ಪಾರ್ಟ್ ಟೈಮ್ ಕೆಲಸಕ್ಕೆ ಸಂಬಂಧಿಸಿದಂತೆ ಸೈಬರ್ ವಂಚಕರ ಆನ್’ಲೈನ್ ಲಿಂಕ್ ಕ್ಲಿಕ್ ಮಾಡಿದ ಭದ್ರಾವತಿ ವ್ಯಕ್ತಿಯೋರ್ವರು, ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ.

ಭದ್ರಾವತಿ ಜಯನಗರ ಬಡಾವಣೆ ನಿವಾಸಿ ರವಿ (39) ಮೋಸ ಹೋದ ವ್ಯಕ್ತಿ ಎಂದು ಗುರುತಿಸಲಾಗಿದೆ. ಒಟ್ಟಾರೆ 14,63,891 ರೂ. ವಂಚನೆಗೊಳಗಾಗಿದ್ದಾರೆ. ಈ ಸಂಬಂಧ ಅವರು ಜು. 8 ರಂದು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಂಚನೆ : 7-5-2025 ರಂದು  ಮೊಬೈಲ್ ಪೋನ್ ಗೆ ಆನ್’ಲೈನ್ ಪಾರ್ಟ್ ಟೈಮ್ ಜಾಬ್ ಕುರಿತಂತೆ ಲಿಂಕ್ ವೊಂದು ಇವರಿಗೆ ಬಂದಿದೆ. ಸದರಿ ಲಿಂಕ್ ಕ್ಲಿಕ್ ಮಾಡಿ, ವೈಯಕ್ತಿಕ ವಿವರಗಳನ್ನು ಹಂಚಿಕೊಂಡಿದ್ದಾರೆ.

ನಂತರ ವಂಚಕರು ಟೆಲಿಗ್ರಾಂ ಗ್ರೂಪ್ ನಲ್ಲಿ ರವಿ ಅವರನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ಬೋನಸ್ ಹಣವನ್ನು ಅಕೌಂಟ್ ಗೆ ಹಾಕಿರುವುದಾಗಿ ನಂಬಿಸಿ, ರವಿ ಅವರಿಂದ ಹಂತಹಂತವಾಗಿ 14,63,891 ರೂ.ಗಳನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

Shimoga, Ju. 10: There was an incident where a person from Bhadravati lost lakhs of rupees by clicking on an online link of a cyber fraudster regarding a part-time job.

Shivamogga : Car catches fire on the highway! ಶಿವಮೊಗ್ಗ : ಹೆದ್ದಾರಿಯಲ್ಲಿ ಧಗಧಗನೆ ಹೊತ್ತಿ ಉರಿದ ಕಾರು! Previous post shimoga news | ಶಿವಮೊಗ್ಗ : ಹೆದ್ದಾರಿಯಲ್ಲಿ ಧಗಧಗನೆ ಹೊತ್ತಿ ಉರಿದ ಕಾರು!
A feud between in-laws ends in the m*ur**der of one of them! ಶಿವಮೊಗ್ಗ : ದಾಯಾದಿಗಳ ಕಲಹ ಕೊ**ಲೆಯಲ್ಲಿ ಓರ್ವನ ಕೊಲೆಯಲ್ಲಿ ಅಂತ್ಯ! Next post shimoga news | ಶಿವಮೊಗ್ಗ : ಯುವಕನ ಕೊ**ಲೆ – ಆರೋಪಿ ಅರೆಸ್ಟ್!