Shivamogga : KHB Commissioner K A Dayanand made a surprise visit to various places and inspected! ಶಿವಮೊಗ್ಗ : ವಿವಿಧೆಡೆ ದಿಡೀರ್ ಭೇಟಿಯಿತ್ತು ಪರಿಶೀಲಿಸಿದ ಕೆಹೆಚ್’ಬಿ ಆಯುಕ್ತ ಕೆ ಎ ದಯಾನಂದ್!

shimoga | ಶಿವಮೊಗ್ಗ : ವಿವಿಧೆಡೆ ದಿಡೀರ್ ಭೇಟಿಯಿತ್ತು ಪರಿಶೀಲಿಸಿದ ಕೆಹೆಚ್’ಬಿ ಆಯುಕ್ತ ಕೆ ಎ ದಯಾನಂದ್!

ಶಿವಮೊಗ್ಗ (shivamogga), ಜು. 19: ವಸತಿ ಇಲಾಖೆಯ ಕರ್ನಾಟಕ ಗೃಹ ಮಂಡಳಿ (ಕೆ ಹೆಚ್ ಬಿ) ಆಯುಕ್ತರಾಗಿ ಕಳೆದ ತಿಂಗಳು ನೇಮಕಗೊಂಡಿದ್ದ ಹಿರಿಯ ಐಎಎಸ್ ಅಧಿಕಾರಿ ಕೆ ಎ ದಯಾನಂದ್ ಅವರು ಶಿವಮೊಗ್ಗ ನಗರಕ್ಕೆ ಆಗಮಿಸಿದ್ದಾರೆ.

ಜು. 19 ರಂದು ಬೆಳ್ಳಂಬೆಳಿಗ್ಗೆ ಶಿವಮೊಗ್ಗ ನಗರದ ವಿವಿಧೆಡೆ ಕೆ ಎ ದಯಾನಂದ್ ಅವರು ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೆ ಹೆಚ್ ಬಿ ಸಂಸ್ಥೆ ಅಭಿವೃದ್ದಿಪಡಿಸಿರುವ ಬಡಾವಣೆಗಳು ಹಾಗೂ ಕಾಮಗಾರಿಗಳ ಪರಿವೀಕ್ಷಣೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಗರದ ಹೊರವಲಯ ದೇವಕಾತಿಕೊಪ್ಪಕ್ಕೆ ಭೇಟಿ ನೀಡಿ, ಸದರಿ ಗ್ರಾಮದಲ್ಲಿ ಮಂಡಳಿಯಿಂದ ಅಭಿವೃದ್ದಿಪಡಿಸಲು ಉದ್ಧೇಶಿಸಿರುವ ನೂತನ ವಸತಿ ಬಡಾವಣೆಯ ಸ್ಥಳ ವೀಕ್ಷಿಸಿದ್ದಾರೆ. ಕಾಲಮಿತಿಯೊಳಗೆ ಬಡಾವಣೆ ನಿರ್ಮಿಸಿ ವಸತಿ ರಹಿತ ಬಡ – ಮಧ್ಯಮ ವರ್ಗದವರಿಗೆ ನಿವೇಶನ ವಿತರಣೆಗೆ ಕ್ರಮಕೈಗೊಳ್ಳುವಂತೆ ಮಂಡಳಿಯ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗೋಪಿಶೆಟ್ಟಿಕೊಪ್ಪ ಹಾಗೂ ಸೋಮಿನಕೊಪ್ಪದಲ್ಲಿರುವ ಕೆ ಹೆಚ್ ಬಿ ಬಡಾವಣೆಗಳಿಗೂ ಕೆ ಎ ದಯಾನಂದ್ ಅವರು ಭೇಟಿ ನೀಡಿದ್ದಾರೆ. ಎರಡೂ ಬಡಾವಣೆಗಳಲ್ಲಿ ಬಡ ಹಾಗೂ ಮಧ್ಯಮ ವರ್ಗದ ವಸತಿ ರಹಿತರಿಗೆ ಕೈಗೆಟುಕುವ ದರದಲ್ಲಿ ಸುಸಜ್ಜಿತ ವಸತಿ ಸಮುಚ್ಛಯ ನಿರ್ಮಾಣದ ಕುರಿತಂತೆ ಯೋಜನೆ ಸಿದ್ದಪಡಿಸಿ ಸಲ್ಲಿಸುವಂತೆ ಮಂಡಳಿ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕೆಹೆಚ್ ಬಿ ಸಂಸ್ಥೆ ಕಾರ್ಯಪಾಲಕ ಅಭಿಯಂತರ ಶರಣಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರ ಹರೀಶ್ ಸೇರಿದಂತೆ ಮೊದಲಾದವರಿದ್ದರು ಎನ್ನಲಾಗಿದೆ.

ಡಿಸಿಯಾಗಿದ್ದರು : ಕೆ ಎ ದಯಾನಂದ್ ಅವರು ಈ ಹಿಂದೆ ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಣೆ ಮಾಡಿದ್ದರು. ತಮ್ಮ ಜನಪರ ಕಾರ್ಯವೈಖರಿಯ ಮೂಲಕ ಸಾಕಷ್ಟು ಪ್ರಸಿದ್ದಿ ಸಂಪಾದಿಸಿದ್ದರು. ಇದೀಗ ಕೆ ಹೆಚ್ ಬಿ ಆಯುಕ್ತರಾಗಿರುವ ಅವರು, ಶಿವಮೊಗ್ಗ ನಗರದಲ್ಲಿ ವಸತಿ ರಹಿತರಿಗೆ ಮನೆ – ನಿವೇಶನ ಕಲ್ಪಿಸಲು ಮುಂದಾಗಿದ್ದು, ಹಲವು ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿರುವ ಮಾಹಿತಿಗಳು ಕೇಳಿಬರುತ್ತಿವೆ.

Shivamogga, July 19: Senior IAS officer K A Dayanand, who was appointed as the Karnataka Housing Board (KHB) Commissioner of the Housing Department last month, has arrived in Shivamogga city. On the morning of July 19, KA Dayanand made a surprise visit to various places in Shivamogga city and inspected them. It is reported that he inspected the layouts and works developed by KHB.

Hosanagara : Man killed by accidental discharge from a loaded gun! ಹೊಸನಗರ : ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡಿಗೆ ವ್ಯಕ್ತಿ ಬಲಿ! Previous post shimoga | ಶಿವಮೊಗ್ಗ : ಗಾಂಜಾ ಅಮಲು – ಮೂವರ ವಿರುದ್ದ ಕೇಸ್!
Hosanagara : Man killed by accidental discharge from a loaded gun! ಹೊಸನಗರ : ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡಿಗೆ ವ್ಯಕ್ತಿ ಬಲಿ! Next post shimoga crime news | ಹೋಟೆಲ್, ಅಂಗಡಿ ಮುಂಭಾಗ ಮದ್ಯ ಸೇವನೆಗೆ ಅವಕಾಶ : ಕೇಸ್ ದಾಖಲು!