Hosanagara : Two accused arrested for stealing from houses! ಹೊಸನಗರ : ಮನೆಗಳಲ್ಲಿ ಕಳವು ಮಾಡಿದ್ದ ಗದಗ ಜಿಲ್ಲೆ ಲಕ್ಷ್ಮೇಶ್ವರದ ಇಬ್ಬರು ಆರೋಪಿಗಳು ಅರೆಸ್ಟ್!

hosanagara news | ಹೊಸನಗರ : ಮನೆಗಳಲ್ಲಿ ಕಳವು ಮಾಡಿದ್ದ ಗದಗ ಜಿಲ್ಲೆ ಲಕ್ಷ್ಮೇಶ್ವರದ ಇಬ್ಬರು ಆರೋಪಿಗಳು ಅರೆಸ್ಟ್!

ಹೊಸನಗರ (ಶಿವಮೊಗ್ಗ), ಆಗಸ್ಟ್ 26: ಮನೆಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ, ಇಬ್ಬರನ್ನು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ನಿವಾಸಿಗಳಾದ ಹನುಮಂತ ತೊಳೆಯಪ್ಪ ಕುಂಚಿಕೊರವರ (26) ಹಾಗೂ  ಮಂಜುನಾಥ ಬಿಸುಕಲ್ಲೊಡ್ಡರ (36) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ್ ಕಲಗುಜ್ಜಿ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್’ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್ ಮೇಲ್ವಿಚಾರಣೆಯಲ್ಲಿ, ಸಬ್ ಇನ್ಸ್’ಪೆಕ್ಟರ್ ಶಿವಾನಂದ ಕೋಳಿ, ಸಿಬ್ಬಂದಿಗಳಾದ ಎಎಸ್ಐ ಕುಮಾರ್ ಟಿ, ಶೇಖ್ ಅಮೀರ್ ಜಾನ್,

ಹೆಚ್ ಸಿ ಗಳಾದ ಕಿರಣ್ ಕುಮಾರ್, ವಿಶ್ವನಾಥ್, ಪ್ರವೀಣ್ ಕುಮಾರ್, ಶಿವಕುಮಾರ್ ನಾಯ್ಕ್, ಪಿಸಿಗಳಾದ ರವಿಚಂದ್ರ, ಸುಜಯ್ ಕುಮಾರ್, ಪ್ರಜ್ವಲ್, ಸಚಿನ್, ಚಾಲಕ ಶಶಿಧರ್ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ಧಾರೆ.

ಪ್ರಕರಣದ ಹಿನ್ನೆಲೆ : 21.08.2025 ಹೊಸನಗರ ತಾಲೂಕು ನಗರ ಹೋಬಳಿಯ ಕಬಳೆ ಗ್ರಾಮದ ರಿಚರ್ಡ್ ಡಿಸೋಜಾ ಹಾಗೂ ಮಾಸ್ತಿಕಟ್ಟೆಯ ಶೇಷಾದ್ರಿ ಎಂಬುವರ ಮನೆಗಳಲ್ಲಿ ಕಳವು ಕೃತ್ಯ ನಡೆದಿತ್ತು.

ರಿಚರ್ಡ್ ಡಿಸೋಜಾ ಮನೆಯಲ್ಲಿ 31 ಗ್ರಾಂ ತೂಕದ 1,66,000 ರೂ. ಮೌಲ್ಯದ ಚಿನ್ನಾಭರಣ ಹಾಗೂ 70,000 ನಗದು ಕಳವು ಮಾಡಲಾಗಿತ್ತು. ಶೇಷಾದ್ರಿಯವರ ಮನೆಯಲ್ಲಿ 28 ಗ್ರಾಂ ತೂಕದ 1,11,000 ರೂ. ಮೌಲ್ಯದ ಚಿನ್ನಾಭರಣ ಹಾಗೂ 30,000 ನಗದು, 3,000 ರೂ. ಮೌಲ್ಯದ ಬೆಳ್ಳಿ ಆಭರಣ ಕಳವು ಮಾಡಲಾಗಿತ್ತು.

ಈ ಕುರಿತಂತೆ ನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 41/2025 ಹಾಗೂ 42/2025 ರಲ್ಲಿ, ಕಲಂ 331 (1) ಹಾಗೂ 305 (ಎ) ಬಿ.ಎನ್.ಎಸ್ – 2023 ರೀತ್ಯಾ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.

Hosanagar (Shivamogga), August 26: Two people were arrested by the Hosanagar Taluk Nagar Police Station in Shivamogga district on charges of stealing jewellery and cash worth lakhs of rupees from a house.

Meat sale banned in Shivamogga city on August 27th! ಶಿವಮೊಗ್ಗ ನಗರದಲ್ಲಿ ಆ.27 ರಂದು ಮಾಂಸ ಮಾರಾಟ ನಿಷೇಧ! Previous post shimoga | ಶಿವಮೊಗ್ಗ ನಗರದಲ್ಲಿ ಆಗಸ್ಟ್ 27 ರಂದು ಮಾಂಸ ಮಾರಾಟ ನಿಷೇಧ!
Live interviews from reputed companies on August 29th at Shivamogga Employment Exchange Office ಶಿವಮೊಗ್ಗ ಉದ್ಯೋಗ ವಿನಿಮಯ ಕಚೇರಿಯಲ್ಲಿ ಪ್ರತಿಷ್ಠಿತ ಕಂಪೆನಿಗಳಿಂದ ಆಗಸ್ಟ್ 29 ರಂದು ನೇರ ಸಂದರ್ಶನ Next post shimoga news | ಶಿವಮೊಗ್ಗ ಉದ್ಯೋಗ ವಿನಿಮಯ ಕಚೇರಿಯಲ್ಲಿ ಪ್ರತಿಷ್ಠಿತ ಕಂಪೆನಿಗಳಿಂದ ಆಗಸ್ಟ್ 29 ರಂದು ನೇರ ಸಂದರ್ಶನ