Shimoga: Arrest of two people who were selling ganja! ಶಿವಮೊಗ್ಗ : ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ!

shimoga crime news | ಶಿವಮೊಗ್ಗ : ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ!

ಶಿವಮೊಗ್ಗ (shivamogga), ಜು. 14: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರನ್ನು ಸಿಇಎನ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ ಘಟನೆ, ಶಿವಮೊಗ್ಗ ನಗರದ ವಡ್ಡಿನಕೊಪ್ಪದ ರಂಗನಾಥ ಲೇಔಟ್ ಸಮೀಪದ ಕೋಳಿ ಫಾರಂ ಶೆಡ್ ಬಳಿ ಇತ್ತೀಚೆಗೆ ನಡೆದಿದೆ.

ಶಿವಮೊಗ್ಗದ ಬೊಮ್ಮನಕಟ್ಟೆ ಬಡಾವಣೆ ನಿವಾಸಿ ಕಾರ್ತಿಕ್ ಯಾನೆ ಸಾಪಡ್ (21) ಹಾಗೂ ಕಡೇಕಲ್ ನಿವಾಸಿ ಎನ್ ರಾಜೇಶ್ ಯಾನೆ ರಾಜು (24) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಇವರಿಂದ 1. 70 ಲಕ್ಷ ರೂ. ಮೌಲ್ಯದ 5 ಕೆಜಿ 789 ಗ್ರಾಂ ತೂಕದ ಒಣ ಗಾಂಜಾ ಹಾಗೂ ಒಂದು ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಸಿಇಎನ್ ಕ್ರೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿವೈಎಸ್ಪಿ ಕೃಷ್ಣಮೂರ್ತಿ ಕೆ, ಇನ್ಸ್’ಪೆಕ್ಟರ್ ಮಂಜುನಾಥ್, ಸಿಬ್ಬಂದಿಗಳಾದ ಶೇಖರ್, ಧರ್ಮಾನಾಯ್ಕ್, ಅವಿನಾಶ್, ನಾರಾಯಣಸ್ವಾಮಿ, ಪಿರ್ದೋಸ್, ಆಂಡ್ರ್ಯೂಸ್ ಜೋನ್, ಪ್ರಮೋದ್, ಸಂಗಮೇಶ್ ರವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

Shimoga, Ju 14: An incident in which two persons were arrested by the CEN Crime Station police on the charge of selling ganja took place recently near a chicken farm shed near Ranganatha Layout, Vaddinakoppa, Shimoga city.

Sigandur Bridge Program: Siddaramaiah lashes out at BJP leaders! ಸಿಗಂದೂರು ಸೇತುವೆ ಕಾರ್ಯಕ್ರಮ : ಬಿಜೆಪಿ ನಾಯಕರ ವಿರುದ್ದ ಸಿದ್ದರಾಮಯ್ಯ ಗರಂ! Previous post sigandur bridge | ಸಿಗಂದೂರು ಸೇತುವೆ ಕಾರ್ಯಕ್ರಮ : ಬಿಜೆಪಿ ನಾಯಕರ ವಿರುದ್ದ ಸಿದ್ದರಾಮಯ್ಯ ಗರಂ!
shimoga APMC vegetable prices | Details of vegetable prices for October 10 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಅಕ್ಟೋಬರ್ 10 ರ ತರಕಾರಿ ಬೆಲೆಗಳ ವಿವರ Next post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 15 ರ ತರಕಾರಿ ಬೆಲೆಗಳ ವಿವರ