
missing person | ಕಿವುಡ – ಮೂಗ ಯುವಕ ಕಾಣೆ : ಪತ್ತೆಗೆ ಸಹಕರಿಸಲು ಪೊಲೀಸ್ ಇಲಾಖೆ ಮನವಿ
ಶಿವಮೊಗ್ಗ (shivamogga), ಆಗಸ್ಟ್ 28: ಹುಟ್ಟಿನಿಂದ ಕಿವುಡ – ಮೂಗನಾಗಿರುವ ಯುವಕನೋರ್ವ ನಾಪತ್ತೆಯಾಗಿದ್ದು, ಈತನ ಪತ್ತೆಗೆ ಸಹಕರಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಶರತ್ ಎಂ ಎಂ (19) ವರ್ಷ ನಾಪತ್ತೆಯಾದ ಯುವಕ ಎಂದು ಗುರುತಿಸಲಾಗಿದೆ. ಈತ ಮೈಸೂರಿನ ಯಾದವಗಿರಿ ಕೈಗಾರಿಕಾ ಪ್ರದೇಶದ ನ್ಯಾಷನಲ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಳೆದ ಜುಲೈ 27 ರಂದು ಕಾಣೆಯಾಗಿದ್ದಾನೆ.
ಶಿವಮೊಗ್ಗ ಜಿಲ್ಲೆಯ ಮಂಜಪ್ಪ ಎಂಬುವವರ ಏಕೈಕ ಪುತ್ರನಾಗಿದ್ದು, ಈ ಹಿಂದೆ ಭದ್ರಾವತಿಯ ಕಿವುಡ ಮೂಗರ ಶಾಲೆಯಲ್ಲಿ ವ್ಯಾಸಂಗ ಮಾಡಿರುತ್ತಾನೆ.
ಕಾಣೆಯಾದ ಶರತ್ ಸುಮಾರು 149 ಸೆಂ.ಮೀ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕೋಲುಮುಖ, ಕಪ್ಪು ಕೂದಲು ಹೊಂದಿರುತ್ತಾನೆ.ಎಡಗೈಲಿ ಅಮ್ಮ ಎಂಬ ಹಚ್ಚೆ ಇರುತ್ತದೆ. ಬಲಗೈಲಿ ಬೆಳ್ಳಿ ಕಡಗ, ಕುತ್ತಿಗೆಯಲ್ಲಿ ಬೆಳ್ಳಿ ಸರ, ಬಲಗೈಯಲ್ಲಿ ಬೆಳ್ಳಿ ಉಂಗುರ ಧರಿಸಿರುತ್ತಾನೆ. ಕಾಣೆಯಾದ ವೇಳೆ ತೆಳು ನೀಲಿ ಬಣ್ಣದ ಶರ್ಟ್, ಕಪ್ಪು ಬಣ್ಣದ ನಿಕ್ಕರ್ ಧರಿಸಿರುತ್ತಾನೆ.
ಈತನ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ವಿ.ವಿ.ಪುರಂ ಪೊಲೀಸ್ ಠಾಣೆ ಅಥವಾ ಮೈಸೂರು ನಗರದ ಪೊಲೀಸ್ ಕಂಟ್ರೋಲ್ ರೂಂ, ದೂ.ಸಂ: 0821-2418314, ಪೊಲೀಸ್ ನಿರೀಕ್ಷಕರ ಸಂಖ್ಯೆ 9480802238 ನ್ನು ಸಂಪರ್ಕಿಸಬಹುದೆಂದು ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
Shivamogga, August 28: A young man who was born deaf and dumb has gone missing and the police department has appealed for help in finding him. The missing youth has been identified as Sharath M. M. (19). He was studying at the National Association for the Blind in Yadavagiri Industrial Area, Mysore and went missing on July 27.