shimoga | ಶಿವಮೊಗ್ಗ : ಗಾಂಜಾ ಅಮಲು – ಮೂವರ ವಿರುದ್ದ ಕೇಸ್!

crime news

ಶಿವಮೊಗ್ಗ (shivamogga), ಜು. 18: ಪ್ರತ್ಯೇಕ ಘಟನೆಗಳಲ್ಲಿ ಮಾದಕ ವಸ್ತು ಗಾಂಜಾ ಸೇವನೆ ಮಾಡಿದ್ದ ಆರೋಪದ ಮೇರೆಗೆ, ಮೂವರ ವಿರುದ್ದ ಶಿವಮೊಗ್ಗ ತುಂಗಾ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಘಟನೆ ಜು. 17 ರ ರಾತ್ರಿ ನಡೆದಿದೆ.

ತುಂಗಾನಗರ ಹಾಗೂ ಟಿಪ್ಪು ನಗರ ಕಡೆ ತೆರಳುವ ರಸ್ತೆಗಳಲ್ಲಿ, ಅನುಮಾನಾಸ್ಪದವಾಗಿ ಹಾಗೂ ಅಮಲಿನಲ್ಲಿ ಓಡಾಡುತ್ತಿದ್ದ ಆರೋಪಿಗಳನ್ನು ಗಸ್ತಿನಲ್ಲಿದ್ದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೊಳಪಡಿಸಿದ್ದಾರೆ.

ಈ ವೇಳೆ ಆರೋಪಿಗಳು ಗಾಂಜಾ ಸೇವೆ ಮಾಡಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Shivamogga, Jul. 18: In separate incidents, the Tunga Nagar police in Shivamogga registered a case against three people on charges of consuming ganja on the night of July 17.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →