Bhadravati man lost lakhs of rupees by believing in Facebook ad! ಫೇಸ್’ಬುಕ್ ಜಾಹೀರಾತು ನಂಬಿ ಲಕ್ಷ ಲಕ್ಷ ರೂ. ಕಳೆದುಕೊಂಡ ಭದ್ರಾವತಿ ವ್ಯಕ್ತಿ!’

shimoga news | ವಂಚಕರ ಸಾಲದ ಆಮಿಷಕ್ಕೆ 4 ಲಕ್ಷ ರೂ. ಕಳೆದುಕೊಂಡ ಶಿವಮೊಗ್ಗದ ವ್ಯಕ್ತಿ!

ಶಿವಮೊಗ್ಗ (shivamogga), ಜು. 12: ವಂಚಕರ ಸಾಲದ ಆಮಿಷದ ಜಾಲಕ್ಕೆ ಸಿಲುಕಿದ ಶಿವಮೊಗ್ಗದ ವ್ಯಕ್ತಿಯೋರ್ವರು, ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗದ ಕಾಶೀಪುರ ಬಡಾವಣೆ ನಿವಾಸಿ ಹರೀಶ್ ಸಿ (54) ವಂಚನೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಏನೀದು ಪ್ರಕರಣ? : 28-06-2025 ರಂದು ಮಧ್ಯಾಹ್ನ 1 ಗಂಟೆಗೆ ಅಪರಿಚಿತ ನಂಬರ್ ನಿಂದ ಹರೀಶ್ ರವರ ಮೊಬೈಲ್ ಫೋನ್ ಗೆ ಕರೆ ಬಂದಿತ್ತು. ಫೈನಾನ್ಸ್ ನವರೆಂದು ಹೇಳಿಕೊಂಡಿದ್ದ ವಂಚಕನೋರ್ವ, 8  ಲಕ್ಷ ರೂ.ಗಳವರೆಗೆ ಸಾಲ ಕೊಡುತ್ತೆವೆ ಎಂದು ನಂಬಿಸಿದ್ದ.

ಆಸಕ್ತಿ ಇದ್ದರೆ ಅಗತ್ಯ ಮಾಹಿತಿ ನೀಡುವಂತೆ ಸೂಚಿಸಿದ್ದ. ವಂಚಕನ ಮಾತು ನಂಬಿದ ದೂರುದಾರ ಹರೀಶ್ ಅವರು, ತಮ್ಮ ಬ್ಯಾಂಕ್ ಮಾಹಿತಿಯನ್ನು ಪಿಡಿಎಫ್ ಮಾದರಿಯಲ್ಲಿ ವಂಚಕನ ನಂಬರ್ ಗೆ ಕಳುಹಿಸಿದ್ದರು           .

30-06-2025 ರಂದು ವಿವಿಧ ಶುಲ್ಕ ಪಾವತಿಸಬೇಕೆಂದು ನಂಬಿಸಿ ಒಟ್ಟಾರೆ 4,13,596 ರೂ.ಗಳನ್ನು ವಂಚಕರು ಆನ್’ಲೈನ್ ಮೂಲಕ ಪಾವತಿಸಿಕೊಂಡಿದ್ದರು. ಆದರೆ ನಂತರ ಸಾಲವೂ ನೀಡದೆ, ಪಾವತಿಸಿಕೊಂಡ ಹಣವೂ ಕೊಡದೆ ವಂಚಿಸಿದ್ದಾರೆ.

Shivamogga, July 12: A person from Shivamogga was duped of lakhs of rupees after falling into the trap of a fraudster who lured him with a loan. A case has been registered at Vinobanagar police station in this regard.

shimoga | ಶಿವಮೊಗ್ಗ ಸೆಂಟ್ರಲ್ ಜೈಲ್ ನಲ್ಲಿದ್ದ ಪತ್ನಿ ಕೊಲೆ ಪ್ರಕರಣದ ಆರೋಪಿ ಆತ್ಮ*ತ್ಯೆಗೆ ಶರಣು! Accused in wife mu**rder case commits su**icide while in Shimoga Central Jail! Previous post shimoga | ಶಿವಮೊಗ್ಗ ಸೆಂಟ್ರಲ್ ಜೈಲ್ ಖೈದಿ ಹೊಟ್ಟೆಯಲ್ಲಿ ಪತ್ತೆಯಾದ ಮೊಬೈಲ್ ಫೋನ್!
Shivamogga : Thousands of rupees were defrauded by hacking mobile phone numbers! ಶಿವಮೊಗ್ಗ : ಮೊಬೈಲ್ ಪೋನ್ ನಂಬರ್ ಹ್ಯಾಕ್ ಮಾಡಿ ಸಾವಿರಾರು ರೂ. ವಂಚನೆ! Next post shimoga news | ಶಿವಮೊಗ್ಗ : ಮೊಬೈಲ್ ಪೋನ್ ನಂಬರ್ ಹ್ಯಾಕ್ ಮಾಡಿ ಸಾವಿರಾರು ರೂ. ವಂಚನೆ!