Ganesh idol processions are becoming a platform for harmony between Hindu and Muslim communities in Shivamogga! ಶಿವಮೊಗ್ಗದಲ್ಲಿ ಹಿಂದೂ – ಮುಸ್ಲಿಂ ಸಮಾಜಗಳ ಸೌಹಾರ್ದತೆಗೆ ವೇದಿಕೆಯಾಗುತ್ತಿರುವ ಗಣೇಶಮೂರ್ತಿ ಮೆರವಣಿಗೆಗಳು!

shimoga | ಶಿವಮೊಗ್ಗದಲ್ಲಿ ಹಿಂದೂ – ಮುಸ್ಲಿಂ ಸಮಾಜಗಳ ಸೌಹಾರ್ದತೆಗೆ ವೇದಿಕೆಯಾಗುತ್ತಿರುವ ಗಣೇಶಮೂರ್ತಿ ಮೆರವಣಿಗೆಗಳು!

ಶಿವಮೊಗ್ಗ (shivamogga), ಸೆಪ್ಟೆಂಬರ್ 11: ಶಿವಮೊಗ್ಗ ನಗರದ ವಿವಿಧೆಡೆ ನಡೆಯುತ್ತಿರುವ ಗಣೇಶಮೂರ್ತಿಗಳ ವಿಸರ್ಜನಾ ಪೂರ್ವ ಮೆರವಣಿಗೆಗಳು, ಹಿಂದೂ ಹಾಗೂ ಮುಸ್ಲಿಂ ಸಮಾಜಗಳ ಸೌಹಾರ್ದತೆ – ಭಾವೈಕ್ಯತೆಗೆ ವೇದಿಕೆಗಳಾಗುತ್ತಿವೆ.

ಸೆಪ್ಟೆಂಬರ್ 10 ರಂದು ಕೂಡ ಶಿವಮೊಗ್ಗ ನಗರದ ಎರಡು ಕಡೆ ನಡೆದ ಗಣೇಶಮೂರ್ತಿಗಳ ಮೆರವಣಿಗೆ ವೇಳೆ, ಎರಡೂ ಸಮುದಾಯಗಳ ಸೌಹಾರ್ದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಈ ಕುರಿತಂತೆ ಸೆಪ್ಟೆಂಬರ್ 11 ರಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯೂ ಮಂಡ್ಲಿಯ ಶ್ರೀ ಯುವಕರ ಸಂಘದ ವಿದ್ಯಾ ಗಣಪತಿ ಮೆರವಣಿಗೆ ವೇಳೆ, ಅಯೂಬ್ ಹಾಗೂ ಜಬಿ ನೇತೃತ್ವದ ಸ್ಥಳೀಯ ಮುಸ್ಲಿಂ ಸಮಾಜದ ನಿವಾಸಿಗಳು ಗಣಪತಿಗೆ ಹೂವಿನ ಮಾಲೆ ಹಾಕಿ ಶುಭ ಕೋರಿದ್ದಾರೆ.

ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಇಂದಿರಾ ನಗರದ ವೀರ ಕೇಸರಿ ಯುವಕರ ಗಣಪತಿ ಮೆರವಣಿಗೆ ವೇಳೆ ಸ್ಥಳೀಯ ತಾಜುದ್ದೀನ್ ಅಕುರ್ ಖಾನ್ ಕಮಿಟಿಯ ಅಧ್ಯಕ್ಷರಾದ ಸಿಖ್ಬಾತ್, ಪದಾಧಿಕಾರಿಗಳಾದ ಅಮ್ಜದ್, ರಫೀಕ್ ಪಟೇಲ್, ಇರ್ಫಾನ್, ಆಟೋ ಅಸ್ಲಾಂ, ಮುನ್ನ, ಇರ್ಫಾನ್ ಸಲೀಂ ಮತ್ತು ಗ್ರಾಮಸ್ಥರು ಗಣಪತಿ ಮೂರ್ತಿಗೆ ಹೂವಿನ ಮಾಲೆ ಹಾಕಿ ಸೌಹಾರ್ದತೆ ಮೆರೆದಿದ್ದಾರೆ.

Shivamogga, September 11: The pre-immersion processions of Ganesh idols taking place in various parts of Shivamogga city are becoming platforms for harmony and unity between Hindu and Muslim communities.

On September 10, the Ganesh idol procession held on both sides of Shivamogga city also witnessed a harmonious atmosphere between the two communities. This was informed in a press release issued by the Police Department on September 11.

ಶಿಕಾರಿಪುರ : shikaripura - Those who went to the temple ended up in the cemetery: A young man and a young woman who were engaged to be married met a tragic end! ದೇವಾಲಯಕ್ಕೆ ಹೊರಟವರು ಸ್ಮಶಾನಕ್ಕೆ : ವಿವಾಹ ನಿಶ್ಚಯವಾಗಿದ್ದ ಯುವಕ – ಯುವತಿಯ ದಾರುಣ ಅಂತ್ಯ! Previous post shikaripura | ಶಿಕಾರಿಪುರ | ದೇವಾಲಯಕ್ಕೆ ಹೊರಟವರು ಮಸಣಕ್ಕೆ..! : ವಿವಾಹ ನಿಶ್ಚಯವಾಗಿದ್ದ ಯುವಕ – ಯುವತಿಯ ದಾರುಣ ಅಂತ್ಯ!!
shimoga | power cut news | ಶಿವಮೊಗ್ಗ ನಗರ, ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ : ಯಾವಾಗ? ಎಲ್ಲೆಲ್ಲಿ Power outage in various parts of Shivamogga city and taluk: When? Where? Next post shimoga | power cut news | ಶಿವಮೊಗ್ಗ ನಗರದ 40 ಕ್ಕೂ ಅಧಿಕ ಪ್ರದೇಶಗಳಲ್ಲಿ ಸೆಪ್ಟೆಂಬರ್ 13 ರಂದು ವಿದ್ಯುತ್ ವ್ಯತ್ಯಯ!