Water released from Linganamakki Dam : glory of jogfalls! ಜೋಗ ಜಲಪಾತದಲ್ಲಿ ಜಲಧಾರೆಯ ವೈಭೋಗ..!

jogfalls | ಜೋಗ ಜಲಪಾತದಲ್ಲಿ ಜಲಧಾರೆಯ ವೈಭೋಗ..!

ಶಿವಮೊಗ್ಗ (shivamogga), ಆಗಸ್ಟ್ 19: ಲಿಂಗನಮಕ್ಕಿ ಡ್ಯಾಂನಿಂದ ಆಗಸ್ಟ್ 19 ರಿಂದ ನೀರು ಹೊರ ಬಿಡಲಾಗುತ್ತಿದೆ. ಇದರಿಂದ ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಜಲಧಾರೆಯ ವೈಭೋಗ ಮತ್ತಷ್ಟು ಹೆಚ್ಚಾಗಿದೆ.

ಶರಾವತಿ ಕಣಿವೆ ಪ್ರದೇಶದಲ್ಲಿಯೂ ಉತ್ತಮ ಮಳೆಯಾಗುತ್ತಿದೆ. ಇದರಿಂದ ಜೋಗ ಜಲಪಾತ ಅಕ್ಷರಶಃ ಭೋರ್ಗರೆಯಲಾರಂಭಿಸಿದೆ. ರಾಜ, ರಾಣಿ, ರೋರರ್‌, ರಾಕೆಟ್‌ ಜಲಪಾತಗಳು ಧುಮ್ಮಿಕ್ಕಲಾರಂಭಿಸಿವೆ. ಜಲ ವೈಭೋಗ ವೀಕ್ಷಿಸಲು ಪ್ರವಾಸಿಗರು ಜೋಗದತ್ತ ದೌಡಾಯಿಸಲಾರಂಭಿಸಿದ್ದಾರೆ.

ಮಳೆ ಚುರುಕು : ಕಳೆದ ಕೆಲ ದಿನಗಳಿಂದ, ಮಲೆನಾಡಿನಲ್ಲಿ ಮುಂಗಾರು ಮಳೆ  ಚುರುಕುಗೊಂಡಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಈ ನಡುವೆ ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ, ಲಿಂಗನಮಕ್ಕಿ ಜಲಾಶಯ ಒಳಹರಿವಿನಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಹೊಸನಗರ ತಾಲೂಕಿನ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ, ಡ್ಯಾಂ ಒಳಹರಿವಿನಲ್ಲಿ ನಿರಂತರವಾಗಿ ಏರಿಕೆ ಕಂಡುಬರಲಾರಂಭಿಸಿದೆ.

ಇದರಿಂದ ಡ್ಯಾಂ ಗರಿಷ್ಠ ಮಟ್ಟ ತಲುಪಲು ಇನ್ನೂ ಎರಡು ಅಡಿ ಬಾಕಿಯಿರುವಂತೆ, ಲಿಂಗನಮಕ್ಕಿ ಡ್ಯಾಂನಿಂದ ನೀರು ಹೊರ ಬಿಡಲಾಗುತ್ತಿದೆ. ಈ ಕಾರಣದಿಂದ ವಿಶ್ವ ವಿಖ್ಯಾತ ಜೋಗ ಜಲಪಾತ ಮತ್ತೆ ಮೈದುಂಬಿ ಹರಿಯಲಾರಂಭಿಸಿದೆ. ಜಲಧಾರೆಯ ವೈಭೋಗಕ್ಕೆ ಸಾಕ್ಷಿಯಾಗಿದೆ.

Shivamogga, August 19: Water is being released from Linganamakki Dam from August 19. This has further enhanced the splendor of the waterfall at the world-famous Jog Falls. The Sharavathi Valley region is also receiving good rains. Due to this, the Jog Falls have literally started gushing. The Raja, Rani, Roarer, and Rocket Falls have started gushing. Tourists have started rushing to Jog Falls to watch the water spectacle.

Will the CM and ministers come at least this time to dedicate bagina the state's largest dam to Linganamakki? ರಾಜ್ಯದ ಅತೀ ದೊಡ್ಡ ಡ್ಯಾಂ ಲಿಂಗನಮಕ್ಕಿಗೆ ಬಾಗಿನ ಅರ್ಪಿಸಲು ಈ ಬಾರಿಯಾದರೂ ಆಗಮಿಸುವರೆ ಸಿಎಂ, ಸಚಿವರು? Previous post linganamakki dam | ರಾಜ್ಯದ ಅತೀ ದೊಡ್ಡ ಡ್ಯಾಂ ಲಿಂಗನಮಕ್ಕಿಗೆ ಬಾಗಿನ ಅರ್ಪಿಸಲು ಈ ಬಾರಿಯಾದರೂ ಆಗಮಿಸುವರೆ ಸಿಎಂ, ಸಚಿವರು?
Police parade in Kargal town! ಕಾರ್ಗಲ್ ಪಟ್ಟಣದಲ್ಲಿ ಪೊಲೀಸರ ಪಥ ಸಂಚಲನ Next post kargal | ಕಾರ್ಗಲ್ ಪಟ್ಟಣದಲ್ಲಿ ಪೊಲೀಸರ ಪಥ ಸಂಚಲನ!