Shivamogga : A lone woman was brutally murdered in Kunsi village! ಶಿವಮೊಗ್ಗ : ಕುಂಸಿ ಗ್ರಾಮದಲ್ಲಿ ಒಂಟಿ ಮಹಿಳೆಯ ಕೊಲೆ!

shimoga | kumsi | ಶಿವಮೊಗ್ಗ : ಕುಂಸಿ ಗ್ರಾಮದಲ್ಲಿ ಒಂಟಿ ಮಹಿಳೆಯ ಕೊಲೆ!

ಶಿವಮೊಗ್ಗ (shivamogga), ಅಕ್ಟೋಬರ್ 3: ಮನೆಯಲ್ಲಿಯೇ ಮಹಿಳೆಯೋರ್ವರನ್ನು ಇರಿದು ಹತ್ಯೆ ಮಾಡಿರುವ ಘಟನೆ, ಶಿವಮೊಗ್ಗ ತಾಲೂಕಿನ ಕುಂಸಿ ಗ್ರಾಮದ ರಜಪೂತರ ಬೀದಿಯಲ್ಲಿ ನಡೆದಿದ್ದು, ಅಕ್ಟೋಬರ್ 2 ರ ಬೆಳಿಗ್ಗೆ ಕೃತ್ಯ ಬೆಳಕಿಗೆ ಬಂದಿದೆ.  

ಬಸಮ್ಮ (65) ಕೊಲೆಗೀಡಾದ ಮಹಿಳೆ ಎಂದು ಗುರುತಿಸಲಾಗಿದೆ. ಮಹಿಳೆಯು ಒಬ್ಬಂಟಿಯಾಗಿ ಮನೆಯಲ್ಲಿ ವಾಸವಿದ್ದರು. ಬೆಳಿಗ್ಗೆ ಬಸಮ್ಮರವರು ಮನೆಯಿಂದ ಹೊರಬರದ ಹಿನ್ನೆಲೆಯಲ್ಲಿ, ನೆರೆಹೊರೆಯವರು ಮನೆ ಬಳಿ ಆಗಮಿಸಿ ಪರಿಶೀಲಿಸಿದಾಗ, ಕೊಲೆ ಕೃತ್ಯ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್, ಡಿವೈಎಸ್ಪಿ ಸಂಜೀವ್ ಕುಮಾರ್, ಇನ್ಸ್’ಪೆಕ್ಟರ್ ದೀಪಕ್, ಸೇರಿದಂತೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ತಂಡ ಭೇಟಿಯಿತ್ತು ಪರಿಶೀಲನೆ ನಡಸಿದ್ದಾರೆ.

ಆಸ್ತಿ ವಿವಾದ, ಕೌಟಂಬಿಕ ಕಲಹದ ಹಿನ್ನೆಲೆಯಲ್ಲಿ ಬಸಮ್ಮರ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಸಂಬಂಧ ಮೃತಳ ಸಹೋದರ ನೀಡಿರುವ ದೂರಿನ ಆಧಾರದ ಮೇಲೆ ಕುಂಸಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.

Shivamogga, October 3: The incident of stabbing a woman to death in her home took place on Rajputara Street in Kumsi village in Shivamogga taluk. The crime came to light on the morning of October 2.

Shimoga: Mahatma Gandhi - Lal Bahadur Shastri Birth Anniversary Ceremony ಶಿವಮೊಗ್ಗ : ಮಹಾತ್ಮ ಗಾಂಧೀಜಿ – ಲಾಲ್ ಬಹದ್ಧೂರ್ ಶಾಸ್ತ್ರೀ ಜನ್ಮ ದಿನಾಚರಣೆ ಸಮಾರಂಭ Previous post shimoga | ಶಿವಮೊಗ್ಗ : ಮಹಾತ್ಮ ಗಾಂಧೀಜಿ – ಲಾಲ್ ಬಹದ್ದೂರ್ ಶಾಸ್ತ್ರೀ ಜನ್ಮ ದಿನಾಚರಣೆ ಸಮಾರಂಭ
Revision of the jurisdiction of Bengaluru and Tumkur Municipal Corporations is complete: Still incomplete in Shivamogga – Will CM Siddaramaiah take note? ಬೆಂಗಳೂರು - ತುಮಕೂರು ಪಾಲಿಕೆಗಳ ವ್ಯಾಪ್ತಿ ಪರಿಷ್ಕರಣೆ ಪೂರ್ಣ : ಶಿವಮೊಗ್ಗದಲ್ಲಿ ಇನ್ನೂ ಅಪೂರ್ಣ – ಗಮನಿಸುವರೆ ಸಿಎಂ ಸಿದ್ದರಾಮಯ್ಯ? Next post shimoga | ಬೆಂಗಳೂರು, ತುಮಕೂರು ಪಾಲಿಕೆಗಳ ವ್ಯಾಪ್ತಿ ಪರಿಷ್ಕರಣೆ ಪೂರ್ಣ : ಶಿವಮೊಗ್ಗದಲ್ಲಿ ಇನ್ನೂ ಅಪೂರ್ಣ – ಗಮನಿಸುವರೆ ಸಿಎಂ ಸಿದ್ದರಾಮಯ್ಯ?