
linganamakki dam | ರಾಜ್ಯದ ಅತೀ ದೊಡ್ಡ ಡ್ಯಾಂ ಲಿಂಗನಮಕ್ಕಿಗೆ ಬಾಗಿನ ಅರ್ಪಿಸಲು ಈ ಬಾರಿಯಾದರೂ ಆಗಮಿಸುವರೆ ಸಿಎಂ, ಸಚಿವರು?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಆಗಸ್ಟ್ 18: ಇಡೀ ರಾಜ್ಯದಲ್ಲಿಯೇ ಅತೀ ದೊಡ್ಡ ಜಲಾಶಯವಾದ, ನಾಡಿಗೆ ಬೆಳಕು ನೀಡುವ, ಏಷ್ಯಾ ಖಂಡದಲ್ಲಿಯೇ ಅತೀ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ, ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾಶಯ ಈ ವರ್ಷ ಕೂಡ ಗರಿಷ್ಠ ಮಟ್ಟದ ಹಂತಕ್ಕೆ ಬರಲಾರಂಭಿಸಿದೆ.
ಆಗಸ್ಟ್ 19 ರ ಬೆಳಿಗ್ಗೆಯಿಂದ ಡ್ಯಾಂನ 11 ಕ್ರಸ್ಟ್ ಗೇಟ್ ಗಳ ಮೂಲಕ, 15 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಬೆಳಿಗ್ಗೆಯ ಮಾಹಿತಿಯಂತೆ ಡ್ಯಾಂನ ಒಳಹರಿವು 48,393 ಕ್ಯೂಸೆಕ್ ಇದೆ. ಸದ್ಯ ಡ್ಯಾಂನ ನೀರಿನ ಮಟ್ಟ 1816. 20 (ಗರಿಷ್ಠ ಮಟ್ಟ : 1819) ಅಡಿಯಿದೆ.
ಗರಿಷ್ಠ ಮಟ್ಟ ತಲುಪಲು ಇನ್ನೂ ಎರಡೂವರೆ ಅಡಿಯಷ್ಟು ಬಾಕಿಯಿದೆ. ಆದರೆ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ನೀರನ್ನು ಹೊರ ಹರಿಸಲಾಗುತ್ತಿದೆ. ಒಟ್ಟಾರೆ ಡ್ಯಾಂನಲ್ಲಿ 143 ಟಿಎಂಸಿ ನೀರು ಸಂಗ್ರಹವಾಗಿದೆ.
ಜಲ ಕಳೆ : 2018 ರಿಂದ 2025 ರ ನಡುವಿನ ಅವಧಿಯಲ್ಲಿ 2023 ಹೊರತುಪಡಿಸಿದರೆ, ಉಳಿದ ವರ್ಷಗಳಲ್ಲಿ ಡ್ಯಾಂ ನಿರಂತರವಾಗಿ ಗರಿಷ್ಠ ಮಟ್ಟಕ್ಕೆ ಬರುತ್ತಿದೆ. ವಿದ್ಯುತ್ ಉತ್ಪಾದನೆಗೆ ಸಾಕಷ್ಟು ಅನುಕೂಲಕರವಾಗುತ್ತಿದೆ. ಇದರಿಂದ ರಾಜ್ಯ ಸರ್ಕಾರ
ರಾಜ್ಯದ ಇತರೆ ಪ್ರಮುಖ ಡ್ಯಾಂಗಳು ಭರ್ತಿಯಾದ ವೇಳೆ ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಇಲಾಖೆ ಸಚಿವರುಗಳು ಬಾಗಿನ ಅರ್ಪಿಸುತ್ತಾರೆ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ, ಲಿಂಗನಮಕ್ಕಿ ಡ್ಯಾಂಗೆ ಮುಖ್ಯಮಂತ್ರಿಗಳಿರಲಿ ಇಂಧನ ಸಚಿವರು ಕೂಡ ಬಾಗಿನ ಅರ್ಪಿಸಲು ಆಗಮಿಸುತ್ತಿಲ್ಲ. ಕಾರಣವೇನೆಂಬುವುದು ಗೊತ್ತಾಗುತ್ತಿಲ್ಲವಾಗಿದೆ!
ಲಿಂಗನಮಕ್ಕಿಗೆ ಬಾಗಿನ ಅರ್ಪಿಸಲು ಅಧಿಕಾರಸ್ಥ ರಾಜಕಾರಣಿಗಳು ಹಿಂದೇಟು ಹಾಕುತ್ತಿರುವುದು ಏಕೆ? ಡ್ಯಾಂಗೆ ಬಾಗಿನ ಅರ್ಪಿಸಿದರೆ ಇವರ ಅಧಿಕಾರಕ್ಕೇನಾದರೂ ಸಂಕಷ್ಟ ಬರಲಿದೆಯಾ? ಎಂಬುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಈ ಬಾರಿಯಾದರೂ ಸಿಎಂ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಕೆ ಜೆ ಜಾರ್ಜ್ ಅವರು, ನಾಡಿಗೆ ಬೆಳಕು ನೀಡುವ ಲಿಂಗನಮಕ್ಕಿ ಜಲಾಶಯಕ್ಕೆ ಬಾಗಿನ ಅರ್ಪಿಸಿ ಗೌರವ ಸಮರ್ಪಣೆ ಮಾಡುವ ಕಾರ್ಯ ಮಾಡಲಿದ್ದಾರಾ? ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
ಜೋಗ ವೈಭೋಗ : ಲಿಂಗನಮಕ್ಕಿ ಡ್ಯಾಂನಿಂದ ನೀರು ಹೊರ ಬಿಡುತ್ತಿರುವ ಕಾರಣದಿಂದ ವಿಶ್ವ ವಿಖ್ಯಾತ ಜೋಗ ಜಲಪಾತದಲ್ಲಿನ ನೀರಿನ ಭೋರ್ಗರೆತ ಮತ್ತಷ್ಟು ಹೆಚ್ಚಾಗಲಿದೆ. ಜಲಧಾರೆಯ ವೈಭೋಗ ಕಳೆಗಟ್ಟಲಿದೆ.
Shivamogga, August 18: The water storage of the Linganamakki reservoir in Sagar taluk of Shivamogga district, the largest reservoir in the entire state, which provides light to the state and generates electricity at the lowest cost in Asia, has started reaching its maximum level.
When other dams in the state are filled, the Chief Minister and the ministers of the relevant departments offer bagina. But in recent years, not even the Chief Minister or the Energy Minister has come to offer bagina at the Linganamakki Dam.