Shivamogga Cyber Crime Station police return Rs 19 lakhs to the heirs who had been robbed of their belongings! ವಂಚಕರ ಪಾಲಾಗಿದ್ದ 19 ಲಕ್ಷ ರೂ. ಮರಳಿ ವಾರಸುದಾರರಿಗೆ ಕೊಡಿಸಿದ ಶಿವಮೊಗ್ಗ ಸೈಬರ್ ಕ್ರೈಂ ಠಾಣೆ ಪೊಲೀಸರು!

shimoga news | ಶಿವಮೊಗ್ಗ ಸೈಬರ್ ಕ್ರೈಂ ಠಾಣೆ ಪೊಲೀಸರ ಯಶಸ್ವಿ ತನಿಖೆ..!

ಶಿವಮೊಗ್ಗ (shivamogga), ಅಕ್ಟೋಬರ್ 20: ವ್ಯಾಪಕ ಜಾಗೃತಿಯ ಹೊರತಾಗಿಯೂ, ಸೈಬರ್ ವಂಚನೆ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ನಾನಾ ರೂಪ, ವೇಷಗಳಲ್ಲಿ ವಂಚಕರು ನಾಗರೀಕರನ್ನು ಯಾಮಾರಿಸಿ, ಹಣ ಸುಲಿಗೆ ಮಾಡುತ್ತಿದ್ದಾರೆ. ಈ ರೀತಿಯ ಪ್ರಕರಣಗಳಲ್ಲಿ ವಂಚಕರ ಪಾಲಾದ ಹಣ, ವಾರಸುದಾರರಿಗೆ ಮರಳಿ ಲಭಿಸುವುದು ಅತ್ಯಂತ ವಿರಳ.

ಆದರೆ ಡಿಜಿಟಲ್ ಅರೆಸ್ಟ್ ಪ್ರಕರಣವೊಂದರಲ್ಲಿ ಸೈಬರ್ ವಂಚಕರ ಪಾಲಾಗಿದ್ದ ಬರೋಬ್ಬರಿ 19 ಲಕ್ಷ ರೂಪಾಯಿಗಳನ್ನು, ಶಿವಮೊಗ್ಗ ಸೈಬರ್ ಕ್ರೈಂ ಠಾಣೆ ಪೊಲೀಸರು ವಾರಸುದಾರರಿಗೆ ವಾಪಾಸ್ ಕೊಡಿಸುವಲ್ಲಿ ಯಶಸ್ವಿಯಾದ ಘಟನೆ ನಡೆದಿದೆ.

ಏನೀದು ಪ್ರಕರಣ? : ಶಿವಮೊಗ್ಗ ನಗರದ ದೂರುದಾರರಾದ 51 ವರ್ಷದ ವ್ಯಕ್ತಿಯೋರ್ವರಿಗೆ, 17-9-2025 ರಂದು ವ್ಯಾಟ್ಸಾಪ್ ಮೂಲಕ ವಂಚಕನೋರ್ವ ಕರೆ ಮಾಡಿದ್ದ. ಮುಂಬೈನ ಕೊಲಾಬ ಪೊಲೀಸ್ ಠಾಣೆ ಇನ್ಸ್’ಪೆಕ್ಟರ್ ಎಂದು ಪರಿಚಯಿಸಿಕೊಂಡಿದ್ದ.

‘ನಿಮ್ಮ ಆಧಾರ್ ಕಾರ್ಡ್ ಬಳಸಿ ಮುಂಬೈನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಖಾತೆ ತೆರೆದು, ವಂಚಕನೋರ್ವನಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ನಿಮ್ಮ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ನೀವು ಮುಂಬೈಗೆ ಬರಬೇಕು. ಇದು ಅಂತಾರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯವಾಗಿರುವುದರಿಂದ, ಸದರಿ ವಿಷಯವನ್ನು ಯಾರಿಗೂ ತಿಳಿಸದಂತೆ’ ವಂಚಕನು ಸೂಚಿಸಿದ್ದಾನೆ.

ತದನಂತರ ಮಾರನೆಯ ದಿನ ಪೊಲೀಸ್ ಸಮವಸ್ತ್ರದಲ್ಲಿದ್ದ ಮತ್ತೋರ್ವ ವಂಚಕನು ದೂರುದಾರರಿಗೆ, ವ್ಯಾಟ್ಸಾಪ್ ವಿಡಿಯೋ ಕರೆ ಮಾಡಿದ್ದಾನೆ. ‘ನಿಮ್ಮನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಜಡ್ಜ್ ಅವರ ಸಮ್ಮುಖದಲ್ಲಿ ಹಾಜರು ಪಡಿಸಲಾಗುತ್ತಿದೆ. ಜೊತೆಗೆ ಜಾಮೀನು ತೆಗೆದುಕೊಳ್ಳುತ್ತಿದ್ದೆವೆ’ ಎಂದು ತಿಳಿಸಿದ್ದಾನೆ.

ಕೋರ್ಟ್ ಹಾಲ್ ಮಾದರಿಯ ಕೊಠಡಿಯಲ್ಲಿ ನ್ಯಾಯಾಧೀಶರ ರೀತಿ ಕುಳಿತ್ತಿದ್ದ ಇನ್ನೋರ್ವ ವಂಚಕ, ಇವರೊಂದಿಗೆ ಮಾತನಾಡಿದ್ದಾನೆ. ನಿಮ್ಮ ಬ್ಯಾಂಕ್ ಲಾಕರ್ ನಲ್ಲಿರುವ ಚಿನ್ನದ ಮೇಲೆ ಸಾಲ ತೆಗೆದು, ಅದರಲ್ಲಿ ಅರ್ಧದಷ್ಟು ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಹಾಕಿಕೊಸಿಕೊಳ್ಳಿ ಎಂದು ಸೂಚಿಸಿದ್ದಾನೆ.

ಅದರಂತೆ ದೂರುದಾರ ವ್ಯಕ್ತಿಯು, ಬ್ಯಾಂಕ್ ನಲ್ಲಿ ಸಾಲ ಮಾಡಿ 19 ಲಕ್ಷ ರೂ.ಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ತದನಂತರ ವಂಚಕರ ಸೂಚನೆಯಂತೆ ಅವರು ಸೂಚಿಸಿದ ಬ್ಯಾಂಕ್ ಖಾತೆಗೆ, ತಮ್ಮ ಖಾತೆಯಲ್ಲಿದ್ದ 19 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದಾರೆ.

ಸದರಿ ವಿಚಾರವನ್ನು ದೂರುದಾರರು ತಮ್ಮ ಮಗಳಿಗೆ ತಿಳಿಸಿದ್ದು, ವಂಚಕರ ಜಾಲದಿಂದ ಮೋಸ ಹೋಗಿರುವುದು ಗೊತ್ತಾಗಿದೆ. ಈ ಕುರಿತಂತೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ತನಿಖೆಗಾಗಿ ಎಸ್ಪಿ ಜಿ ಕೆ ಮಿಥುನ್ ಕುಮಾರ್, ಹೆಚ್ಚುವರಿ ಎಸ್ಪಿಗಳಾದ ಎ ಜಿ ಕಾರ್ಯಪ್ಪ, ರಮೇಶ್ ಕುಮಾರ್ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆ ಡಿವೈಎಸ್ಪಿ ಕೃಷ್ಣಮೂರ್ತಿ, ಇನ್ಸ್’ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.

ಸದರಿ ತಂಡವು ತ್ವರಿತ ಹಾಗೂ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ವಂಚಕರ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿಸುವಲ್ಲಿ ಸಫಲವಾಗಿದೆ. ಸೈಬರ್ ಠಾಣೆ ಪೊಲೀಸರ ಸಮಯ ಪ್ರಜ್ಞೆ, ಸಕಾಲಿಕ ತನಿಖೆಯಿಂದ ವಂಚಕರ ಬ್ಯಾಂಕ್ ಖಾತೆಯಲ್ಲಿದ್ದ 19 ಲಕ್ಷ ರೂ. ಮರಳಿ ದೂರುದಾರರಿಗೆ ತಲುಪುವಲ್ಲಿ ಯಶಸ್ವಿಯಾಗಿದೆ.

shimoga : Despite widespread awareness, the number of cyber fraud cases is increasing day by day. Fraudsters in various forms and disguises are duping citizens and extorting money. In such cases, it is very rare for the money received by the fraudsters to be returned to the heirs.

However, in a digital arrest case, the Shivamogga Cyber ​​Crime Station police succeeded in returning Rs 19 lakh, which was stolen by cyber fraudsters, to the heirs.

Shivamogga: Case of attack on a young man with a machete – four arrested! ಭದ್ರಾವತಿ : ಯುವಕನ ಮೇಲೆ ಮಚ್ಚಿನಿಂದ ದಾಳಿ ಪ್ರಕರಣ – ನಾಲ್ವರ ಬಂಧನ! Previous post bhadravati | ಭದ್ರಾವತಿ | ಹೊಳೆಹೊನ್ನೂರು : ಯುವಕನ ಮೇಲೆ ಮಚ್ಚಿನಿಂದ ದಾಳಿ ಪ್ರಕರಣ – ನಾಲ್ವರ ಬಂಧನ!