Cleanliness program by Shivamogga Municipal Corporation administration ಶಿವಮೊಗ್ಗ ಪಾಲಿಕೆ ಆಡಳಿತದಿಂದ ಸ್ವಚ್ಛತಾ ಕಾರ್ಯಕ್ರಮ

shimoga palike | ಶಿವಮೊಗ್ಗ ಪಾಲಿಕೆ ಆಡಳಿತದಿಂದ ಸ್ವಚ್ಛತಾ ಕಾರ್ಯಕ್ರಮ

ಶಿವಮೊಗ್ಗ(shivamogga), ಜು. 30: ಶಿವಮೊಗ್ಗ ಮಹಾನಗರ ಪಾಲಿಕೆ 1 ನೇ ವಾರ್ಡ್ ಸೋಮಿನಕೊಪ್ಪದ ವಿವಿಧ ಬಡಾವಣೆಗಳಲ್ಲಿ ರಸ್ತೆ ಬದಿ ಹಾಗೂ ಉದ್ಯಾನವನಗಳಲ್ಲಿ, ಸ್ವಚ್ಛತಾ ಕಾರ್ಯಕ್ರಮವನ್ನು ಜುಲೈ 20 ರಂದು ಪಾಲಿಕೆ ಆಡಳಿತ ಹಮ್ಮಿಕೊಂಡಿತ್ತು.

ಪ್ರಸ್ತುತ ಮಳೆಗಾಲದ ಸಂದರ್ಭದಲ್ಲಿ ರಸ್ತೆ ಬದಿ ಗಿಡಗಂಟೆಗಳು ಬೆಳೆದುಕೊಂಡಿದ್ದವು. ಉದ್ಯಾನವನಗಳಲ್ಲಿಯೂ ಗಿಡಗಂಟೆ ಬೆಳೆದು, ಹುಳುಹುಪ್ಪಟ್ಟೆಗಳ ಹಾವಳಿ ಹೆಚ್ಚಾಗಿತ್ತು. ಇದರಿಂದ ನಾಗರೀಕರು ತೀವ್ರ ತೊಂದರೆ ಎದುರಿಸುವಂತಾಗಿತ್ತು.

ಈ ಕುರಿತಂತೆ ನಿವಾಸಿಗಳ ಸಂಘದಿಂದ ಪಾಲಿಕೆ ಆಡಳಿತದ ಗಮನಕ್ಕೆ ತರಲಾಗಿತ್ತು. ಇದಕ್ಕೆ ಸ್ಪಂದಿಸಿದ ಪಾಲಿಕೆ ಆಡಳಿತವು ಜೆಸಿಬಿ ಮೂಲಕ ಗಿಡಗಂಟೆ ತೆರವು ಹಾಗೂ ಸ್ವಚ್ಛತಾ ಕಾರ್ಯವನ್ನು ನಡೆಸಿತು. ಪಾಲಿಕೆ ಆಡಳಿತದ ತ್ವರಿತ ಸ್ಪಂದನೆಗೆ ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಪಾಲಿಕೆ ಹೆಲ್ತ್ ಇನ್ಸ್’ಪೆಕ್ಟರ್ ಲೋಹಿತ್, ಕೆ ಹೆಚ್ ಬಿ ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಪತ್ರಕರ್ತ ಬಿ ರೇಣುಕೇಶ್, ಪ್ರಮುಖರಾದ ನಾಗಭೂಷಣ್, ಗುರುಚರಣ್, ಕುಶ ಕುಮಾರ್, ಜಾನಕಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

*** ‘ಪ್ರಸ್ತುತ ಗಿಡಗಂಟೆಗಳಿಂದ ಆವೃತವಾಗಿದ್ದ ಉದ್ಯಾನವನಗಳನ್ನು ಪಾಲಿಕೆ ಆಡಳಿತ ಸ್ವಚ್ಛಗೊಳಿಸಿಕೊಟ್ಟಿದೆ. ಸದರಿ ಉದ್ಯಾನವನದಲ್ಲಿ ಪಶುಪಕ್ಷಿಗಳಿಗೆ ಹಾಗೂ ನಾಗರೀಕರಿಗೆ ಅನುಕೂಲವಾಗುವ ಹಣ್ಣುಹಂಪಲು ಮತ್ತೀತರ ಗಿಡಗಳನ್ನು ತಾವು ಸ್ವಯಂ ಪ್ರೇರಿತವಾಗಿ ನೆಟ್ಟು ಪೋಷಿಸುವುದಾಗಿ’ ಮುಖಂಡ ಕುಶ ಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

Shivamogga, Jul. 30: The Shivamogga Municipal Corporation administration organized a cleanliness program on July 20 in various areas of Sominakoppa, Ward 1. On this occasion, the corporation’s health inspector Lohit, staff members Murthy, Ganesh, Netravati, William, Harsha, president of the KHB Press Colony Residents’ Welfare Association Journalist B Renukesh and prominent figures including Nagabhushan, Kusha Kumar, Gurucharan, Janaki and others were present.

Shimoga Palike | Municipality area revision: Speed in Tumkur - snail pace in Shivamogga! | Continued negligence of public representatives - officials..!! ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ತುಮಕೂರಲ್ಲಿ ವೇಗ - ಶಿವಮೊಗ್ಗದಲ್ಲಿ ಆಮೆವೇಗ! | ಮುಂದುವರಿದ ಜನಪ್ರತಿನಿಧಿಗಳು - ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ..!! Previous post ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ನಗರಾಭಿವೃದ್ದಿ ಕೋಶದ ಸೂಚನೆಯೇನು?
Rainfall has decreased in Malnad: Linganamakki Dam still 8 feet away from filling! ಮಲೆನಾಡಲ್ಲಿ ತಗ್ಗಿದ ಮಳೆ : ಲಿಂಗನಮಕ್ಕಿ ಡ್ಯಾಂ ಭರ್ತಿಗೆ 8 ಅಡಿ ಬಾಕಿ! Next post shimoga rain news | ಮಲೆನಾಡಲ್ಲಿ ತಗ್ಗಿದ ಮಳೆ : ಲಿಂಗನಮಕ್ಕಿ ಡ್ಯಾಂ ಭರ್ತಿಗೆ 8 ಅಡಿ ಬಾಕಿ!