
balebare ghat | ಬಾಳೆಬರೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ!
ಶಿವಮೊಗ್ಗ (shivamogga), ಆಗಸ್ಟ್ 7: ತೀರ್ಥಹಳ್ಳಿ – ಕುಂದಾಪುರ ರಾಜ್ಯ ಹೆದ್ದಾರಿ 52 ಬಾಳೆಬರೆ ಘಾಟಿ ಸರಪಳಿ ಹೆರ್‌ಪಿನ್ ತಿರುವಿನಲ್ಲಿ, ಮಣ್ಣಿನ ಕುಸಿತ ಉಂಟಾಗಿದೆ. ಮಳೆ ಚುರುಕುಗೊಂಡಿದ್ದು ಮತ್ತೆ ಮಣ್ಣು ಕುಸಿಯುವ ಸಂಭವವಿದೆ. ಸುರಕ್ಷಿತಾ ದೃಷ್ಠಿಯಿಂದ (ಮಾಸ್ತಿಕಟ್ಟೆಯಿಂದ ಹೊಸಂಗಡಿಯವರೆಗೆ) ಮಳೆಗಾಲ ಮುಗಿಯುವವರೆಗೆ, ಭಾರೀ ವಾಹನಗಳ ಸಂಚಾರ ನಿಷೇಧಿಸಿ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.
ತೀರ್ಥಹಳ್ಳಿಯಿಂದ ರಾವೆ – ಕಾನಗೋಡು – ಮಾಸ್ತಿಕಟ್ಟೆ- ಹುಲಿಕಲ್ ಘಾಟ್ – ಹೊಸಂಗಡಿ – ಸಿದ್ದಾಪುರ ಮೂಲಕ ಕುಂದಾಪುರದ ಕಡೆಗೆ ಹೋಗುವ ಭಾರೀ ವಾಹನಗಳು ತೀರ್ಥಹಳ್ಳಿ – ರಾವೆ – ಕಾನುಗೋಡು –ನಗರ – ಕೊಲ್ಲೂರು – ಕುಂದಾಪುರ ರಸ್ತೆ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ.
ನಗರ – ಸಿದ್ದಾಪುರ ರಾಜ್ಯ ಹೆದ್ದಾರಿ – 278 ರಸ್ತೆ ತೀರ್ಥಹಳ್ಳಿಯಿಂದ ಯಡೂರು – ಸುಳಗೋಡು – ಮಾಸ್ತಿಕಟ್ಟೆ – ಹುಲಿಕಲ್ ಘಾಟ್ – ಹೊಸಂಗಡಿ – ಸಿದ್ದಾಪುರ ಮೂಲಕ ಕುಂದಾಪುರದ ಕಡೆಗೆ ಹೋಗುವ ಭಾರೀ ವಾಹನಗಳು ತೀರ್ಥಹಳ್ಳಿ – ಯಡೂರು – ಮಾಸ್ತಿಕಟ್ಟೆ – ಕಾನುಗೋಡು – ನಗರ – ಕೊಲ್ಲೂರು – ಕುಂದಾಪುರ ರಸ್ತೆ ಮೂಲಕ ಸಂಚರಿಸುವುದು.
ಶಿವಮೊಗ್ಗ – ಸಾಗರ ಕಡೆಯಿಂದ ಹೊಸನಗರ – ನಗರ – ಮಾಸ್ತಿಕಟ್ಟೆ – ಹುಲಿಕಲ್ ಘಾಟ್ – ಹೊಸಂಗಡಿ – ಸಿದ್ದಾಪುರ ಮೂಲಕ ಕುಂದಾಪುರದ ಕಡೆ ಹೋಗುವ ಭಾರೀ ವಾಹನಗಳು ಶಿವಮೊಗ್ಗ – ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಮೂಲಕ ಹೊನ್ನಾವರ ಆನಂತರ ಹೊನ್ನಾವರದಿಂದ ಭಟ್ಕಳ – ಬೈಂದೂರು – ಕುಂದಾಪುರ ರಸ್ತೆಯ ಮೂಲಕ ಸಂಚರಿಸುವಂತೆ ಆದೇಶ ಹೊರಡಿಸಿದ್ದಾರೆ.
shimoga, august 7: A landslide has occurred at the hairpin bend at the balebare ghat on the Thirthahalli – Kundapur State Highway 52. The rain has intensified and there is a possibility of landslides again. For safety reasons (from Mastikatte to Hosangady), District Collector Gurudatta Hegde has ordered a ban on the movement of heavy vehicles and an alternative route until the rainy season is over.