Shivamogga : Mother commits suicide after killing daughter! ಶಿವಮೊಗ್ಗ : ಮಗಳ ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ!

shimoga crime news | ಶಿವಮೊಗ್ಗ : ಮಗಳ ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ!

ಶಿವಮೊಗ್ಗ (shivamogga), ಅಕ್ಟೋಬರ್ 3: ಮಾರಕಾಸ್ತ್ರದಿಂದ ಹೊಡೆದು ಮಗಳನ್ನು ಕೊಲೆ ಮಾಡಿದ ತಾಯಿಯೋರ್ವಳು, ನಂತರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ, ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆ ಕ್ವಾಟರ್ಸ್ ನಲ್ಲಿ ನಡೆದಿದ್ದು, ಅಕ್ಟೋಬರ್ 3  ರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.

ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿರುವ ರಾಮಣ್ಣ ಎಂಬುವರ ಪತ್ನಿ ಶೃತಿ (38) ಹಾಗೂ 6 ನೇ ತರಗತಿ ಓದುತ್ತಿದ್ದ ಪುತ್ರಿ ಪೂರ್ವಿಕಾ (12) ಮೃತಪಟ್ಟವರೆಂದು ಗುರುತಿಸಲಾಗಿದೆ. ಅಕ್ಟೋಬರ್ 2 ರ ರಾತ್ರಿ ಘಟನೆ ನಡೆದಿದೆ.

ರಾತ್ರಿ ಪಾಳೀಯ ಕೆಲಸಕ್ಕೆ ತೆರಳಿದ್ದ ರಾಮಣ್ಣ ಅವರು, ಆಸ್ಪತ್ರೆಯಲ್ಲಿ ಕರ್ತವ್ಯ ಮುಗಿಸಿ ಬೆಳಿಗ್ಗೆ ಮನೆಗೆ ಹಿಂದಿರುಗಿದ್ದಾರೆ. ಈ ವೇಳೆ ಮನೆಯ ಬಾಗಿಲು ತೆರೆದಿಲ್ಲ. ನೆರೆಹೊರೆಯವರೊಂದಿಗೆ ಬಾಗಿಲು ತೆರೆದು ಪರಿಶೀಲಿಸಿದಾಗ, ಪತ್ನಿ ಹಾಗೂ ಮಗಳು ಮೃತಪಟ್ಟಿರುವುದು ಕಂಡುಬಂದಿದೆ.

ಶೃತಿ ಅವರು ಮಗಳ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುವುದು ಸ್ಪಷ್ಟವಾಗಿಲ್ಲ. ಆದರೆ ಶೃತಿ ಅವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಕುರಿತಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Shivamogga, October 3: The heartbreaking incident of a mother murdering her daughter by beating her with a deadly weapon and then committing suicide by hanging herself took place at the Meggan Hospital Quarters in Shivamogga city. The incident came to light on the morning of October 3. District Protection Officer GK Mithun Kumar visited the scene and inspected it. A case has been registered at Doddapet police station in this regard and the police are continuing the investigation.

Revision of the jurisdiction of Bengaluru and Tumkur Municipal Corporations is complete: Still incomplete in Shivamogga – Will CM Siddaramaiah take note? ಬೆಂಗಳೂರು - ತುಮಕೂರು ಪಾಲಿಕೆಗಳ ವ್ಯಾಪ್ತಿ ಪರಿಷ್ಕರಣೆ ಪೂರ್ಣ : ಶಿವಮೊಗ್ಗದಲ್ಲಿ ಇನ್ನೂ ಅಪೂರ್ಣ – ಗಮನಿಸುವರೆ ಸಿಎಂ ಸಿದ್ದರಾಮಯ್ಯ? Previous post shimoga | ಬೆಂಗಳೂರು, ತುಮಕೂರು ಪಾಲಿಕೆಗಳ ವ್ಯಾಪ್ತಿ ಪರಿಷ್ಕರಣೆ ಪೂರ್ಣ : ಶಿವಮೊಗ್ಗದಲ್ಲಿ ಇನ್ನೂ ಅಪೂರ್ಣ – ಗಮನಿಸುವರೆ ಸಿಎಂ ಸಿದ್ದರಾಮಯ್ಯ?
Date fixed for Shivamogga Marikamba Devi's festival! ಶಿವಮೊಗ್ಗ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಾಂಕ ಫಿಕ್ಸ್! Next post shimoga marikamba jatre | ಶಿವಮೊಗ್ಗ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವಕ್ಕೆ ದಿನಾಂಕ ಫಿಕ್ಸ್!