shimoga news | ಶಿವಮೊಗ್ಗ : ಮೊಬೈಲ್ ಪೋನ್ ನಂಬರ್ ಹ್ಯಾಕ್ ಮಾಡಿ ಸಾವಿರಾರು ರೂ. ವಂಚನೆ!
ಶಿವಮೊಗ್ಗ (shivamogga), ಜು. 12: ವ್ಯಕ್ತಿಯೋರ್ವರ ಮೊಬೈಲ್ ಪೋನ್ ನಂಬರ್ ಹ್ಯಾಕ್ ಮಾಡಿ, ಅವರ ಬ್ಯಾಂಕ್ ಖಾತೆಯಿಂದ ಸಾವಿರಾರು ರೂ. ವಂಚನೆ ಮಾಡಿದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಶಿವಮೊಗ್ಗದ ವೆಂಕಟೇಶ ನಗರದ ನಿವಾಸಿ ಪ್ರಭಾಕರ ಬಿ ವಿ (47) ವಂಚನೆಗೊಳಗಾದವರೆಂದು ಗುರುತಿಸಲಾಗಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಏನೀದು ವಂಚನೆ? : ದೂರುದಾರ ಪ್ರಭಾಕರ ಬಿ ವಿ ಅವರ ಪೋನ್ ಪೇ ಸ್ಕ್ಯಾನರ್’ಗೆ 27-06-2025 ರ ನಂತರ ಹಣ ಪಾವತಿಯಾಗುತ್ತಿರಲಿಲ್ಲ. ಈ ನಡುವೆ 29-06-2025 ರಂದು ಅವರ ಮೊಬೈಲ್ ನಂಬರ್ ರಿಜಿಸ್ಟ್ರೇಷನ್ ನಾಟ್ ನೆಟ್ ವರ್ಕ್ ಎಂದು ಬಂದಿದೆ.
ಪ್ರಭಾಕರ್ ಅವರು ಬ್ಯಾಂಕ್ ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಯಾರೋ ಅಪರಿಚಿತರು ಮೊಬೈಲ್ ನಂಬರ್ ಹ್ಯಾಕ್ ಮಾಡಿರುವ ಸಂಗತಿ ಗೊತ್ತಾಗಿದೆ. ಜೊತೆಗೆ ಅವರ ಬ್ಯಾಂಕ್ ಖಾತೆಯಿಂದ 29-06-2025 ರಿಂದ ಒಟ್ಟು 90,599 ರೂ. ಡ್ರಾ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ತಮ್ಮ ಮೊಬೈಲ್ ನಂಬರ್ ಹ್ಯಾಕ್ ಮಾಡಿ, ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿಕೊಂಡು ವಂಚಿಸಿರುವ ಅಪರಿಚಿತ ವ್ಯಕ್ತಿಯನ್ನು ಪತ್ತೆ ಹಚ್ಚಿ ಹಣವನ್ನು ವಾಪಸ್ ಕೊಡಿಸುವಂತೆ ಪ್ರಭಾಕರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
Shivamogga, July 12: An incident of a person’s mobile phone number being hacked and thousands of rupees being defrauded from his bank account has taken place in Shivamogga city. Prabhakar B.V. (47), a resident of Venkatesh Nagar in Shivamogga, has been identified as the victim of the fraud. He has filed a complaint in this regard at the Jayanagar police station, and the police are continuing their investigation.
